ಮರಮುಕ್ತ ಕಾಗದ ತಯಾರಿಸಿದ ಕಾವ್ಯಾ ಮಾದಪ್ಪ..
Team Udayavani, Jun 11, 2020, 7:41 PM IST
ಕಾಗದ ಇಲ್ಲದೇ ಇರುವಂಥ ಜಗತನ್ನು ಊಹಿಸಿಕೊಳ್ಳಲು ನಮಗೀಗ ಸಾಧ್ಯವೆ. ? ಡಿಜಿಟಲೀಕರಣದತ್ತ ಸಾಗುವುದು ಕಾಗದ ರಹಿತವಾಗಿ ವ್ಯವಹರಿಸಲು ಉತ್ತಮ. ಆದೆರೆ ದಿನ ಬೇಳಗಾದರೆ ಓದಲು ಸುದ್ದಿ ಪತ್ರಿಕೆ, ಪುಸ್ತಕ, ತೋಚಿದ್ದನ್ನು ಹಾಗೇ ಗೀಚಿಡಲು ಒಂದು ಕಾಗದದ ತುಂಡು ಸಿಗುವುದಿಲ್ಲ ಎಂದಾದರೆ ನಮ್ಮದೆಂತ ದುಃಖದ ಪ್ರಪಂಚ ಎಂದು ಒಂದು ಕ್ಷಣ ಅನಿಸದೇ ಇರದು.
ಕಾಗದ ನಮಗಿಂದು ಅಗ್ಗವಾಗಿ ಸಿಗುತ್ತಿದ್ದರು. ಅದರಿಂದ ಆಗುತ್ತಿರುವ ಹಾಣಿ ಅಷ್ಟಿಷ್ಟಲ್ಲ ಪ್ರತೀ ವರ್ಷ 3.3 ದಶಲಕ್ಷ ಹೆಕ್ಟೆರ್‌ನಷ್ಟು ಕಾಡಿನ ಮಾರಣ ಹೋಮ ಮತ್ತು ಇದರಿಂದ ವನ್ಯಜೀವಿಗಳಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮ ಸಾಕಷ್ಟಿದೆ .
ಆದರೆ ಗಿಡಗಳನ್ನು ಹೊರತಾಗಿಯೂ ಇತರೆ ವಸ್ತುಗಳಿಂದ ಕಾಗದ ತಯಾರಿಸಬಹುದು ಎಂದು ತೋರಿಸಿಕೊಟ್ಟವರು ಮಡಿಕೇರಿಯ ಕಾವ್ಯಾ ಮಾದಪ್ಪ ಅವರು. ಶೇ. 68 ರಷ್ಟು ಸೆಲ್ಯೂಲೊಸ್ ಹೊಂದಿರುವ ಯಾವುದೇ ವಸ್ತು, ತಿರುಳಿನಿಂದ ಕಾಗದ ತಯಾರಿಸಬಹುದು ಎಂದರಿತ ಕಾವ್ಯಾ ಅವರು 2018 ರಲ್ಲಿ “ಬ್ಲೂ ಕ್ಯಾಟ್ ಪೇಪರ್’ ಎಂಬ ಕಾಗದ ತಯಾರಿಕೆ ಉದ್ಯಮವನ್ನು ಆರಂಭಿಸಿದ್ದಾರೆ. ಅಂದಿನಿಂದ ಒಂದು ಮರವನ್ನೂ ಕತ್ತರಿಸದೇ ಹತ್ತಿಯ ಚಿಂದಿ, ಲೆಮನ್ ಗ್ರಾಸ್, ಅಗಸೆ, ಮಲ್ಬೆರಿ, ಕಾಫಿ ಹೊಟ್ಟು, ಬಾಳೆ ಕೊರಡು, ತೆಂಗಿನ ಹೊಟ್ಟು ಹೀಗೆ ದ್ವಿತೀಯ ದರ್ಜೆಯ ಕೃಷಿ, ಕೈಗಾರಿಕೆ ತ್ಯಾಜ್ಯದಿಂದ ಕಾಗದ ತಯಾರಿಸಿದ್ದಾರೆ.
ಪ್ರತಿ ತಿಂಗಳು 5 ಕೈಗಾರಿಕಾ ಘಟಕಗಳು ಮತ್ತು ಸುಮಾರು ನೂರು ಕಾರ್ಮಿಕರಿಂದ ದ್ವಿತೀಯ ದರ್ಜೆಯ ತ್ಯಾಜ್ಯ ಸಂಗ್ರಹಿಸಿ ಉಪಯೋಗಿಸುತ್ತಿದ್ದಾರೆ. ಇವರ ಮರಮುಕ್ತ ಕಾಗದ ತಯಾರಿಕೆಯಿಂದ ತಿಂಗಳಿಗೆ 30 ಟನ್ ಮರ ಮತ್ತು ದಿನಕ್ಕೆ 55 ಸಾವಿರ ಲೀ. ಉಳಿತಾಯ ಮಾಡುತ್ತಿದ್ದಾರೆ.
ಮರಮುಕ್ತ ಕಾಗದ ತಯಾರಿಯ ಪಯಣ ಹೇಗಿತ್ತು
2000 ರಲ್ಲಿ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದ ಇವರು ಕೆಲವು ಕಾಲ ಎನ್‌ಜಿಒ ಒಂದರಲ್ಲಿ ಕಾರ್ಯನಿರ್ವಹಿಸಿದ್ದರು. 2005ರಲ್ಲಿ ಹುಟ್ಟೂರಾದ ಮಡಿಕೇರಿಗೆ ಮರಳಿ ರೆಸಾರ್ಟ್ ಪ್ರಾರಂಭಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ನಡುವೆ -2016ರಿಂದ ಮರಗಳ ಹೊರತಾಗಿ ಕಾಗದ ಉತ್ಪಾದಿಸಬಹುದೇ ಎಂಬ ಯೋಚನೆ ಹೊಳೆದು ಅದರ ಸಾಕಾರದತ್ತ ಸಾಗಿದ ಫಲವೇ ಇಂದು ಅವರ “ಬ್ಲೂ ಕ್ಯಾಟ್ ಪೇಪರ್’ ಕಾರ್ಖಾನೆ. ಜೈಪುರದ ಕುಮಾರಪ್ಪ ನ್ಯಾಶನಲ್ ಹ್ಯಾಂಡ್ ಮೇಡ್ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಿ ಅಲ್ಲಿ 15 ದಿನಗಳ ಕಾಲ ಕೈಯಿಂದ ಕಾಗದ ತಯಾರಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಇಂದು ಬೆಂಗಳೂರಿನ ಪಿನ್ಯಾದಲ್ಲಿ 20 ಸಾವಿರ ಚದರ ಅಡಿಯಷ್ಟು ದೊಡ್ಡ ಕಾರ್ಖಾನೆ ಕಟ್ಟಿ ಮುನ್ನಡೆಸುತ್ತಿದ್ದಾರೆ.
ತ್ಯಾಜ್ಯಕ್ಕೂ ಒಂದು ಮೌಲ್ಯ ನೀಡಿದವರು
ಈಗಿನ ಪೇಪರ್ ತಯರಿಕಾ ಯಂತ್ರಗಳೆಲ್ಲ ಕಟ್ಟಿಗೆ ಆಧಾ ರಿತವಾಗಿದ್ದರಿಂದ ತ್ಯಾಜ್ಯದಿಂದ ಕಾಗದ ತಯಾರಿಗೆ ಅವುಗಳ ಕೊಡುಗೆ ಶೂನ್ಯವೇ ಆಗಿದೆ. ಹಲವಾರು ತಂತ್ರಜ್ಞರು ಮತ್ತು ಎಂಜಿನಿಯರ್‌ಗಳ ಸಹಾಯದಿಂದ ಲಕ್ಷಾಂತರ ರೂ ವ್ಯಯಿಸಿ ಇದಕ್ಕೆ ಹೊಂದುವಂತ ಯಂತ್ರಗಳನ್ನು ತಯಾರಿಸಿದ್ದಾರೆ. ಹತ್ತಿಯ ಚಿಂದಿ, ಲೆಮನ್ ಗ್ರಾಸ್, ರೈತರಿಂದ ಅಗಸೆ, ಮಲ್ಬೆರಿ, ಕಾಫಿ ಹೊಟ್ಟು, ಬಾಳೆ ಕೊರಡು, ತೆಂಗಿನ ಹೊಟ್ಟು ಹೀಗೆ ದ್ವಿತೀಯ ದರ್ಜೆಯ ತ್ಯಾಜ್ಯ ಸಂಗ್ರಹಿಸಿ ಅನಂತರ ಅದನ್ನು ಸಂಸ್ಕರಿಸುವ ಮೂಲಕ ಕಾಗದವನ್ನಾಗಿ ಪರಿವರ್ತಿಸುತ್ತಿದ್ದಾರೆ ಕವ್ಯಾ ಅವರು. ಅಲ್ಲದೇ ಬ್ಲೂ ಕ್ಯಾಟ್ ಸಂಸ್ಥೆ ತ್ಯಾಜ್ಯ ಪಡೆದು ಅದಕ್ಕೆ ಪ್ರತಿಯಾಗಿ ಕೆ.ಜಿ.ಗೆ 8ರಿಂದ 120ರ ವರೆಗೂ ಬೆಲೆ ನೀಡುತ್ತದೆ.
ವಿಶಿಷ್ಟ ರೀತಿಯ ಕಾಗದ ತಯಾರಿಕೆ
ಇತೆರೆ ಕಂಪೆನಿಗಳು ಕಾಗದ ತಯಾರಿಸಿ ಅದನ್ನು ಬಿಳಿಯಾಗಿಸಲು ಕೆಲವೊಂದಿಷ್ಟು ರಾಸಾಯನಿಕ ಬಳಸುತ್ತವೆ. ಆದರೆ ಬ್ಲೂ ಕ್ಯಾಟ್ ಸಂಸ್ಥೆ ಬಿಳಿ ಹತ್ತಿಯ ಚಿಂದಿ ಬಳಸಿ ತಯಾರಿಸುತ್ತದೆ. ಅಲ್ಲದೇ ನೋಟ್ ಪುಸ್ತಕ, ಬ್ಯಾಗ್‌ಗಳು, ಲಕೋಟೆ, ಶುಭಾಶಯ ಪತ್ರಗಳು, ಫೋಟೋ ಫ್ರೇಮ್ , ಟೇಬಲ್ ಮ್ಯಾಟ್, ಗಿಫ್ಟ್ ಬಾಕ್ಸ್ ಇತ್ಯಾದಿ ತಯಾರಿಸಲಾಗುತ್ತದೆ. ನವೀನ ಕಲ್ಪನೆಯ ವಿವಾಹ ಆಮಂತ್ರಣ ಪತ್ರಿಕೆಯನ್ನೂ ಇವರು ತಯಾರಿಸುತ್ತಾರೆ. ವಿವಾಹ ಪತ್ರಗಳು ಮರುಬಳಕೆ ಆಗದ ಕಾರಣ ಅದರಲ್ಲಿ ಬೀಜಗಳನ್ನು ಸೇರಿಸಿ ತಯಾರಿಲಾಗುತ್ತಸದೆ ಇವಗಳನ್ನು ಮಣ್ಣಿನಲ್ಲಿ ಹೂಳಬಹುದು ಹಾಗಾಗಿ ಪರಿಸರ ಸ್ನೇಹಿಯೂ ಆಗಿದೆ. ಹೀಗೆ ಹೊಸ ಪರಿಕಲ್ಪನೆಯಿಂದ ಬ್ಲೂ ಕ್ಯಾಟ್ ಸಂಸ್ಥೆ ಗ್ರಾಹಕರನ್ನು ಸೆಳೆಯುತ್ತಿದೆ ಜತೆಗೆ ಪರಿಸರ ಸ್ನೇಹಿ ಸರಕನ್ನೂ ಉತ್ಪಾದಿಸುತ್ತಿದೆ.
ಅನೇಕ ಸವಾಲುಗಳೂ ಇವೆ
ಪರಿಸರ ಸ್ನೇಹಿ ಉತ್ಪಾದನೆ ಅಥವಾ ಏನಾದರೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದಾಗ ಅಲ್ಲಿ ತೊಂದರೆಗಳ ಸರಮಾಲೆ ಖಂಡಿತ. ಬ್ರಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಕೈಗಾರಿಕೆಗಳೊಂದಿಗೆ ಸೆನೆಸಬೇಕಾದರೆ ನಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಸದ್ಯಕೆ ನಾವು ದಿನಕ್ಕೆ 5 ಸಾವಿರ ಕಾಗದದ ಹಾಳೆಗಳನ್ನು ಉತ್ಪಾದಿಸುತ್ತಿದ್ದೇವೆ. ಅಲ್ಲದೇ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ಅದರ ಶೇಖರಣಾ ಸಾಮರ್ಥ್ಯವೂ ಹೆಚ್ಚಿಸಿಕೊಳ್ಳಬೇಕಿದೆ. ಬೆಲೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿತಗೊಳಿಸಿ ಬೆಡಿಕೆ ಹೆಚ್ಚಿಸಿಕೊಳ್ಳುವ ಅಗತ್ಯತೆ ಇದೆ ಎನ್ನುತ್ತರೆ ಕಾವ್ಯಾ ಅವರು.
ಒಂದು ಮರವನ್ನು ಬೆಳೆಸಲು ಕನಿಷ್ಟ 7ರಿಂದ 20 ವರ್ಷ ಸಮಯ ಬೇಕಾಗುತ್ತದೆ. ಇಂದು ಜನಸಂಖ್ಯೆ ಮತ್ತು ತ್ಯಾಜ್ಯವೂ ತೀವ್ರ ಗತಿಯಲ್ಲಿ ಹೆಚ್ಚುತ್ತಿದೆ. ನಾವು ಇದನ್ನು ಸದುಪಯೋಗ ಪಡೆದುಕೊಂಡು ಪರಿಸರ ಸಂರಕ್ಷಣೆಗೆ ಪಣ ತೋಡಬೇಕು. ಮುಂದೆ ಜಗತ್ತಿನ ಹಲವಾರ ಕೈಗಾರಿಕೆಗಳು ಮರಮುಕ್ತ ಕಾಗದದತ್ತ ಮುಖಮಾಡಬಹುದು ಎಂದು ನಂಬಿದ್ದೇನೆ ಎನ್ನುತ್ತಾರೆ ಕಾವ್ಯಾ ಅವರು.
-ಶಿವಾನಂದ ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.