ಕಾಸರಗೋಡು ಜಿಲ್ಲೆಯಲ್ಲಿ 18 ಮಂದಿಗೆ ಪಾಸಿಟಿವ್
Team Udayavani, Jul 12, 2020, 8:00 AM IST
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 18 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. 7 ಮಂದಿ ವಿದೇಶಗಳಿಂದ ಮತ್ತು ನಾಲ್ವರು ಇತರ ರಾಜ್ಯಗಳಿಂದ ಬಂದವರು.
ಮಂಗಲ್ಪಾಡಿಯ ವೃದ್ಧ, ಯುವತಿ, 1 ಮತ್ತು 3 ವರ್ಷದ ಹೆಣ್ಣು ಮಕ್ಕಳು, ಕುಂಬಳೆಯ ಯುವಕ, ಮೀಂಜದ ಮಹಿಳೆ, ವರ್ಕಾಡಿಯ 10 ವರ್ಷದ ಬಾಲಕಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಬೆಂಗಳೂರಿನಿಂದ ಕಾರಿನಲ್ಲಿ ಬಂದಿದ್ದ ಮೊಗ್ರಾಲ್ ಪುತ್ತೂರಿನ ಇಬ್ಬರು, ಮಹಾರಾಷ್ಟ್ರದಿಂದ ರೈಲಿನಲ್ಲಿ ಬಂದಿದ್ದ ಮಂಗಲ್ಪಾಡಿ, ಮೊಗ್ರಾಲ್ ಪುತ್ತೂರು ವ್ಯಕ್ತಿಗಳು, ಕತಾರ್ನಿಂದ ಬಂದ ಮಂಗಲ್ಪಾಡಿ ನಿವಾಸಿ, ದುಬಾೖ ಯಿಂದ ಬಂದ ಕಾಸರಗೋಡು ನಿವಾಸಿ, ಸೌದಿ ಯಿಂದ ಬಂದ ಪಿಲಿಕೋಡು ನಿವಾಸಿಗಳು ಬಾಧಿತರಲ್ಲಿ ಸೇರಿದ್ದಾರೆ.
ಕೇರಳದಲ್ಲಿ 488 ಮಂದಿಗೆ ಸೋಂಕು
ಕೇರಳದಲ್ಲಿ ಶನಿವಾರ 488 ಮಂದಿಗೆ ಕೋವಿಡ್ ಸೋಂಕು ದೃಢಗೊಂಡಿದೆ. ಇದೇ ವೇಳೆ 143 ಮಂದಿ ಗುಣಮುಖರಾಗಿದ್ದಾರೆ. ತಿರುವನಂತಪುರ ಮತ್ತು ಎರ್ನಾಕುಳಂ ನಿವಾಸಿಗಳಿಬ್ಬರು ಸಾವಿಗೀಡಾಗಿದ್ದಾರೆ. ಬಾಧಿತರಲ್ಲಿ 167 ಮಂದಿ ವಿದೇಶದಿಂದಲೂ 76 ಮಂದಿ ಇತರ ರಾಜ್ಯಗಳಿಂದ ಬಂದವರು. ಸಂಪರ್ಕದ ಮೂಲಕ 234 ಮಂದಿಗೆ ರೋಗ ಬಾಧಿಸಿದೆ.
201 ಮಂದಿಯ ವಿರುದ್ಧ ಕೇಸು
ಮಾಸ್ಕ್ ಧರಿಸದ ಆರೋಪದಲ್ಲಿ ಜಿಲ್ಲೆಯಲ್ಲಿ 212 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ. ಲಾಕ್ಡೌನ್ ಉಲ್ಲಂಘಿಸಿದ ಆರೋಪದಲ್ಲಿ 11 ಪ್ರಕರಣಗಳನ್ನು ದಾಖಲಿಸಿ 7 ಮಂದಿಯನ್ನು ಬಂಧಿಸಲಾಗಿದೆ. ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.