![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 18, 2020, 7:15 PM IST
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 42 ಮಂದಿಗೆ ಕೋವಿಡ್ ಸೋಂಕು ದೃಢೀಕರಿಸಲಾಗಿದೆ. ಈ ಪೈಕಿ 40 ಮಂದಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ತಲಾ ಒಬ್ಬರಂತೆ ವಿದೇಶ ಹಾಗೂ ಇತರ ರಾಜ್ಯದಿಂದ ಬಂದವರು. 127 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರು : ಚೆಮ್ನಾಡ್-6, ಉದುಮ-11, ಕುಂಬಳೆ-3, ಪುಲ್ಲೂರು-ಪೆರಿಯೆ-1, ಅಜಾನೂರು-3, ಚೆಂಗಳ-5, ಕಾಂಞಂಗಾಡ್-7, ಕಳ್ಳಾರ್-1, ವಲಿಯಪರಂಬ-1, ನೀಲೇಶ್ವರ-2, ತೃಕ್ಕರಿಪುರ-1, ಪಳ್ಳಿಕೆರೆ-1 ಎಂಬಂತೆ ರೋಗ ಬಾಧಿಸಿದೆ.
ಮೂವರ ಸಾವು : ಕೋವಿಡ್ ಸೋಂಕಿನಿಂದ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಮ್ನಾಡ್ ಪಂಚಾಯತ್ ವ್ಯಾಪ್ತಿಯ 40 ರ ಹರೆಯದ ಯುವಕ ಸಾವಿಗೀಡಾದರು. ಒಂದು ವಾರದ ಹಿಂದೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜೆಮ್ನಾಡ್ ಗ್ರಾಮ ಪಂಚಾಯತ್‌ನ 65 ವರ್ಷ ಪ್ರಾಯದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಆ.9 ರಂದು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸ್ಥಿತಿ ಗಂಭೀರ ಹಿನ್ನೆಲೆಯಲ್ಲಿ ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತೆ ಸಾವಿಗೀಡಾದ ನೀಲೇಶ್ವರ ಕೋಟ್ಟಯಿಲ್ ನಿವಾಸಿ 75 ವರ್ಷದ ವೃದ್ಧರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ. ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 19 ರಂದು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 20 ರಂದು ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೇರಳದಲ್ಲಿ 1758 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಮಂಗಳವಾರ 1758 ಮಂದಿಗೆ ಕೋವಿಡ್ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 1365 ಮಂದಿ ಗುಣಮುಖರಾಗಿದ್ದಾರೆ. ರೋಗ ಬಾಧಿತರಲ್ಲಿ 39 ಮಂದಿ ವಿದೇಶದಿಂದ, 42 ಮಂದಿ ಇತರ ರಾಜ್ಯಗಳಿಂದ ಬಂದವರು. 1641 ಮಂದಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. 25 ಮಂದಿ ಆರೋಗ್ಯ ಕಾರ್ಯಕರ್ತರು ಹಾಗು 11 ಮಂದಿ ಐಎನ್‌ಎಚ್‌ಎಸ್ ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ.
ರೋಗ ಬಾಧಿತರು : ತಿರುವನಂತಪುರ-489, ಮಲಪ್ಪುರಂ-242, ಎರ್ನಾಕುಳಂ-192, ಕಲ್ಲಿಕೋಟೆ-147, ಆಲಪ್ಪುಳ-126, ಕಣ್ಣೂರು-123, ಕೋಟ್ಟಯಂ-93, ಕೊಲ್ಲಂ-88, ಪತ್ತನಂತಿಟ್ಟ-65, ಪಾಲಾ^ಟ್-51, ತೃಶ್ಶೂರು-48, ವಯನಾಡು-47, ಕಾಸರಗೋಡು-42, ಇಡುಕ್ಕಿ-5 ಮಂದಿಗೆ ರೋಗ ಬಾಧಿಸಿದೆ.
ಮಂಗಳವಾರ ರಾಜ್ಯದಲ್ಲಿ ಆರು ಮಂದಿ ಕೋವಿಡ್ ವೈರಸ್‌ನಿಂದ ಸಾವಿಗೀಡಾಗಿರುವುದಾಗಿ ಖಾತ್ರಿಗೊಳಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 175 ಕ್ಕೇರಿತು.
ಗುಣಮುಖ : ತಿರುವನಂತಪುರ-310, ಕೊಲ್ಲಂ-54, ಪತ್ತನಂತಿಟ್ಟ-29, ಆಲಪ್ಪುಳ-65, ಕೋಟ್ಟಯಂ-48, ಇಡುಕ್ಕಿ-59, ಎರ್ನಾಕುಳಂ-64, ತೃಶ್ಶೂರು-33, ಪಾಲಾ^ಟ್-82, ಮಲಪ್ಪುರಂ-194, ಕಲ್ಲಿಕೋಟೆ-195, ವಯನಾಡು-46, ಕಣ್ಣೂರು-61, ಕಾಸರಗೋಡು-125 ಎಂಬಂತೆ ಗುಣಮುಖರಾಗಿದ್ದಾರೆ.
ಇಂದಿನಿಂದ ಪಾಸ್ : ಕರ್ನಾಟಕಕ್ಕೆ ದಿನನಿತ್ಯ ಸಂಚಾರ ನಡೆಸುವ ಮಂದಿಗಾಗಿ ತಲಪ್ಪಾಡಿಯಲ್ಲಿ ಆಂಟಿಜೆನ್ ತಪಾಸಣೆ ನಡೆಸಿ ಪಾಸ್ ಮಂಜೂರು ಮಾಡುವ ಪ್ರಕ್ರಿಯೆ ರಾಜ್ಯ ಸರಕಾರ ವತಿಯಿಂದ ಬುಧವಾರ (ಆ.19) ದಿಂದ ಆರಂಭಗೊಳ್ಳಲಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು. ಕಾಸರಗೋಡು ಜಿಲ್ಲೆಯ ಇತರ ಗಡಿ ಪ್ರದೇಶಗಳಲ್ಲೂ ಈ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ಸಚಿವ ನುಡಿದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.