ಸುರಕ್ಷತೆ ಹಿನ್ನೆಲೆ ನಿಮ್ಮ ಕಾರು ಅಥವಾ ಬೈಕ್ ಇದ್ದಲ್ಲಿಗೇ ಕೆಎಫ್ ಸಿ ಉತ್ಪನ್ನಗಳ ಡೆಲಿವರಿ

ಈ ಯೋಜನೆಯನ್ನು ಬೆಂಗಳೂರು, ಪುಣೆ, ಮುಂಬೈ, ಚೆನ್ನೈ ಮತ್ತು ದೆಹಲಿಯ ಕೆಲವು ಆಯ್ದ ಕೆಎಫ್ ಸಿ ರೆಸ್ಟೋರೆಂಟ್ ಗಳಲ್ಲಿ ಆರಂಭ

Team Udayavani, May 24, 2020, 8:15 PM IST

ಸುರಕ್ಷತೆ ಹಿನ್ನೆಲೆ ನಿಮ್ಮ ಕಾರು ಅಥವಾ ಬೈಕ್ ಇದ್ದಲ್ಲಿಗೇ ಕೆಎಫ್ ಸಿ ಉತ್ಪನ್ನಗಳ ಡೆಲಿವರಿ

KFC Launches contactless delivery

ಬೆಂಗಳೂರು: ಗ್ರಾಹಕರು ಮತ್ತು ತನ್ನ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಕೆಎಫ್ ಸಿ ಸುರಕ್ಷಾ ವಿಧಾನಗಳನ್ನು ದ್ವಿಗುಣಗೊಳಿಸಿದ್ದು, ಗ್ರಾಹಕರ ಕಾರು ಅಥವಾ ಬೈಕು ಇರುವೆಡೆಗೇ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆಯನ್ನು ಆರಂಭಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಪರ್ಕ ರಹಿತ ಸೇವೆಗಳನ್ನು ವಿಸ್ತರಣೆ ಮಾಡಿರುವ ಕೆಎಫ್ ಸಿ ದೇಶದಲ್ಲಿ ಇದೇ ಮೊದಲ ಬಾರಿಗೆ ಕೆಎಫ್ ಸಿ ಟು ಯುವರ್ ಕಾರ್ Or ಬೈಕ್ ಎಂಬ ಈ ವಿನೂತನವಾದ ಯೋಜನೆಯನ್ನು ಆರಂಭಿಸಿದೆ. ಇದರ ಮೂಲಕ ಗ್ರಾಹಕರ ವಾಹನದ ಬಳಿಗೆ ಹೋಗಿ ಆಹಾರ ಉತ್ಪನ್ನಗಳ ಪ್ಯಾಕೆಟ್ ಗಳನ್ನು ನೀಡಲಿದೆ. ಇದಕ್ಕಾಗಿ ಗ್ರಾಹಕರು ಕೆಎಫ್ ಸಿ ಪ್ರೀಪೇಯ್ಡ್ ಆ್ಯಪ್, ವೆಬ್ ಸೈಟ್ ಅಥವಾ ಎಂ ಸೈಟ್ ಮೂಲಕ ತಮಗಿಷ್ಟವಾದ ಆಹಾರವನ್ನು ಆರ್ಡರ್ ಮಾಡಬೇಕು ಮತ್ತು ರೆಸ್ಟೋರೆಂಟ್ ಸಮೀಪ ನಿಗದಿಪಡಿಸುವ ಸ್ಥಳಕ್ಕೆ ಬಂದು ನಿಲ್ಲಬೇಕು. ಆಗ ಗ್ರಾಹಕರಿಗೆ ಕೆಎಫ್ ಸಿ ಸಿಬ್ಬಂದಿ ಬಂದು ಆರ್ಡರ್ ಅನ್ನು ನೀಡಲಿದ್ದಾರೆ.

ಈ ಯೋಜನೆಯನ್ನು ಬೆಂಗಳೂರು, ಪುಣೆ, ಮುಂಬೈ, ಚೆನ್ನೈ ಮತ್ತು ದೆಹಲಿಯ ಕೆಲವು ಆಯ್ದ ಕೆಎಫ್ ಸಿ ರೆಸ್ಟೋರೆಂಟ್ ಗಳಲ್ಲಿ ಆರಂಭಿಸಿದ್ದು, ಇದರಲ್ಲಿ ಯಶಸ್ಸನ್ನು ಕಂಡಿದೆ.

ಈ ಯೋಜನೆ ಬಗ್ಗೆ ಮಾತನಾಡಿದ ಕೆಎಫ್ ಸಿ ಇಂಡಿಯಾದ ಚೀಫ್ ಮಾರ್ಕೆಟಿಂಗ್ ಆಫೀಸರ್ ಮೋಕ್ಷ್ ಚೋಪ್ರಾ ಅವರು, ಕೆಎಫ್ ಸಿ ಟು ಯುವರ್ ಕಾರ್ or ಬೈಕ್’ ನೊಂದಿಗೆ ಕೆಎಫ್ ಸಿ ಉತ್ಪನ್ನಗಳನ್ನು ತಲುಪಿಸುವುದು ಸುಲಭವಾಗಿದೆ. ಇದರ ಉದ್ದೇಶ ಹೆಚ್ಚಿನ ಸುರಕ್ಷತೆಯನ್ನು ಕಾಪಾಡುವುದು. ಅಲ್ಲದೇ, ಆಹಾರ ಉತ್ಪನ್ನಗಳಿಗಾಗಿ ರಸ್ತೆಗಳಲ್ಲಿ ಹುಡುಕಾಟ ನಡೆಸುವವರಿಗೆ ಅಥವಾ ತಮ್ಮ ಕಠಿಣ ಶಿಫ್ಟ್ ಗಳನ್ನು ಮುಗಿಸಿ ಸುಸ್ತಾಗಿ ಮನೆಯ ಕಡೆ ಹೊರಟಿರುವವರಿಗೆ ಆಹಾರ ತಲುಪಿಸುವುದಾಗಿದೆ.

ಸ್ಯಾನಿಟೈಸೇಷನ್, ಸಾಮಾಜಿಕ ಅಂತರ, ಸ್ಕ್ರೀನಿಂಗ್ ಮತ್ತು ಸಂಪರ್ಕರಹಿತ ಸೇವೆಯಂತ ಸುರಕ್ಷತಾ ಕ್ರಮಗಳ ಆಧಾರಿತ ಸೇವೆ ಇದಾಗಿದೆ. ಕೆಎಫ್ ಸಿ ಆ್ಯಪ್ ಬಳಕೆ ಮತ್ತು ಡಿಜಿಟಲ್ ಪೇಮೆಂಟ್ ಮೂಲಕ ಈ ಸೇವೆಯನ್ನು ಸುಲಭವಾಗಿ, ತ್ವರಿತವಾಗಿ ಮತ್ತು ಸಂಪೂರ್ಣ ಸಂಪರ್ಕರಹಿತವಾಗಿ ಮಾಡಬಹುದು. ಗ್ರಾಹಕರ ಪ್ರತಿಕ್ರಿಯೆ ಮತ್ತು ಲಭ್ಯತೆಯನ್ನು ಗಮನಿಸಿ ಈ ಸೇವೆಯನ್ನು ಇತರೆ ನಗರಗಳಿಗೂ ವಿಸ್ತರಣೆ ಮಾಡಲಿದ್ದೇವೆ” ಎಂದು ಹೇಳಿದರು.

ಕಾರು ಅಥವಾ ಬೈಕ್ ಬಳಿಗೆ ಕೆಎಫ್ ಸಿ ಆರ್ಡರ್ ಮಾಡುವುದು ಹೇಗೆ? ಇದು ಅತ್ಯಂತ ಸುಲಭ. ನೀವು ಕೆಎಫ್ ಸಿ ಆ್ಯಪ್, ವೆಬ್ ಸೈಟ್ ಅಥವಾ ಎಂಸೈಟ್ ನಲ್ಲಿ ಟೇಕ್ ಅವೇ ಮತ್ತು `ಕೆಎಫ್ ಸಿ ಟು ಯುವರ್ ಕಾರ್/ಬೈಕ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಿಮಗೆ ಸೂಕ್ತವಾದ ಡೆಲಿವರಿ ಸಮಯ, ವಾಹನದ ಸಂಖ್ಯೆ ಇತ್ಯಾದಿ ಮಾಹಿತಿಯನ್ನು ನಮೂದಿಸಬೇಕು. ಆರ್ಡರ್ ಖಾತರಿಯಾದ ನಂತರ ರೆಸ್ಟೋರೆಂಟ್ ಮ್ಯಾನೇಜರ್ ಅವರಿಂದ ನಿಮಗೆ ಕರೆ ಬರುತ್ತದೆ ಮತ್ತು ಅವರು ರೆಸ್ಟೋರೆಂಟ್ ನ ವಿಳಾಸ, ಪಿಕಪ್ ಮತ್ತು ಸ್ಥಳದ ಮಾಹಿತಿಯನ್ನು ತಿಳಿಸುತ್ತಾರೆ. ನಿಮ್ಮ ಆರ್ಡರ್ ಸಿದ್ಧವಾದ ತಕ್ಷಣ ಮತ್ತೊಮ್ಮೆ ಕರೆ ಮಾಡಿ ಮ್ಯಾನೇಜರ್ ಮಾಹಿತಿ ನೀಡಲಿದ್ದಾರೆ.

ನೀವು ನಿಗದಿತ ಸ್ಥಳಕ್ಕೆ ಹೋದಾಗ ರೆಸ್ಟೋರೆಂಟ್ ಸಿಬ್ಬಂದಿ ನೀವು ಆರ್ಡರ್ ಮಾಡಿದ ಆಹಾರ ಉತ್ಪನ್ನವನ್ನು ನೀವಿದ್ದಲ್ಲಿಗೆ ಬಂದು ನೀಡಲಿದ್ದಾರೆ. ಕೆಎಫ್ ಸಿ ಟು ಯುವರ್ ಕಾರ್/ಬೈಕ್ ಸೇವೆ ಬೆಂಗಳೂರು ಮತ್ತು ದೆಹಲಿಯ ಆಯ್ದ ರೆಸ್ಟೋರೆಂಟ್ ಗಳಲ್ಲಿ ಲಭ್ಯವಿದೆ. ಇನ್ನುಳಿದಂತೆ ದೇಶದ ವಿವಿಧ ನಗರಗಳ ರೆಸ್ಟೋರೆಂಟ್ ಗಳಲ್ಲಿ ಕಾಂಟ್ಯಾಕ್ಟ್ ಲೆಸ್ ಟೇಕ್ ಅವೇ ಸೇವೆ ಲಭ್ಯವಿದೆ. ಗ್ರಾಹಕರು ಕೆಎಫ್ ಸಿ ಆ್ಯಪ್ ನೊಂದಿಗೆ ಕೆಎಫ್ ಸಿಯ ತಮ್ಮ ನೆಚ್ಚಿನ ಆಹಾರಗಳನ್ನು ಪಡೆದುಕೊಳ್ಳಬಹುದಾಗಿದೆ.

ಟಾಪ್ ನ್ಯೂಸ್

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Americ ಚುನಾವಣೆ ಎಫೆಕ್ಟ್:‌ ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ

US elections ಎಫೆಕ್ಟ್:‌ ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ

UPI: ದೇಶದಲ್ಲಿ ಯುಪಿಐ ವಿಕ್ರಮ ಅಕ್ಟೋಬರ್‌ನಲ್ಲಿ ದಾಖಲೆ

UPI: ದೇಶದಲ್ಲಿ ಯುಪಿಐ ವಿಕ್ರಮ ಅಕ್ಟೋಬರ್‌ನಲ್ಲಿ ದಾಖಲೆ

1-a-google-MPa

Google;ಗೂಗಲ್‌ ಮ್ಯಾಪ್‌ ಜತೆ ಮಾತಾಡುತ್ತಾ ಡ್ರೈವ್‌ ಮಾಡಬಹುದು

Google

Russian Court; ಗೂಗಲ್‌ಗೆ 20 ಡೆಸಿಲಿಯನ್‌ ದಂಡ

sens-2

Deepavali; ಮುಹೂರ್ತ ಟ್ರೇಡಿಂಗ್‌ನಲ್ಲಿ 448 ಅಂಕ ಏರಿದ ಸೆನ್ಸೆಕ್ಸ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.