ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಸೋಂಕು
Team Udayavani, May 12, 2020, 10:40 AM IST
ಕಾಸರಗೋಡು: ನಿರಂತರ ಹತ್ತು ದಿನಗಳಿಂದ ನೆಮ್ಮದಿಯಿಂದ ಇದ್ದ ಜಿಲ್ಲೆಯಲ್ಲಿ ಸೋಮವಾರ ಮತ್ತೆ ನಾಲ್ವರಲ್ಲಿ ಕೋವಿಡ್ ಸೋಂಕು ದೃಢಗೊಂಡಿದೆ. ಆದರೆ ಆವರೆಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಜಿಲ್ಲೆಯನ್ನು ಪ್ರವೇಶಿಸುವಾಗಲೇ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು ಎನ್ನುವುದು ಸಮಾಧಾನದ ಸಂಗತಿ.
ಬಾಧಿತ ನಾಲ್ವರಲ್ಲಿ ಇಬ್ಬರು 41 ಮತ್ತು 49 ವರ್ಷ ಪ್ರಾಯದ ಕುಂಬಳೆ ನಿವಾಸಿಗಳು. ಮತ್ತಿಬ್ಬರು 61 ವರ್ಷದ ಮಂಗಲ್ಪಾಡಿಯವರು ಮತ್ತು 51 ವರ್ಷದ ಪೈವಳಿಕೆ ನಿವಾಸಿಯಾಗಿದ್ದಾರೆ. ಎಲ್ಲರೂ ಪುರುಷರು. ಪೈವಳಿಕೆ ನಿವಾಸಿ ಮೇ 4ರಂದು, ಕುಂಬಳೆ ಮತ್ತು ಮಂಗಲ್ಪಾಡಿ ನಿವಾಸಿಗಳು ಮೇ 8ರಂದು ಜತೆಯಲ್ಲಿ ಊರಿಗೆ ಬಂದಿದ್ದರು. ಸೋಂಕಿತರು ಪತ್ತೆಯಾಗಿರುವ ಪ್ರದೇಶಗಳಲ್ಲಿ ಸೆಕ್ಷನ್ ಜಾರಿಗೊಳಿಸಲಾಗಿದೆ.
ಕೇರಳದಲ್ಲಿ 7 ಪ್ರಕರಣ
ಕೇರಳದಲ್ಲಿ ಸೋಮವಾರ 7 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ.ಕಾಸರಗೋಡು – 4, ಮಲಪ್ಪುರ, ಪಾಲಾಘಾಟ್ ಮತ್ತು ವಯನಾಡು ಜಿಲ್ಲೆಯಲ್ಲಿ ತಲಾ ಒಬ್ಬರನ್ನು ರೋಗ ಬಾಧಿಸಿದೆ. ಕಾಸರಗೋಡಿನ ನಾಲ್ವರೂ ಮಹಾರಾಷ್ಟ್ರದಿಂದ ಬಂದರೆ, ಪಾಲಾಘಾಟ್ ಜಿಲ್ಲೆಯ ವ್ಯಕ್ತಿ ಚೆನ್ನೈಯಿಂದ, ಮಲಪ್ಪುರದ ವ್ಯಕ್ತಿ ಕುವೈಟ್‌ನಿಂದ ಬಂದವರು. ವಯನಾಡು ಜಿಲ್ಲೆಯ ವ್ಯಕ್ತಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
13 ಪ್ರಕರಣ; 27 ಮಂದಿಯ ಬಂಧನ
ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಠಾಣೆಗಳಲ್ಲಿ 13 ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ಬೇಡಗಂ, ಚಂದೇರ ಠಾಣೆಗಳಲ್ಲಿ ತಲಾ 3, ಮಂಜೇಶ್ವರ ಠಾಣೆಯಲ್ಲಿ 2, ವಿದ್ಯಾನಗರ, ಕಾಸರಗೋಡು, ನೀಲೇಶ್ವರ, ಚೀಮೇನಿ, ವೆಳ್ಳರಿಕುಂಡ್ ಠಾಣೆಗಳಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ. ಒಟ್ಟು 27 ಮಂದಿಯನ್ನು ಬಂಧಿಸಿ, 7 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಈ ವರೆಗೆ 2,108 ಕೇಸುಗಳು ದಾಖಲಾಗಿವೆ. 2,739 ಮಂದಿಯನ್ನು ಬಂಧಿಸಿ, 877 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.