North Korea: ರೈಲಲ್ಲೇ ಕಿಮ್ ವಿದೇಶ ಭೇಟಿ!
Team Udayavani, Sep 12, 2023, 11:45 PM IST
ಸಾಮಾನ್ಯವಾಗಿ ಎಲ್ಲಾ ದೇಶಗಳ ಸರ್ಕಾರಿ ಮುಖ್ಯಸ್ಥರು ವಿಮಾನದಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ. ಆದರೆ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರೈಲಿನಲ್ಲಿ ರಷ್ಯಾಗೆ ಆಗಮಿಸಿದ್ದಾರೆ. ಅವರು ಪ್ರಯಾಣಿಸಿದ ರೈಲಿನ ಬಗ್ಗೆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
ರೈಲಿನ ವಿಶೇಷತೆಗಳೇನು?
– ಎಲ್ಲ 90 ಬೋಗಿಗಳಿಗೂ ಗುಂಡು ನಿರೋಧಕ ವ್ಯವಸ್ಥೆ. ಯಾವುದೇ ರೀತಿಯ ಸ್ಫೋಟವನ್ನು ತಾಳಿಕೊಳ್ಳುವ ಸಾಮರ್ಥ್ಯ.
– ತುರ್ತು ಪರಿಸ್ಥಿತಿಯಲ್ಲಿ ಹೆಲಿಕಾಪ್ಟರ್ ಮೂಲಕ ಪಾರಾಗಲೂ ದಾರಿ ಇದೆ.
– ಫ್ರೆಂಚ್ ವೈನ್ ಹೊಂದಿರುವ ಒಂದು ವಿಶೇಷ ರೆಸ್ಟಾರೆಂಟ್ ಇದರೊಳಗಿದೆ.
– ಸ್ಯಾಟಲೈಟ್ ಫೋನ್ ಸಂಪರ್ಕ, ಕಾನ್ಫರೆನ್ಸ್ ರೂಮ್, ಬೆಡ್‌ರೂಮ್‌ಗಳನ್ನು ಹೊಂದಿದೆ.
1,180 ಕಿಮೀ- ಪ್ರಯಾಣಿಸಿದ ದೂರ
20 ಗಂಟೆ- ಪ್ರಯಾಣದ ಅವಧಿ
50 ಕಿಮೀ- ಪ್ರತಿ ಗಂಟೆಗೆ ರೈಲಿನ ವೇಗ
90 – ರೈಲಿನಲ್ಲಿರುವ ಬೋಗಿಗಳು
ರಷ್ಯಾಗೆ ಶಸ್ತ್ರಾಸ್ತ್ರ ಕೊಡುಗೆ?
ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಕಿಮ್ ಅವರು ವಿದೇಶ ಪ್ರವಾಸ ಕೈಗೊಂಡಿದ್ದು, ತಮ್ಮ ವೈಭವೋಪೇತ ರೈಲಿನಲ್ಲೇ ಉ.ಕೊರಿಯಾದಿಂದ ರಷ್ಯಾಗೆ ಸಂಚರಿಸಿದ್ದಾರೆ. ದೂರದ ಸ್ಥಳಕ್ಕೆ ರೈಲಿನಲ್ಲಿ ತೆರಳುವ ಪದ್ಧತಿ ಶುರು ಮಾಡಿದ್ದು ಕಿಮ್ ಜಾಂಗ್ ಉನ್ ಅವರ ತಾತ. ಅವರನ್ನೇ ಕಿಮ್ ಕೂಡ ಅನುಸರಿಸಿದ್ದಾರೆ. ರಷ್ಯಾದಲ್ಲಿ ಕಿಮ್ ಅವರು ಪುಟಿನ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಉಕ್ರೇನ್ ಯುದ್ಧಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ರಷ್ಯಾಗೆ ಪೂರೈಸುವ ಕುರಿತು, ಅದಕ್ಕೆ ಪ್ರತಿಯಾಗಿ ರಷ್ಯಾದಿಂದ ಆರ್ಥಿಕ ನೆರವು ಮತ್ತು ಸೇನಾ ತಂತ್ರಜ್ಞಾನ ವಿನಿಮಯ ಕುರಿತು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.