Kasaragod: ಯುವತಿ ನಾಪತ್ತೆ; ದೂರು ದಾಖಲು
Team Udayavani, Jan 8, 2025, 9:34 PM IST
ಯುವತಿ ನಾಪತ್ತೆ
ಕಾಸರಗೋಡು: ಮಂಜೇಶ್ವರ ಕುಂಜತ್ತೂರು ಬಿ.ಎಸ್.ನಗರ ಆಲಿಮಾ ಮಂಜಿಲ್ ನಿವಾಸಿ ಅಫ್ರೀನ(19) ನಾಪತ್ತೆಯಾಗಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಜ.6 ರಂದು ರಾತ್ರಿ 8 ರಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮಂಜೇಶ್ವರ ಕುಂಡುಕೊಳಕೆಯಲ್ಲಿ ನಡೆಯುತ್ತಿರುವ ಬೀಚ್ ಫೆಸ್ಟಿವಲ್‌ಗೆಂದು ಮನೆಯಿಂದ ಹೋಗಿದ್ದು, ಬೀಚ್‌ನಲ್ಲಿ ಯಾವುದೋ ಬೈಕ್‌ನಲ್ಲಿ ಹತ್ತಿ ತೆರಳಿರುವುದಾಗಿಯೂ, ಆ ಬಳಿಕ ಮನೆಗೆ ವಾಪಸಾಗಿಲ್ಲ ಎಂದು ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ವಿವರಿಸಲಾಗಿದೆ.
ತಾಯಿ, ಪುತ್ರ ನಾಪತ್ತೆ
ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬೇಳ ದರ್ಬೆತ್ತಡ್ಕದಿಂದ ರಾಮಚಂದ್ರ ಅವರ ಪತ್ನಿ ಮಾಲತಿ(30) ಹಾಗೂ ಪುತ್ರ ಮನೀಶ್(5) ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಬದಿಯಡ್ಕದ ಆಸ್ಪತ್ರೆಗೆಂದು ತೆರಳಿದ ಮಾಲತಿ ಆ ಬಳಿಕ ಮನೆಗೆ ವಾಪಸಾಗಿಲ್ಲ ಎಂದು ತಿಳಿಸಲಾಗಿದೆ.
ಮಹಿಳೆಗೆ ಕಿರುಕುಳ: ಬಂಧನ
ಕಾಸರಗೋಡು: 46 ರ ಹರೆಯದ ಮಹಿಳೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಾಟರ್ ಅಥೋರಿಟಿ ನೌಕರ ಮಾವುಂಗಾಲ್ ಆನಂದಾಶ್ರಮ ಸಮೀಪದ ರಂಜಿತ್(39)ನನ್ನು ರಾಜಪುರಂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ವಾಟರ್ ಅಥೋರಿಟಿಯ ವಾಹನ ಚಾಲಕನಾಗಿದ್ದಾನೆ.
ಮದ್ಯ ಸಹಿತ ಬಂಧನ
ಕಾಸರಗೋಡು: ನಗರದ ಬದಿಬಾಗಿಲಿನಲ್ಲಿ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 16.74 ಲೀಟರ್ ಮದ್ಯ ವಶಪಡಿಸಿಕೊಂಡಿದ್ದು, ಈ ಸಂಬಂಧ ಕುಡಾಲ್‌ಮೇರ್ಕಳ ಬಾಯಾಡಿಯ ಅಬ್ದುಲ್ ಬಶೀರ್ ಕೆ.ಎಂ.(53)ನನ್ನು ಬಂಧಿಸಿದೆ.
ವಿವಿಧೆಡೆ ಬೆಂಕಿ ಆಕಸ್ಮಿಕ
ಉಪ್ಪಳ: ಮೂಡಂಬೈಲುನಲ್ಲಿ ಜ.7 ರಂದು ರಾತ್ರಿ ಹಿತ್ತಿಲಿಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಬೋರ್ಕಳದಲ್ಲಿ ಹಿತ್ತಿಲಿಗೆ ಬೆಂಕಿ ಹತ್ತಿಕೊಂಡಿದ್ದು, ಅಗ್ನಿ ಶಾಮಕ ದಳ ಬೆಂಕಿಯನ್ನು ಆರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.