![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Mar 28, 2023, 5:12 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಒಂದೂವರೆ ಕಿಲೋ ಚಿನ್ನ ವಶಕ್ಕೆ
ಕಾಸರಗೋಡು: ಕೊಲ್ಲಿಯಿಂದ ಗೋ ಫಾಸ್ಟ್ ವಿಮಾನದಲ್ಲಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾಸರಗೋಡು ಆಲಂಪಾಡಿ ನಿವಾಸಿ ಶೆರಾಫತ್ ಮೊಹಮ್ಮದ್‌ನಿಂದ 85 ಲಕ್ಷ ರೂ. ಮೌಲ್ಯದ ಒಂದೂವರೆ ಕಿಲೋ ಚಿನ್ನವನ್ನು ಪೊಲೀಸರು ವಶಪಡಿಸಿದ್ದಾರೆ. ಈತನನ್ನು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಮನೆಗೆ ನುಗ್ಗಿ ಟಿ.ವಿ. ಉಪಕರಣ ಅಪಹರಣ
ಕುಂಬಳೆ: ಮುಗು ನಿವಾಸಿ ತಾಹಿರ ಅವರ ಮನೆಗೆ ನುಗ್ಗಿ ಟಿ.ವಿ. ಉಪಕರಣಗಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮುಗುನಲ್ಲಿ ತಂಙಳ್ ಆಗಿದ್ದ ಜಾಫರ್ ಸಾದಿಕ್‌ನನ್ನು ಕುಂಬಳೆ ಪೊಲೀಸರು ತೊಕ್ಕೊಟ್ಟಿನಿಂದ ಬಂಧಿಸಿದ್ದಾರೆ. ತೊಕ್ಕೊಟ್ಟಿನಲ್ಲಿ ತಲೆಮರೆಸಿಕೊಂಡಿರುವುದಾಗಿ ಲಭಿಸಿದ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಅಕ್ರಮ ಮರಳು ಸಾಗಾಟ: ವಾಹನ ವಶಕ್ಕೆ
ಉಪ್ಪಳ: ಕಳಾಯಿ ಹೊಳೆಯಿಂದ ಮರಳು ಸಾಗಿಸುತ್ತಿದ್ದ ಪಿಕ್ ಅಪ್ ವಶಪಡಿಸಿಕೊಂಡು ಚಾಲಕ ಮೀಯಪದವು ತಲೇಕ್ಕಳ ನಿವಾಸಿ ಅನಿತ್ ಕುಮಾರ್(27)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕೊಮ್ಮಂಗಳದಿಂದ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ವಶಪಡಿಸಿದ್ದಾರೆ.
ಗ್ಯಾಸ್ ಸಿಲಿಂಡರ್ ಕಳವು : ಇಬ್ಬರ ಬಂಧನ
ಕಾಸರಗೋಡು: ವಿದ್ಯಾನಗರ ಕೋಪಾದ ಮೊಹಮ್ಮದ್ ಹನೀಫ್ ಅವರ ಫುಡ್ ಆ್ಯಂಡ್ ಕೆಟರಿಂಗ್ ಸರ್ವೀಸ್ ಸಂಸ್ಥೆಯಿಂದ ಮಾ. 14ರಂದು ಗ್ಯಾಸ್ ಸಿಲಿಂಡರ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಯಮ್ಮಾರಮೂಲೆ ತೆಕ್ಕೇಮೂಲೆ ರೆಹ್ಮಾನಿಯ ನಗರದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಮೊಹಮ್ಮದ್ ಜಶೀರ್(33) ಮತ್ತು ಎರ್ದುಂಕಡವಿನ ಸೌರವ್ ಬಿ. (23)ನನ್ನು ಪೊಲೀಸರು ಬಂಧಿಸಿದ್ದಾರೆ.
ಹಣದ ವ್ಯವಹಾರ: ಯುವಕನಿಗೆ ಇರಿತ
ಕುಂಬಳೆ: ಕೊಯಿಪ್ಪಾಡಿ ಕಡಪ್ಪುರದ ಸಾದಿಕ್ (30) ಅವರನ್ನು ಇರಿತದ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊಗ್ರಾಲ್ ನಾಂಗಿಯ ನಿವಾಸಿ ನಿಸಾಂ ಇರಿದು ಗಾಯಗೊಳಿಸಿದ್ದಾಗಿ ಗಾಯಾಳು ಆರೋಪಿಸಿದ್ದಾರೆ. ಹಣದ ವ್ಯವಹಾರ ಇರಿತಕ್ಕೆ ಕಾರಣವೆನ್ನಲಾಗಿದೆ.
ಎರಡು ಸ್ಕೂಟರ್ ಕಳವು: ಪ್ರಕರಣ ದಾಖಲು
ಕಾಸರಗೋಡು: ಉದುಮ ನಾಲಾಂವಾದುಕ್ಕಲ್‌ನ ಕೆ.ಪಿ. ಸರಿತಾ ರಾಜೀವ್ ಅವರ ಜುಪೀಟರ್ ಸ್ಕೂಟರನ್ನು ಬೇವೂರಿನಿಂದ ಕಳವು ಮಾಡಲಾಗಿದೆ. ಪನಯಾಲ್‌ನ ಕೆ. ಮಣಿಕಂಠನ್ ಅವರ ಸ್ಕೂಟಿಯನ್ನು ಪೆರಿಯಾಟಡ್ಕದಿಂದ ಕಳವು ಮಾಡಲಾಗಿದೆ. ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಾವಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಕಾಸರಗೋಡು: ನಗರದ ಅಶ್ವಿನಿ ನಗರದ ಖಾಸಗಿ ಆಸ್ಪತ್ರೆಯೊಂದರ ಬಳಿಯ ಬಾವಿಯಲ್ಲಿ ಸುಮಾರು 45 ವರ್ಷ ಪ್ರಾಯದ ಪುರುಷನ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಕಾಪಾ ಕಾನೂನು ಉಲ್ಲಂಘನೆ: ಬಂಧನ
ಕಾಸರಗೋಡು: ಕಾಪಾ ಕಾನೂನು ಪ್ರಕಾರ ಬಂಧಿಸಲ್ಪಟ್ಟ ಬಳಿಕ ಜೈಲಿನಿಂದ ಹೊರ ಬಂದ ಆರೋಪಿ ಕಾಸರಗೋಡು ಕಸಬಾ ಕಡಪ್ಪುರ ಅಡ್ಕತ್ತಬೈಲ್ ಲೈಟ್ ಹೌಸ್ ಬಳಿಯ ಜಯಚಂದ್ರ ಆಲಿಯಾಸ್ ಜಯ್ಯು(47)ನನ್ನು ಕಾಪಾ ಕಾನೂನು ಉಲ್ಲಂಘನೆ (ಕೇರಳ ಸಮಾಜಘಾತಕ ಚಟುವಟಿಕೆ ತಡೆ)ಯಂತೆ ಪೊಲೀಸರು ಬಂಧಿಸಿದ್ದಾರೆ. ಕೊಲೆ ಸಹಿತ ಹಲವು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಕಂಟೈನರ್‌ನಲ್ಲಿ ಪಟಾಕಿ ಸಾಗಾಟ: ಕೇಸು
ಕಾಸರಗೋಡು: ಅಕ್ರಮವಾಗಿ ಮಿನಿ ಕಂಟೈನರ್ ಲಾರಿಯಲ್ಲಿ ಸಾಗಿಸಿದ ಪಟಾಕಿಯನ್ನು ವಶಪಡಿಸಿಕೊಂಡ ಪೊಲೀಸರು ಈ ಸಂಬಂಧ ಲಾರಿ ಚಾಲಕ ಪಾಲಕ್ಕಾಡ್ ಕಿನಾಶೇರಿ ಮುತ್ತು ಅವರ ಪುತ್ರ ಎಂ. ಮುರಳಿ (41) ವಿರುದ್ಧ ಕೇಸು ದಾಖಲಿಸಿದ್ದಾರೆ. ಸಾಕಷ್ಟು ಸಂರಕ್ಷಣೆ, ಪರವಾನಗಿ ಇಲ್ಲದೆ ಪಟಾಕಿ ಸಾಗಿಸಲಾಗುತ್ತಿತ್ತು. ಇತರ ಸಾಮಗ್ರಿಗಳ ಸಹಿತ ಪಟಾಕಿ ಸಾಗಿಸಲಾಗುತ್ತಿದ್ದು, ಪಳ್ಳಿಕೆರೆಯಿಂದ ವಶಪಡಿಸಲಾಗಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.