ಮತ್ತೆ ವುಹಾನ್‌ಗೆ ತೆರಳಲು ತ್ರಿಶೂರ್‌ನ ಯುವತಿ ಸಿದ್ಧತೆ ; ಚಿಗುರಿದ ಸೋಂಕಿತೆಯ ಕನಸು
Team Udayavani, Jan 31, 2022, 6:40 AM IST
ಸಾಂದರ್ಭಿಕ ಚಿತ್ರ.
ಕೊಚ್ಚಿ: ಕೊರೊನಾ ಎಷ್ಟರಮಟ್ಟಿಗೆ ಜನಜೀವನವನ್ನು ನಲುಗಿಸಿದೆಯೆಂದರೆ, ಸೋಂಕಿನ ಮೂಲವಾದ “ವುಹಾನ್’ನ ಹೆಸರು ಕೇಳಿದರೂ ಜನ ಬೆಚ್ಚಿಬೀಳುತ್ತಾರೆ. ಆದರೆ, ಭಾರತದ ಮೊದಲ ಸೋಂಕಿತೆ, ಕೇರಳದ ತ್ರಿಶೂರ್‌ನ ಈ ಯುವತಿ ಮಾತ್ರ ಮತ್ತೆ ಚೀನಾದ ವುಹಾನ್‌ಗೆ ತೆರಳಲು ರೆಡಿಯಾಗಿ ಕುಳಿತಿದ್ದಾಳೆ!
ಹೌದು. ವುಹಾನ್‌ನ ಮೆಡಿಕಲ್ ಕಾಲೇಜಿನಲ್ಲಿ ಕಲಿತು ವೈದ್ಯೆಯಾಗಬೇಕು ಎನ್ನುವುದು ಅವಳ ಬಾಲ್ಯದ ಕನಸಾಗಿತ್ತು. ಅದರಂತೆ, ಆಕೆ ವುಹಾನ್‌ನಲ್ಲಿ ವೈದ್ಯಕೀಯ ಕೋರ್ಸ್‌ಗೆ ಸೇರ್ಪಡೆಯಾಗಿದ್ದಳು. ಆದರೆ, ಸರಿಯಾಗಿ 2 ವರ್ಷಗಳ ಹಿಂದೆ ಅಂದರೆ 2020ರ ಜನವರಿ 30ರಂದು ಆಕೆಯ ದೇಹವನ್ನು ಕೊರೊನಾ ಪ್ರವೇಶಿಸಿತ್ತು. ಆ ಮೂಲಕ ಕೊರೊನಾ ಸೋಂಕು ದೃಢಪಟ್ಟ ಮೊದಲ ಭಾರತೀಯಳು ಎಂಬ ಹಣೆಪಟ್ಟಿ ಆಕೆಗೆ ದಕ್ಕಿತ್ತು. ಸೋಂಕು ದೃಢಪಡುವ ವಾರದ ಮುಂಚೆಯಷ್ಟೇ ಆಕೆ ಭಾರತಕ್ಕೆ ಬಂದಿದ್ದಳು.
ಮತ್ತೆ ವುಹಾನ್‌ಗೆ:
ಸ್ವದೇಶಕ್ಕೆ ಬಂದ ಬಳಿಕ ಆಕೆ ಕಳೆದ ಡಿಸೆಂಬರ್‌ನಲ್ಲಿ ಆನ್‌ಲೈನ್ ಮೂಲಕವೇ ಎಂಬಿಬಿಎಸ್ ಕೋರ್ಸ್ ಪೂರ್ಣಗೊಳಿಸಿದ್ದಾಳೆ. ಆದರೆ, ಪದವಿ ಸಿಗಬೇಕೆಂದರೆ ವುಹಾನ್‌ಗೆ ವಾಪಸಾಗಲೇಬೇಕು ಎಂಬುದು ಚೀನಾ ಸರ್ಕಾರದ ನಿಯಮ. ಅದರಂತೆ, ಎಂಬಿಬಿಎಸ್ ವಿದ್ಯಾರ್ಥಿಗಳು 52 ವಾರಗಳ ಕಾಲ ಅಲ್ಲಿನ ಆಸ್ಪತ್ರೆಗಳಲ್ಲಿ ಇಂಟರ್ನ್ಶಿಪ್ ಮಾಡಬೇಕು. ಹೀಗಾಗಿ, ತಾನೂ ವುಹಾನ್‌ಗೆ ತೆರಳಿ ವೈದ್ಯೆಯಾಗುವ ತನ್ನ ಕನಸನ್ನು ನನಸು ಮಾಡಲು ಯುವತಿ ಮುಂದಾಗಿದ್ದಾಳೆ.
ಇದನ್ನೂ ಓದಿ:ರಾಜ್ಯದಲ್ಲಿ ಕಡಿಮೆಯಾಗುತ್ತಲೇ ಇವೆ ಕೋವಿಡ್ ಕೇಸ್ : ಇಂದು 68 ಸಾವು
ಈಕೆ ಮಾತ್ರವಲ್ಲದೇ, ಭಾರತದ ನೂರಾರು ವಿದ್ಯಾರ್ಥಿಗಳು ಈಗ ವುಹಾನ್‌ಗೆ ತೆರಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಭಾರತ ಸರ್ಕಾರವು ಚೀನಾದೊಂದಿಗೆ ಮಾತುಕತೆ ನಡೆಸಿ, ವಿದ್ಯಾರ್ಥಿಗಳ ಕೋರ್ಸ್ ಕಂಪ್ಲೀಟ್ ಮಾಡಲು ಅನುವು ಮಾಡಿಕೊಡಬೇಕು ಎನ್ನುವುದು ಆಕೆಯ ತಂದೆಯ ಕೋರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.