ಕಸವು ಕನ್ಯೆ! ಸೀರೆಯಲ್ಲಿ ಸುಂದರಾಂಗಿ…
Team Udayavani, Oct 1, 2020, 7:46 PM IST
ಮಲಯಾಳಿ ಸೆಟ್ ಸೀರೆ ಎಂದೇ ಹೆಸರಾಗಿರುವ ಕಸವು ಸೀರೆಗಳಿಗೆ ವಿದೇಶಗಳಲ್ಲೂ ಬೇಡಿಕೆ ಇದೆ. ನೋಡಲೂ ಅಂದ, ಉಡಲು ಆರಾಮದಾಯಕ ಆಗಿರುವುದು ಈ ಸೀರೆಗಳ ಹೆಚ್ಚುಗಾರಿಕೆ.
ಸ್ವರ್ಣದ ಜರಿ ಉಳ್ಳ ಮಬ್ಬು ಬಿಳುಪು ಅಥವಾ ಬಿಳಿಬಣ್ಣದ ಸೀರೆಯನ್ನು ಮಲಯಾಳಿ ಸೆಟ್ ಸೀರೆ ಅಂತ ಕರೆಯುತ್ತಾರೆ. ಆದರೆ ಇದರ ನಿಜವಾದ ಹೆಸರುಕಸವು ಸೀರೆ.ಕೈಮಗ್ಗದಿಂದ ನೇಯಲಾಗುವ ಈ ವಿಶಿಷ್ಟ ಸೀರೆಯನ್ನು ಹಿಂದೆ ರಾಜಮನೆತನಕ್ಕೆ ಸೇರಿದವರು ಉಡುತ್ತಿದ್ದರು. ನಂತರ ಜನಸಾಮಾನ್ಯರು ಮದುವೆ, ಹಬ್ಬ- ಹರಿದಿನಗಳಲ್ಲಿ ಉಡಲು ಆರಂಭಿಸಿದರು.2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹದಿಂದ, ಬಹಳಷ್ಟು ನೇಕಾರರುಕಷ್ಟಕ್ಕೆ ಸಿಕ್ಕಿಕೊಂಡರು. ಪ್ರವಾಹದ ಸಂದರ್ಭದಲ್ಲಿ ಎಷ್ಟೋ ಕೈಮಗ್ಗಗಳು ನೀರಿನಲ್ಲಿ ಕೊಚ್ಚಿಹೋದವು,ಕೆಲವು ಮುರಿದುಹೋದವು. ಹೀಗಾಗಿ ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾಯಿತು.
ಆನಂತರದ ದಿನಗಳಲ್ಲಿ ಈ ಕೈಮಗ್ಗಕ್ಕೆ ಬೇಡಿಕೆ ಹೆಚ್ಚಿಸಲುಕೆಲವು ಎನ್.ಜಿ.ಓ.ಗಳು ಮುಂದಾದವು. ಮೇಕ್‌ಓವರ್ ಪಡೆದಕಸವು ಸೀರೆಗಳನ್ನು ತಯಾರಿಸಿ ಅವುಗಳಿಗೆ ಮಾರುಕಟ್ಟೆ ಸೃಷ್ಟಿಸಲು ಮುಂದೆಬಂದವು. ಇವುಗಳನ್ನು ಮಾಡರ್ನ್ ಕಸವು ಸೀರೆ ಎನ್ನಲಾಗುತ್ತದೆ. ತಿಳಿಹಸಿರು,ಕಂದು, ಬೂದು, ಹಳದಿ, ಗುಲಾಬಿ,ಕೇಸರಿ, ಕೆಂಪು, ನೀಲಿ, ಮುಂತಾದ ತಿಳಿಬಣ್ಣದಕಸವು ಸೀರೆಗಳನ್ನು ನೇಯಲು ನೇಕಾರರಿಗೆ ಉತ್ತೇಜನ ನೀಡಿದವು. ಇಷ್ಟಾದಮೇಲೆ, ಈ ಸೀರೆಗಳಿಗೆಕೇರಳದಲ್ಲಷ್ಟೇ ಅಲ್ಲ, ಅನ್ಯರಾಜ್ಯಗಳಲ್ಲೂ ಬೇಡಿಕೆ ಹೆಚ್ಚಾಯಿತು.
ಆನ್‌ಲೈನ್ ಮೂಲಕ ಬಹಳಷ್ಟು ಜನ ಈಗ ಬಟ್ಟೆ-ಬರೆ ಖರೀದಿಸುವ ಕಾರಣ, ಈ ಸೀರೆಗಳು ದೇಶದ ಮೂಲೆಮೂಲೆಗೂ ತಲುಪಿದವು. ನೋಡಲೂ ಅಂದ, ಉಡಲೂ ಆರಾಮದಾಯಿಕ ಆಗಿರುವಕಸವು ಸೀರೆಗಳಿಗ ವಿದೇಶಗಳಲ್ಲೂ ಬೇಡಿಕೆ ಇದೆ! ಇವುಗಳನ್ನುಕಚೇರಿಗೂ ಉಟ್ಟು ಕೊಂಡು ಹೋಗಬಹುದು. ಅಧ್ಯಾಪಕಿಯರು, ವಾರ್ತಾವಾಚಕರು, ಕಲೆಯತ್ತ ಒಲವು ಹೊಂದಿರುವವರು, ಶಾಸ್ತ್ರೀಯ ನೃತ್ಯಗಾರ್ತಿಯರು, ಸಾಹಿತಿಗಳು, ರಂಗಕಲಾವಿದರು, ಹೀಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಕೆಲಸ ಮಾಡುವ ಮಹಿಳೆಯರಿಗೆ ಈ ಸೀರೆಗಳ ಮೇಲೆ ಒಲವು ಇದೆ.
ಇವು ತೀರಾ ಸಾಂಪ್ರದಾಯಿಕವೂ ಅಲ್ಲ, ಅತೀ ಆಧುನಿಕವೂ ಅಲ್ಲ. ಹಾಗಾಗಿಯೇ ಇವುಗಳಿಗೆ ಬೇಡಿಕೆ ಹೆಚ್ಚು ಎಂದರೆ ತಪ್ಪಾಗಲಾರದು. ಪೂರ್ತಿ ಸೀರೆ ಸಾಲಿಡ್ ಕಲರ್ಡ್ (ಒಂದೇ ಬಣ್ಣದ್ದು) ಆಗಿದ್ದು,ಕೇವಲ ರವಿಕೆ ಬೇರೆ ಬಣ್ಣದ್ದೂ ಆಗಿರಬಹುದು. ಸೀರೆಗೆ ಮ್ಯಾಚ್ ಆಗದೆ ಇರುವ ಬಣ್ಣದ ರವಿಕೆಯನ್ನೂ ತೊಡಬಹುದು. ನಿಮ್ಮಲ್ಲೂ ಕಸವು ಸೀರೆಗಳಿದ್ದರೆ ಅವುಗಳನ್ನು ಉಟ್ಟು ಮೆರೆಯಿರಿ. ಇಲ್ಲವೇ,ಭಾರತೀಯ ನೇಕಾರರಿಗೆ ಉತ್ತೇಜನ ನೀಡಲು ಒಂದು ಕಸವು ಸೀರೆಯನ್ನಾದರೂ ಖರೀದಿಸಿ.
– ಅದಿತಿಮಾನಸ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.