ಕಾಪು ಪುರಸಭಾ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
Team Udayavani, Dec 14, 2021, 5:26 PM IST
ಕಾಪು : ಕಾಪು ಪುರಸಭಾ ಚುನಾವಣೆಯು ಡಿ.27 ರಂದು ನಡೆಯಲಿದ್ದು ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಮಂಗಳವಾರ ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಬಿಡುಗಡೆಗೊಳಿಸಿದರು.
ಅಭ್ಯರ್ಥಿಗಳ ವಿವರ : ಕೈಪುಂಜಾಲು (ಹಿಂದುಳಿದ ವರ್ಗ ಅ ಮಹಿಳೆ) – ಪೂರ್ಣಿಮಾ ಚಂದ್ರಶೇಖರ್, ಕೋತಲಕಟ್ಟೆ (ಹಿಂದುಳಿದ ವರ್ಗ ಬಿ ಮಹಿಳೆ) – ರಮಾ ವೈ. ಶೆಟ್ಟಿ , ಕರಾವಳಿ (ಹಿಂದುಳಿದ ವರ್ಗ ಬಿ) – ಕಿರಣ್ ಆಳ್ವ , ಪೊಲಿಪು ಗುಡ್ಡೆ (ಸಾಮಾನ್ಯ) – ರತ್ನಾಕರ ಶೆಟ್ಟಿ , ದಂಡತೀರ್ಥ (ಹಿಂದುಳಿದ ವರ್ಗ ಅ) – ಸುರೇಶ್ ದೇವಾಡಿಗ, ಕಲ್ಯಾ (ಸಾಮಾನ್ಯ ಮಹಿಳೆ) – ಲತಾ ವಿ. ದೇವಾಡಿಗ, ಭಾರತ್ ನಗರ (ಸಾಮಾನ್ಯ) – ಅರುಣ್ ಶೆಟ್ಟಿ, ಬೀಡು ಬದಿ (ಸಾಮಾನ್ಯ) – ಅನಿಲ್ ಕುಮಾರ್, ಪೊಲಿಪು (ಹಿಂದುಳಿದ ವರ್ಗ ಅ ಮಹಿಳೆ) – ಯಶೋಧಾ ಎಸ್. ಕುಂದರ್, ಕಾಪು ಪೇಟೆ (ಸಾಮಾನ್ಯ ಮಹಿಳೆ) – ಸರಿತಾ ಪೂಜಾರಿ, ಲೈಟ್ ಹೌಸ್ (ಹಿಂದುಳಿದ ವರ್ಗ ಅ) – ನಿತಿನ್ ಕುಮಾರ್, ಕೊಪ್ಪಲಂಗಡಿ (ಪರಿಶಿಷ್ಟ ಪಂಗಡ) – ನಾಗೇಶ್ , ತೊಟ್ಟಂ (ಪರಿಶಿಷ್ಟ ಜಾತಿ) – ಸುಭಾಷಿಣಿ,, ದುಗ್ಗನ್‌ತೋಟ (ಸಾಮಾನ್ಯ) – ಽರೇಶ್ ಡಿ.ಪಿ., ಮಂಗಳಪೇಟೆ (ಸಾಮಾನ್ಯ ಮಹಿಳೆ) – ಸುಮನ , ಜನಾರ್ದನ ದೇವಸ್ಥಾನ (ಹಿಂದುಳಿದ ವರ್ಗ ಅ ಮಹಿಳೆ) – ಹರಿಣಿ ದೇವಾಡಿಗ, ಬಡಗರಗುತ್ತು (ಸಾಮಾನ್ಯ ಮಹಿಳೆ) – ಗೌರಿ ಶಂಕರ್ ಜತ್ತನ್, ಕೊಂಬಗುಡ್ಡೆ (ಹಿಂದುಳಿದ ವರ್ಗ ಅ) – ನಜೀರ್ ಶೇಖ್, ಜನರಲ್ ಶಾಲೆ (ಸಾಮಾನ್ಯ ಮಹಿಳೆ) – ಮೋಹಿನಿ ಶೆಟ್ಟಿ, ಗುಜ್ಜಿ (ಪರಿಶಿಷ್ಟ ಜಾತಿ ಮಹಿಳೆ) – ಶೀಲಾ ಅಶೋಕ್, ಗರಡಿ (ಸಾಮಾನ್ಯ) – ಶೈಲೇಶ್ ಅಮೀನ್, ಕುಡ್ತಿಮಾರ್ (ಸಾಮಾನ್ಯ ಮಹಿಳೆ) -ಸುಮತಿ ಐತಪ್ಪ , ಅಹಮ್ಮದಿ ಮೊಹಲ್ಲಾ (ಸಾಮಾನ್ಯ) – ಬಿ. ಹೈದರ್ ಅವರನ್ನು ಅಭ್ಯರ್ಥಿಗಳೆಂದು ಘೋಷಿಸಲಾಯಿತು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಚುನಾವಣಾ ಸಹ ಪ್ರಭಾರಿ ಕಿರಣ್ ಕೊಡ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಕಲ್ಮಾಡಿ, ಪುರಸಭೆ ವ್ಯಾಪ್ತಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಂದೀಪ್ ಶೆಟ್ಟಿ, ಗಂಗಾಧರ ಸುವರ್ಣ, ಅನಿಲ್ ಶೆಟ್ಟಿ ಮಾಂಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾದ ಮಂಗಳೂರಿನ ಅಶ್ವಲ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.