Crime News: ಕಾಸರಗೋಡು ಅಪರಾಧ ಸುದ್ದಿಗಳು
Team Udayavani, May 21, 2024, 9:48 PM IST
ಮನೆಯಿಂದ ಕಳವು : ಬಿಗ್ ಟ್ವಿಸ್ಟ್
ಕಳವಾದ ಚಿನ್ನ ಮನೆಯಲ್ಲೇ ಪತ್ತೆ
ಕಾಸರಗೋಡು: ಮೊಗ್ರಾಲ್‌ಪುತ್ತೂರು ಪೇಟೆಯ ಮಸೀದಿ ಪರಿಸರದ ಫೈಝಲ್ ಮಂಜಿಲ್‌ನ ಇಬ್ರಾಹಿಂ ಅವರ ಮನೆಯಿಂದ ನಡೆದ ಕಳವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಲಭಿಸಿದೆ.
ಕಳವುಗೈಯ್ಯಲಾಗಿದೆ ಎಂದು ಹೇಳಲಾದ 18.63 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳು ಮನೆಯೊಳಗೇ ಭದ್ರವಾಗಿ ಪತ್ತೆಯಾಗಿದೆ.
ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿದ್ದ ಎಲ್ಲಾ ಕಪಾಟುಗಳನ್ನು ಒಡೆದು ಅದರೊಳಗಿದ್ದ ಸಾಮಗ್ರಿಗಳನ್ನೆಲ್ಲವನ್ನೂ ಹೊರಕ್ಕೆ ಎಸೆದು ಚೆಲ್ಲಾಪಿಲ್ಲಿಗೊಳಿಸಿದ್ದರು. ಆ ಬಗ್ಗೆ ನೀಡಲಾದ ದೂರಿನಂತೆ ಕಾಸರಗೋಡು ಪೊಲೀಸರು ಹಾಗು ಬೆರಳ ಗುರುತು ತಜ್ಞರು ಚೆಲ್ಲಾಪಿಲ್ಲಿಗೊಳಿಸಿದ ಸಾಮಗ್ರಿಗಳನ್ನು ಪರಿಶೀಲಿಸಿದಾಗ ಕಪಾಟುಗಳಿಂದ ಹೊರಕ್ಕೆ ಎಸೆಯಲ್ಪಟ್ಟ ಸಾಮಗ್ರಿಗಳ ಅಡಿ ಭಾಗದಲ್ಲಿ ಕಳವಾಗಿದೆ ಎನ್ನಲಾದ ಚಿನ್ನದ ಒಡವೆ ಪತ್ತೆಯಾಯಿತು. ಚಿನ್ನದ ಒಡವೆಗಳು ಪೆಟ್ಟಿಗೆಯಲ್ಲಿರಿಸಲಾಗಿತ್ತು. ಚಿನ್ನದ ಒಡವೆ ಲಭಿಸಿದರೂ, ಮನೆ ಬಾಗಿಲು ಮುರಿದು ಅಕ್ರಮವಾಗಿ ಒಳಪ್ರವೇಶಿಸಿ ಕಳವಿಗೆ ಯತ್ನಿಸಿದ ಪ್ರಕರಣ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಜ್ವರದಿಂದ ಕೊಲ್ಲಿ ಉದ್ಯೋಗಿ ಸಾವು
ಕಾಸರಗೋಡು: ಜ್ವರದಿಂದ ಬಳಲುತ್ತಿದ್ದ ಕೊಲ್ಲಿ ಉದ್ಯೋಗಿ, ನಾಲ್ಕನೇ ಮೈಲು ನಿವಾಸಿ, ಪಚ್ಚಕ್ಕಾಡಿನಲ್ಲಿ ವಾಸಿಸುವ ಮೊಹಮ್ಮದ್ ಶರೀಫ್ ಕೆ(57) ಸಾವಿಗೀಡಾದರು. ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು.
ವಿದೇಶಕ್ಕೆ ಮಾನವ ಕಳ್ಳ ಸಾಗಾಟ : ಎನ್‌ಐಎ ತನಿಖೆ
ಕಾಸರಗೋಡು: ಅವಯವ ದಾನಕ್ಕಾಗಿ ವಿದೇಶಕ್ಕೆ ಮಾನವ ಕಳ್ಳ ಸಾಗಾಟ ನಡೆಯುತ್ತಿರುವ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಳ್ಳಲಿದೆ. ಸದ್ಯ ನೆಡುಂಬಾಶೆರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇರಳ, ಬೆಂಗಳೂರು, ಹೈದರಾಬಾದ್ ಮೊದಲಾದೆಡೆಗಳಿಂದಾಗಿ 20 ರಷ್ಟು ಮಂದಿಯನ್ನು ಅವಯವ ದಾನಕ್ಕಾಗಿ ಮಾನವ ಕಳ್ಳ ಸಾಗಾಟದವರು ಇರಾನ್‌ಗೆ ಸಾಗಿಸಿದ್ದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಇರಾನ್‌ನಲ್ಲಿರುವ ಫರಿದಿಖಾನ್‌ನಲ್ಲಿರುವ ಆಸ್ಪತ್ರೆಯೊಂದಕ್ಕೆ ಮಾನವ ಅವಯವಗಳನ್ನು ಸಾಗಿಸುತ್ತಿದ್ದಾರೆ. ಮಾನವ ಕಳ್ಳಸಾಗಾಟ ಜಾಲದ ಪ್ರಧಾನ ಸೂತ್ರಧಾರನೆಂದು ಹೇಳಲಾಗುತ್ತಿರುವ ತೃಶ್ಶೂರು ವಲಪಾಗತ್ ನಿವಾಸಿ ಸಾಬೀತ್ ನಾಸರ್(30)ನನ್ನು ನೆಡುಂಬಾಶೆರಿ ವಿಮಾನ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು, ಮಂಗಳೂರು, ಕೊಚ್ಚಿ, ರಾಂಚಿ, ಬೆಂಗಳೂರು, ಕೊಲ್ಕತ್ತಾ ಮತ್ತು ಜಮ್ಮು ನಿವಾಸಿಗಳಾದ ಹಲವರು ಈ ಜಾಲದ ಕೊಂಡಿಗಳಾಗಿದ್ದಾರೆ.
ಗೃಹ ಸಂದರ್ಶನಕ್ಕಾಗಿ ತಲುಪಿದ ಸಿಪಿಎಂ ನೇತಾರರ ಮೇಲೆ ಬಾಂಬೆಸೆತ : ಮಹಿಳೆಗೆ ಗಾಯ
ಕಾಸರಗೋಡು: ಗೃಹ ಸಂದರ್ಶನಕ್ಕಾಗಿ ತಲುಪಿದ ಸಿಪಿಎಂ ನೇತಾರರ ಮೇಲೆ ಸಿಪಿಎಂ ಕಾರ್ಯಕರ್ತ ಬಾಂಬೆಸೆದ ಘಟನೆ ನಡೆದಿದೆ. ಬಾಂಬೆಸೆತದಿಂದ ನೆರೆಮನೆ ನಿವಾಸಿ ಆಮಿನ ಗಾಯಗೊಂಡಿದ್ದು, ಅವರನ್ನು ಕಾಂಞಂಗಾಡ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಬಲತ್ತರ ಲಾಲೂರು ನಿವಾಸಿ ರತೀಶ್ ಯಾನೆ ಮಾಂದಿ ರತೀಶ್ ಬಾಂಬೆಸೆದಿರುವುದಾಗಿ ಆರೋಪಿಸಲಾಗಿದೆ. ಮೇ 20 ರಂದು ರಾತ್ರಿ 9 ಗಂಟೆಗೆ ಪಾರಪ್ಪಳ್ಳಿ ಕಣ್ಣೋತ್‌ತಟ್ಟ್ನ ಸಮೀಪದ ಮನೆಗೆ ತಲುಪಿದಾಗ ಈ ಘಟನೆ ನಡೆದಿದೆ. ಅಂಬಲತ್ತರ ಲೋಕಲ್ ಕಾರ್ಯದರ್ಶಿ ಅನೂಪ್ ಕುಂಬಳ, ಏಳನೇ ಮೈಲು ಲೋಕಲ್ ಕಾರ್ಯದರ್ಶಿ ಬಾಬುರಾಜ್, ಡಿವೈಎಫ್‌ಐ ವಲಯ ಕಾರ್ಯದರ್ಶಿ ಅರುಣ್, ಬಾಲಕೃಷ್ಣನ್ ಅವರ ಮೇಲೆ ಬಾಂಬೆಸೆಯಲಾಗಿದೆ. ಬಾಂಬೆಸೆದ ಬಳಿಕ ಆರೋಪಿ ರತೀಶ್ ಪರಾರಿಯಾಗಿದ್ದಾನೆ. ಅಂಬಲತ್ತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Madikeri: ದೇಗುಲದಲ್ಲಿ ಸಮಾನತೆಯೇ ಉದ್ದೇಶ ; ಕಟ್ಟೆಮಾಡಿನ ಶ್ರೀ ಮಹಾ ಮೃತ್ಯುಂಜಯ ವಿವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.