Pakistani: ಅರಬ್‌ ರಾಷ್ಟ್ರಗಳಲ್ಲಿ ಪಾಕ್‌ ಭಿಕ್ಷುಕರ ಸಾಮ್ರಾಜ್ಯ!

Team Udayavani, Oct 1, 2023, 1:06 AM IST

beg

ಆರ್ಥಿಕವಾಗಿ ದಿವಾಳಿ ಎದ್ದಿರುವ ಪಾಕಿಸ್ಥಾನದ ಜನರು ಒಪ್ಪೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಆಹಾರ ಧಾನ್ಯಗಳ ಸಹಿತ ಅಗತ್ಯ ವಸ್ತುಗಳ ಅಭಾವ ದೇಶವನ್ನು ತೀವ್ರವಾಗಿ ಕಾಡುತ್ತಿದ್ದು ಇವುಗಳ ಬೆಲೆ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಜನರು ವಿದೇಶಗಳತ್ತ ಗುಳೆ ಹೋಗತೊಡಗಿದ್ದಾರೆ. ಭಾರೀ ಸಂಖ್ಯೆಯಲ್ಲಿ ಪಾಕ್‌ ನಾಗರಿಕರು ಉಮ್ರಾ ವೀಸಾದಡಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳುತ್ತಿರುವುದು ಅಲ್ಲಿನ ಸರಕಾರಗಳಿಗೆ ಬಲು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬಹಿರಂಗವಾದದ್ದು ಹೇಗೆ?

ಇತ್ತೀಚೆಗೆ ಪಾಕ್‌ನ ಫೆಡರಲ್‌ ಇನ್‌ವೆಸ್ಟಿಗೇಶನ್‌ ಎಜೆನ್ಸಿ ಮಕ್ಕಳು ಹಾಗೂ ಮಹಿಳೆಯರು ಸಹಿತ ಉಮ್ರಾ ವೀಸಾದಡಿ ಜನರು ಸೌದಿ ಅರೇಬಿಯಾಕ್ಕೆ ತೆರಳುತ್ತಿರುವುದನ್ನು ಪತ್ತೆಹಚ್ಚಿತ್ತು. ಇದೇ ವೇಳೆ ಏಜೆಂಟ್‌ಗಳು ಮಧ್ಯಪ್ರಾಚ್ಯ ದೇಶಗಳಿಗೆ ಅನೈತಿಕವಾಗಿ, ಮಾನವ ಕಳ್ಳ ಸಾಗಾಣಿಕೆಯ ಮಾದರಿಯಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು, ಭಿಕ್ಷುಕರನ್ನು ರವಾನಿಸುತ್ತಿದ್ದಾರೆ ಎಂದು ಕಂಡುಕೊಂಡಿತ್ತು. ಇದರ ಬೆನ್ನಲ್ಲೇ ಇರಾಕ್‌, ಸೌದಿ ಅರೇಬಿಯಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಬಂಧಿಯಾಗಿರುವ ಭಿಕ್ಷುಕರಲ್ಲಿ ಶೇ.90ರಷ್ಟು ಮಂದಿ ಪಾಕಿಸ್ಥಾನಿಗಳು ಎಂಬ ವಿಷಯ ಬೆಳಕಿಗೆ ಬಂದಿದೆ. ಅದರಲ್ಲೂ ಪಾಕಿಸ್ಥಾನ ಅಕ್ರಮವಾಗಿ ಇವರನ್ನು ವಿದೇಶಗಳಿಗೆ ಕಳುಹಿಸಿಕೊಡುತ್ತಿದೆ ಎಂದೂ ಹೇಳಲಾಗಿದೆ.

ವಲಸೆಗೆ ಕಾರಣಗಳು
ಕುಸಿದ ಆರ್ಥಿಕತೆ, ಆಹಾರ ಕೊರತೆ, ಬಡತನ, ದಾಖಲೆಯ ಹಣದುಬ್ಬರ, ಏರುತ್ತಿರುವ ಪೆಟ್ರೋಲ್‌, ಡೀಸೆಲ್‌ ಬೆಲೆ, ರಾಜಕೀಯ ಅಸ್ಥಿರತೆ ಹೀಗೆ ಸಾಲು ಸಾಲು ಸಮಸ್ಯೆಗಳಿಂದ ಪಾಕಿಸ್ಥಾನದಲ್ಲಿ ಜನರು ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ. ಇತರ ದೇಶಗಳಿಂದ ಪಡೆದುಕೊಳ್ಳುತ್ತಿ ರುವ ವಿತ್ತೀಯ ನೆರವನ್ನು ಕೂಡ ಪಾಕಿಸ್ಥಾನ ಸರಕಾರ ಅಭಿವೃದ್ಧಿ ಯೋಜನೆಗಳು, ಜನರ ಸಮಸ್ಯೆಗಳನ್ನು ಪರಿಹರಿ ಸಲು ವಿನಿಯೋಗಿಸದೇ ಶಸ್ತ್ರಾಸ್ತ್ರ ಖರೀದಿ, ಭಯೋತ್ಪಾದಕರಿಗೆ ನೆರವು ಮತ್ತಿತರ ಕಾರ್ಯಗಳಿಗೆ ಬಳಸುತ್ತಿದೆ. ಈ ಕಾರಣಗಳಿಂದ ಪಾಕ್‌ ಜನರು ವಲಸೆ ಹೋಗುತ್ತಿದ್ದು, ಹೆಚ್ಚಿನವರು ಭಿಕ್ಷಾಟನೆಯನ್ನೇ ಬದುಕುವ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಪಾಕ್‌ ಸರಕಾರಕ್ಕೆ ಈ ವಿಷಯ ತಿಳಿದಿದ್ದರೂ ಅದು ಮೌನಕ್ಕೆ ಶರಣಾಗಿದೆ.

ಪಾಕ್‌ನಲ್ಲಿ ಹೆಚ್ಚುತ್ತಿದೆ ಬಡತನ
ವರ್ಲ್ಡ್ ಬ್ಯಾಂಕ್‌ ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿಯ ಕುರಿತು ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಇದರ ಪ್ರಕಾರ 9.5 ಕೋಟಿ ಜನರು ಪಾಕಿಸ್ಥಾನದಲ್ಲಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಅಂದರೆ ಪಾಕಿಸ್ಥಾನದ ಒಟ್ಟು ಜನಸಂಖ್ಯೆ 24 ಕೋಟಿಯ ಶೇ.39.4ರಷ್ಟು. ಇವರ ದಿನದ ಸಂಬಳ 1,048 ಪಾಕಿಸ್ಥಾನ ರೂಪಾಯಿಗಳು. ಇದು ಭಾರತದ 300ರೂಪಾಯಿಗೆ ಸಮವಾಗಿದೆ. 2022ರಲ್ಲಿ ಶೇ.34.2ರಷ್ಟಿದ್ದ ಬಡತನವು, ಶೇ.5ರಷ್ಟು ಏರಿಕೆ ಕಂಡು, ಶೇ.39.4ರಷ್ಟಾಗಿದೆ. ಕಳೆದ ಒಂದು ವರ್ಷದಲ್ಲಿ ಅಂದಾಜು 1.25 ಕೋಟಿ ಜನರು ಬಡತನ ರೇಖೆಗಿಂತಲೂ ಕೆಳಗೆ ಬಂದಿದ್ದಾರೆ.

ಯಾತ್ರೆಯ ನೆಪದಲ್ಲಿ ವಿದೇಶಗಳಿಗೆ ವಲಸೆ

ಮೆಕ್ಕಾಕ್ಕೆ ತೆರಳುವ ಯಾತ್ರಿಗಳಿಗೆ ನೀಡಲಾಗುವ “ಉಮ್ರಾ ವೀಸಾ’ಗಳಡಿ ಪಾಕಿಸ್ಥಾನಿ ನಾಗರಿಕರು ಮೆಕ್ಕಾ, ಸೌದಿ ಅರೇಬಿಯಾ, ಇರಾಕ್‌ ದೇಶಗಳಿಗೆ ತೆರಳುತ್ತಾರೆ. ಅನಂತರ ಅಲ್ಲಿಯೇ ನೆಲೆಸಿ ಭಿಕ್ಷಾಟನೆಯಲ್ಲಿ ತೊಡಗುತ್ತಾರೆ. ಮೆಕ್ಕಾ ಹಾಗೂ ಇತರ ಸ್ಥಳಗಳಲ್ಲಿರುವ ಭಿಕ್ಷುಕರಲ್ಲಿ ಪಾಕಿಸ್ಥಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಸೌದಿ, ಇರಾಕ್‌ ಜೈಲುಗಳಲ್ಲಿ ಪಾಕ್‌ ಕೈದಿಗಳು!
ಸುಮಾರು 1.6 ಮಿಲಿಯನ್‌ ಪಾಕಿಸ್ಥಾನಿಗಳು ಯುಎಇಯಲ್ಲಿ ಹಾಗೂ 2 ಲಕ್ಷ ಪಾಕಿಸ್ಥಾನಿಗಳು ಕತಾರ್‌ನಲ್ಲಿ ನೆಲೆಸಿದ್ದಾರೆ. ಸೌದಿ ಅರೇಬಿಯಾ ಹಾಗೂ ಇರಾಕ್‌ಅಧಿಕಾರಿಗಳು ಅಲ್ಲಿನ ಜೈಲುಗಳು ಪಾಕಿಸ್ಥಾನಿಗಳಿಂದಲೇ ತುಂಬಿ ಹೋಗಿದೆ ಎಂದೂ ಹೇಳಿದ್ದಾರೆ. ಇನ್ನು ಪಾಕಿಸ್ಥಾನದಲ್ಲಿ ನಿರುದ್ಯೋಗ ಸಮಸ್ಯೆ ಮಿತಿಮೀರಿರುವುದರಿಂದ ಸಹಸ್ರಾರು ಸಂಖ್ಯೆಯ ಎಂಜಿನಿಯರ್‌ಗಳು, ವೈದ್ಯಕೀಯ ಸಹಿತ ಉನ್ನತ ಶಿಕ್ಷಣ ಪಡೆದವರು ಕೆಲಸವಿಲ್ಲದೇ ಅಲೆದಾಟ ನಡೆಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಕಾರಣ ಪಾಕ್‌ನ ವಿದ್ಯಾವಂತರೂ ಉದ್ಯೋಗ ಅರಸಿ ಜಪಾನ್‌ ಸೇರಿದಂತೆ ಇತರ ದೇಶಗಳಿಗೆ ತೆರಳುತ್ತಿದ್ದಾರೆ.

ಇರಾಕ್‌, ಸೌದಿ ಸರಕಾರಗಳಿಂದ ಎಚ್ಚರಿಕೆ

ಇರಾಕ್‌, ಸೌದಿ ಅರೇಬಿಯಾದ ಬೀದಿಬೀದಿಗಳಲ್ಲಿ ಪಾಕಿಸ್ಥಾನ ಮೂಲದ ಭಿಕ್ಷುಕರ ಹಾವಳಿ ಕಂಡುಬರುತ್ತಿದ್ದು ಈ ಭಿಕ್ಷುಕರು ಕಳ್ಳತನದಂತಹ ಅಪರಾಧ ಕೃತ್ಯಗಳನ್ನು ಎಸಗತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಮತ್ತು ಇರಾಕ್‌ ಸರಕಾರ ಪಾಕಿಸ್ಥಾನಕ್ಕೆ ನೇರ ಎಚ್ಚರಿಕೆಯನ್ನು ನೀಡಿ ತನ್ನ ನಾಗರಿಕರ ವಲಸೆಗೆ ಕಡಿವಾಣ ಹಾಕುವಂತೆ ನಿರ್ದೇಶನ ನೀಡಿದೆ. ವಿಪರ್ಯಾಸ ಎಂದರೆ ಪಾಕಿಸ್ಥಾನ ಸರಕಾರಕ್ಕೆ ತನ್ನ ನಾಗರಿಕರ ಈ ಎಲ್ಲ ವರ್ತನೆಯ ಬಗೆಗೆ ಸಂಪೂರ್ಣ ಅರಿವಿದ್ದರೂ ಭಿಕ್ಷಾಟನೆಗಾಗಿ ವಿದೇಶಗಳಿಗೆ ವಲಸೆ ಹೋಗುವವರ ಮತ್ತು ತನ್ನ ಪ್ರಜೆಗಳನ್ನು ಸಾಗಾಟ ಮಾಡುವ ಮಾನವ ಕಳ್ಳಸಾಗಣೆ ಜಾಲದ ವಿರುದ್ಧ ಯಾವುದೇ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಸಂಪೂರ್ಣ ದಿವಾಳಿಯಾಗಿರುವ ಪಾಕಿಸ್ಥಾನ ಸರಕಾರಕ್ಕೆ ತನ್ನ ಪ್ರಜೆಗಳ ಪ್ರಾಥಮಿಕ ಅಗತ್ಯವನ್ನು ಪೂರೈಸಲು ಮತ್ತು ಭದ್ರತೆಯನ್ನೂ ನೀಡಲು ಸಾಧ್ಯವಾಗುತ್ತಿಲ್ಲ.

~ ವಿಧಾತ್ರಿ ಭಟ್‌, ಉಪ್ಪುಂದ

ಟಾಪ್ ನ್ಯೂಸ್

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.