Crime News ಕಾಸರಗೋಡು ಅಪರಾಧ ಸುದ್ದಿಗಳು
Team Udayavani, Nov 17, 2023, 9:11 PM IST
ಕಾಡು ಹಂದಿ ಗುಂಡಿಕ್ಕಿ ಕೊಂದು ಮಾಂಸ ಸಾಗಿಸುತ್ತಿದ್ದ: ಇಬ್ಬರ ಬಂಧನ : ಕಾರು, ಬಂದೂಕು, ಗುಂಡು ವಶಕ್ಕೆ
ಕಾಸರಗೋಡು: ಅರಣ್ಯದಿಂದ ಕಾಡು ಹಂದಿಯನ್ನು ಬೇಟೆಯಾಡಿ ಗುಂಡಿಕ್ಕಿ ಕೊಂದು ಮಾಂಸ ಮಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಬೇಡಗ ಪೊಲೀಸರು ಬಂಧಿಸಿದ್ದಾರೆ.
ಬೇಡಗ ಪುತ್ಯಡ್ಕದ ಟಿ.ಕೆ.ಪ್ರಶಾಂತ್ ಕುಮಾರ್(37) ಮತ್ತು ಬೇಡಗ ಕಾಟಿಯಡ್ಕ ಕುವಾರ ಹೌಸ್‌ನ ರಾಧಾಕೃಷ್ಣನ್ ಕೆ(48)ನನ್ನು ಬಂಧಿಸಿದ್ದಾರೆ.
ಕುಂಡಂಕುಳಿಯಿಂದ ಮರುದಡ್ಕಕ್ಕೆ ತೆರಳುತ್ತಿದ್ದಾಗ ಇವರನ್ನು ಬಂಧಿಸಲಾಗಿದೆ. ಇವರು ಸಂಚರಿಸುತ್ತಿದ್ದ ಕಾರು, ಅದರೊಳಗಿದ್ದ ಹಂದಿ ಮಾಂಸ, ಒಂದು ಬಂದೂಕು, ಅದಕ್ಕೆ ಬಳಸುವ 21 ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸ್ಕೂಟರ್ ಕಳವು
ಮಂಜೇಶ್ವರ: ಮನೆಯ ಹಿಂಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರನ್ನು ಕಳವು ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ಹೊಸಬೆಟ್ಟು ಪೊಕ್ಕಿ ನಿವಾಸಿ ಅಬ್ದುಲ್ ಬಶೀರ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಕಿ ತಗಲಿ ವೃದ್ದೆ ಸಾವು
ಮಂಜೇಶ್ವರ: ದೀಪದಿಂದ ಸೀರೆಗೆ ಬೆಂಕಿ ತಗಲಿ ಗಂಭೀರ ಸುಟ್ಟ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯುತ್ತಿದ್ದ ಕುಳೂರು ಪೊಯ್ಯೇಲು ನಿವಾಸಿ ದಿ|ಮದನಪ್ಪ ಶೆಟ್ಟಿ ಅವ ರ ಪತ್ನಿ ಸುನೀತಾ ಎಂ(84) ಸಾವಿಗೀಡಾದರು. ನ.14 ರಂದು ದೇವರ ಕೋಣೆಯಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಸೀರೆಗೆ ದೀಪದಿಂದ ಬೆಂಕಿ ಹತ್ತಿಕೊಂಡು ಗಂಭೀರ ಸುಟ್ಟ ಗಾಯಗೊಂಡಿದ್ದರು.
ಯುವಕನ ಅಪಹರಣ : ನಾಲ್ವರ ಬಂಧನ
ಕಾಸರಗೋಡು: ಪಿಲಿಕ್ಕೋಡೆ ಮಡಿವಯಲಿನ ವೆಂಬಿರಿಞ್ಞನ್ ನಿಧಿನ್(30) ಅವರನ್ನು ನ.15 ರಂದು ರಾತ್ರಿ ಚೆರುವತ್ತೂರು ರೈಲು ನಿಲ್ದಾಣ ಪರಿಸರದಿಂದ ಆಟೋ ರಿಕ್ಷಾದಲ್ಲಿ ಅಪಹರಿಸಿ ಮಾರಕಾಯುಧಗಳಿಂದ ಹಲ್ಲೆ ಮಾಡಿ, ಅವರ ಕೈಯಲ್ಲಿದ್ದ 1800 ರೂ. ನಗದು ಮತ್ತು ಮೊಬೈಲ್ ಫೋನ್ ಎಗರಿಸಿದ ಬಳಿಕ ಅವರನ್ನು ರಸ್ತೆ ಬದಿಯಲ್ಲಿ ತಳ್ಳಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಚೆರುವತ್ತೂರು ಮಲ್ಲಾಕುದಿರಿನ ಎಂ.ಝಲ್ಪಿàಕರ್(27), ಮುಹಮ್ಮದ್ ಶರೀಫ್(30), ಚೆರುವತ್ತೂರು ಪಿಲಾವಳಪ್ಪಿನ ಮೊಹಮ್ಮದ್ ಅನಸ್(20) ಮತ್ತು ಚೆರುವತ್ತೂರು ರಾಜೇಂದ್ರ ಕ್ವಾರ್ಟರ್ಸ್‌ನ ಮೊಹಮ್ಮದ್ ಸಿದ್ದೀಕ್(23)ನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ.
ಮನೆಯಿಂದ ಕಳವಿಗೆ ಯತ್ನ
ಕುಂಬಳೆ:ಪಚ್ಚಂಬಳ ಕಾಂದಲ್‌ನ ಅಬ್ದುಲ್ ರಹಿಮಾನ್ ಅವರ ಮನೆಯಿಂದ ಕಳವಿಗೆ ಯತ್ನಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯೊಳಗ್ಗೆ ನುಗ್ಗಿ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದು, ಯಾವುದೇ ವಸ್ತುಗಳನ್ನು ಕಳವು ಮಾಡಿಲ್ಲ.
ಅಂಗಡಿಗೆ ನುಗ್ಗಿ ದಾಂಧಲೆ : ಕೇಸು ದಾಖಲು
ಕುಂಬಳೆ: ಕಟ್ಟತ್ತಡ್ಕದಲ್ಲಿರುವ ತೆಂಗಿನ ಕಾಯಿ ಖರೀದಿ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಗಣೇಶನ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಲಾರಿ ಢಿಕ್ಕಿ : ವೃದ್ಧನಿಗೆ ಗಾಯ
ಕುಂಬಳೆ: ಆರಿಕ್ಕಾಡಿ ಜಂಕ್ಷನ್‌ನಲ್ಲಿ ನಡೆದು ಹೋಗುತ್ತಿದ್ದಾಗ ಹಾಲು ಸಾಗಿಸುತ್ತಿದ್ದ ಲಾರಿ ಢಿಕ್ಕಿ ಹೊಡೆದು ಆರಿಕ್ಕಾಡಿ ನಿವಾಸಿ ಅಬ್ದುಲ್ಲ(69) ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.