ಖೇಲೋ ಇಂಡಿಯಾ ಕ್ರೀಡಾಕೂಟ: ಆತಿಥೇಯ ಜೈನ್ ವಿವಿಗೆ ಸಮಗ್ರ ಪ್ರಶಸ್ತಿ
Team Udayavani, May 3, 2022, 10:57 PM IST
ಬೆಂಗಳೂರು: ಸತತ 10 ದಿನಗಳ ಕಾಲ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ -21 ಮಂಗಳವಾರ ಮುಕ್ತಾಯವಾ ಯಿತು. ಸಮಾರೋಪದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಪಾಲ್ಗೊಂಡು ಕಳೆ ಹೆಚ್ಚಿಸಿದರು. ಅಂತಿಮ ದಿನ ಕಬಡ್ಡಿ ಮತ್ತು ಫುಟ್ ಬಾಲ್ ಪಂದ್ಯಗಳ ಫೈನಲ್ ಸ್ಪರ್ಧೆಗಳು ನಡೆದವು.
ನಿರೀಕ್ಷೆಯಂತೆಯೇ ಕೂಟದ ಆತಿಥ್ಯ ವಹಿಸಿದ್ದ ಜೈನ್ ವಿಶ್ವವಿದ್ಯಾಲಯ ಗರಿಷ್ಠ 20 ಚಿನ್ನಗಳೊಂದಿಗೆ ಸಮಗ್ರ ಚಾಂಪಿಯನ್ ಆಯಿತು. 17 ಚಿನ್ನ ಗೆದ್ದ ಲವ್ಲಿ ಪ್ರೊಫೆಶನಲ್ ವಿವಿ ದ್ವಿತೀಯ ಸ್ಥಾನ ಪಡೆಯಿತು. ಆ್ಯತ್ಲೆಟಿಕ್ಸ್‌ನಲ್ಲಿ ಮಂಗಳೂರು ವಿವಿ ಈ ಬಾರಿಯೂ ಗರಿಷ್ಠ ಪದಕ ಗಳಿಸಿತು.
ಕೋಟ ವಿವಿ ಕಬಡ್ಡಿ ಚಿನ್ನ
ಪುರುಷರ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಿವಾನಿಯ ಚೌಧರಿ ಬನ್ಸಿಲಾಲ್ ವಿವಿ ಯನ್ನು ಕೋಟ ವಿಶ್ವವಿದ್ಯಾಲಯ 37-52 ಅಂಕಗಳಿಂದ ಮಣಿಸಿ ಚಿನ್ನ ಜಯಿಸಿತು. ಪಂದ್ಯದ ಆರಂಭದಲ್ಲಿ ಉತ್ತಮವಾಗಿಯೇ ಆಡಿದ್ದ ಬನ್ಸಿಲಾಲ್ ವಿವಿ ನಂತರ ಹಿಡಿತ ಕಳೆದುಕೊಂಡು ಬೆಳ್ಳಿಗೆ ಸಮಾಧಾನಗೊಂಡಿತು. ಕಂಚಿನ ಪದಕವನ್ನು ಸಿ.ವಿ.ರಾಮನ್ ವಿವಿ, ಪಂಜಾಬ್ ವಿವಿಗಳು ಪಡೆದವು.
ವನಿತೆಯರ ಫೈನಲ್ ಪಂದ್ಯದಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯವು 46-19 ಅಂಕಗಳ ಅಂತರದಲ್ಲಿ ಮಹರ್ಷಿ ದಯಾನಂದ ವಿವಿಯನ್ನು ಮಣಿಸಿ ಚಿನ್ನ ಪಡೆಯಿತು. ದಯಾನಂದ ವಿವಿ ಬೆಳ್ಳಿಗೆ ಸಮಾಧಾನಗೊಂಡರೆ, ಸಾವಿತ್ರಿಬಾಯಿ ಫುಲೆ ಮತ್ತು ಹಿಮಾಚಲಪ್ರದೇಶ ವಿವಿಗಳು ಕಂಚಿನ ಪದಕ ಗೆದ್ದವು.
ಹಾಕಿ ತಂಡಗಳಿಗೆ ಸನ್ಮಾನ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತ ಪುರುಷರ ಹಾಕಿ ತಂಡವನ್ನು ಸನ್ಮಾನಿಸಲಾಯಿತು. ನಾಯಕ ಮನ್‌ಪ್ರೀತ್ ಸಿಂಗ್ ತಮ್ಮ ತಂಡದೊಂದಿಗೆ ಹಾಜರಾಗಿದ್ದರು. ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ಭಾರತ ಮಹಿಳಾ ಹಾಕಿ ತಂಡವನ್ನೂ ಅಮಿತ್ ಶಾ ಅವರು ಸಮ್ಮಾನಿಸಿದರು. ಇಲ್ಲಿ ತಂಡದೊಂದಿಗೆ ನಾಯಕಿ ರಾಣಿ ರಾಮ್‌ಪಾಲ್ ಹಾಜರಿದ್ದರು.
ರಾಷ್ಟ್ರೀಯ ದಾಖಲೆಗಳು
ಖೇಲೋ ಇಂಡಿಯಾ ಯೂನಿವ ರ್ಸಿಟಿ ಗೇಮ್ಸ್‌ನ 2ನೇ ಆವೃತ್ತಿಯಲ್ಲಿ 2 ನೂತನ ರಾಷ್ಟ್ರೀಯ ದಾಖಲೆಗಳು ನಿರ್ಮಾಣಗೊಂಡವು. ಈ ಎರಡನ್ನೂ ಕರ್ನಾಟಕದ ವಿವಿಗಳ ಕ್ರೀಡಾಪಟುಗಳೇ ನಿರ್ಮಿಸಿದರು ಎಂಬುದು ಗಮನಾರ್ಹ. ಮಂಗಳೂರು ವಿಶ್ವವಿದ್ಯಾಲಯದ ವೇಟ್‌ಲಿಫ್ಟರ್ ಆ್ಯನ್ ಮರಿಯಾ +87 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಅವರು ಕ್ಲೀನ್ ಮತ್ತು ಜೆರ್ಕ್‌ನಲ್ಲಿ 129 ಕೆಜಿ ತೂಕ ಎತ್ತಿದರು. ಜೈನ್ ವಿಶ್ವವಿದ್ಯಾಲಯದ ಶಿವ ಶ್ರೀಧರ್ 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ 2 ನಿಮಿಷ, 05.43 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.