ಕೇರಳ, ಗೋವಾ ಮಾದರಿ ಸಿಆರ್‌ಝಡ್ ನಿಯಮ: ಸಿಎಂ
Team Udayavani, Oct 14, 2021, 6:30 AM IST
ಮಂಗಳೂರು/ ಉಡುಪಿ: ಕೇರಳ, ಗೋವಾ ಮಾದರಿಯ ಸಿಆರ್ ಝಡ್ ನಿಯಮ ಕರ್ನಾಟಕದಲ್ಲೂ ಜಾರಿ ಯಾದರೆ ಪ್ರವಾಸೋದ್ಯಮಕ್ಕೆ ಅನುಕೂಲ ವಾಗಲಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕೇರಳ, ಗೋವಾದಲ್ಲಿ ಪ್ರವಾಸೋ ದ್ಯಮಕ್ಕೆ ಪೂರಕವಾಗಿ ಸಿಆರ್‌ಝಡ್ ನಿಯಮ ಸರಳವಾಗಿದೆ. ಇದೇ ಮಾದರಿ ಇಲ್ಲೂ ಜಾರಿಗೊಳ್ಳಬೇಕು. ಬೀಚ್, ಯಾತ್ರಾಸ್ಥಳ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಸೂಚಿಸಲಾಗಿದೆ ಎಂದರು.
ಕರಾವಳಿ ಭಾಗದ ಮೀನುಗಾರಿಕೆ, ಬಂದರು ಮತ್ತು ವಾಣಿಜ್ಯ ಬೆಳವಣಿಗೆಗೆ ಪೂರಕವಾಗುವ ತ್ವರಿತ ನಿರ್ಧಾರ ಕೈಗೊಳ್ಳುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಎನ್‌ಎಂಪಿಟಿ, ಕಾರವಾರ ಬಂದರು ವಿಸ್ತರಣೆಯನ್ನು ಇದರಲ್ಲಿ ಅಳವಡಿಸಲಾಗುವುದು ಎಂದರು.
ದಸರಾ ಬಳಿಕ ಗಡಿ ನಿರ್ಬಂಧ ಸಡಿಲಿಕೆ
ಕೊರೊನಾ ನಿಯಂತ್ರಣಕ್ಕಾಗಿ ಕೇರಳ, ಮಹಾರಾಷ್ಟ್ರ ಗಡಿಗಳಲ್ಲಿ ಇರುವ ಕಠಿನ ನಿಯಮಗಳನ್ನು ಸಡಿಲಿಸುವ ಬಗ್ಗೆ ದಸರಾ ಹಬ್ಬದ ಬಳಿಕ ತಜ್ಞರ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ:ರಾಜನಾಥ ಸಿಂಗ್ ಗೆ ಸುಳ್ಳು ಹೇಳಲು ಹೇಳಿಕೊಟ್ಟಿದ್ಯಾರು: ಓವೈಸಿ
ಭತ್ತಕ್ಕೆ ಬೆಂಬಲ ಬೆಲೆ; ಸಮಿತಿಯಲ್ಲಿ ತೀರ್ಮಾನ
ಭತ್ತದ ಬೆಂಬಲ ಬೆಲೆ ಘೋಷಣೆ ಅಕ್ಟೋಬರ್‌ನಲ್ಲಿ ಆಗಬೇಕು ಎಂಬ ಕರಾವಳಿಯ ರೈತರ ಆಗ್ರಹದ ಬಗ್ಗೆ ಉತ್ತರಿಸಿದ ಮುಖ್ಯಮಂತ್ರಿ, “ಬೆಂಬಲ ಬೆಲೆ ವಿಚಾರ ತೀರ್ಮಾನಕ್ಕೆ ಪ್ರತ್ಯೇಕ ಸಮಿತಿಯಿದೆ. ಅಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು. “ಭತ್ತ ಬೆಂಬಲ ಬೆಲೆ ಘೋಷಣೆ ಅಕ್ಟೋಬರ್‌ನಲ್ಲೇ ಆಗಲಿ’ ಎಂಬ ಕರಾವಳಿ ರೈತರ ಆಗ್ರಹದ ಕುರಿತು “ಉದಯವಾಣಿ’ ಬುಧವಾರ ವಿಶೇಷ ವರದಿ ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.