ಕಿಮ್ ಜಾಂಗ್ ಉನ್ ರೈಲು ಪ್ರತ್ಯಕ್ಷ
Team Udayavani, Apr 27, 2020, 12:30 PM IST
ಸಿಯೋಲ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ, ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಈಗಾಗಲೇ ವದಂತಿಗಳು ಹಬ್ಬಿವೆ. ಇದರ ನಡುವೆಯೇ ಕಿಮ್ ತಮ್ಮ ಪ್ರಯಾಣಕ್ಕೆ ಬಳಸುವ ಅತ್ಯಧಿಕ ಭದ್ರತೆಯ ಖಾಸಗಿ ರೈಲು ದೇಶದ ಪೂರ್ವ ಭಾಗದ ಪಟ್ಟಣದಲ್ಲಿ ಪತ್ತೆಯಾಗಿದೆ.
ಉಪಗ್ರಹ ಚಿತ್ರಗಳ ಮೂಲಕ ಈ ರೈಲು ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲಾಗಿದೆ. ಕಿಮ್ ರಾಜಧಾನಿ ಪೊಂಗ್ಯಾಂಗ್‌ನಲ್ಲಿ ಇಲ್ಲ. ಅದರ ಬದಲಾಗಿ ದೂರದ ರೆಸಾರ್ಟ್ ಟೌನ್‌ನಲ್ಲಿ ವಾಸವಾಗಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಏಕೆಂದರೆ, ಅವರ ರೈಲು ರೆಸಾರ್ಟ್ ಟೌನ್‌ನ ಲೀಡರ್‌ಶಿಪ್ ರೈಲ್ವೆ ನಿಲ್ದಾಣದಲ್ಲಿ ನಿಂತಿದೆ. ವಿಶೇಷವೆಂದರೆ, ಎ.15 ರಂದು ಸೆರೆಹಿಡಿಯಲಾದ ಆ ಪ್ರದೇಶದ ಫೋಟೋದಲ್ಲಿ ರೈಲು ಕಂಡು ಬಂದಿರಲಿಲ್ಲ. ಆದರೆ, ಎ.21ರ ನಂತರ ಅಲ್ಲಿ ರೈಲು ನಿಂತಿದೆ ಎಂದು ಫೋಟೋ ಬಿಡುಗಡೆ ಮಾಡಿರುವ ನಾರ್ತ್ ವೆಬ್ ಸೈಟ್ ವರದಿ ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.