ಪಾಕ್‌ನಲ್ಲಿ ಹಿಂದೂ ಉದ್ಯಮಿಯ ಅಪಹರಣ
Team Udayavani, Aug 5, 2023, 6:53 AM IST
ಕರಾಚಿ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಅಪರಾಧ ಕೃತ್ಯಗಳು ದಿನೇ ದಿನೆ ಹೆಚ್ಚುತ್ತಿವೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕಾಶ್ಮೋರ್ ಜಿಲ್ಲೆಯಲ್ಲಿ ಹಿಂದೂ ಉದ್ಯಮಿಯನ್ನು ಅಪಹರಿಸಿ, ಹಿಂಸೆ ನೀಡಲಾಗಿದೆ. ಬಿಡುಗಡೆಗೆ ಅಪಹರಣಕಾರರು 5 ಕೋಟಿ ಪಾಕಿಸ್ತಾನಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ.
ಜು.20ರಂದು ಉದ್ಯಮಿ ಜಗದೀಶ್ ಕುಮಾರ್ ಮುಕ್ಕಿ ಅವರನ್ನು ಅಪರಿತರು ಅಪಹರಿಸಿದ್ದಾರೆ. ಅಲ್ಲದೇ ಅವರ ಕುತ್ತಿಗೆ, ಕೈ-ಕಾಲುಗಳಿಗೆ ಸರಳುಗಳನ್ನು ಹಾಕಿ, ಹಿಗ್ಗಾ-ಮುಗ್ಗಾ ಥಳಿಸಿರುವ ಅಪಹರಣಕಾರರು, ಅವರ ತಲೆಗೆ ಬಂದೂಕು ಇಟ್ಟು, ಈ ಕುರಿತ ವಿಡಿಯೋ ಅನ್ನು ಜಗದೀಶ್ ಅವರ ಪುತ್ರನಿಗೆ ಕಳುಹಿಸಿದ್ದಾರೆ. ಕೂಡಲೇ ಹಣವನ್ನು ನೀಡುವಂತೆ ಬೆದರಿಕೆ ಹಾಕಿದ್ದಾರೆ.
ಈ ಸಂಬಂಧ ಕಾಶ್ಮೋರ್ ಪೊಲೀಸ್ ಠಾಣೆಯಲ್ಲಿ ಜಗದೀಶ್ ಕುಟುಂಬದವರು ದೂರು ದಾಖಲಿಸಿದ್ದಾರೆ. ಅಲ್ಲದೇ ಕರಾಚಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕೂಡ ದೂರು ದಾಖಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ, ಸಿಖ್ ಮತ್ತು ಕ್ರೈಸ್ಥರನ್ನು ಗುರಿಯಾಸಿಕೊಂಡು ದಾಳಿಗಳು, ಅಪರಾಧಗಳು ಹೆಚ್ಚುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.