ಮಾಸ್ಕ್ ಗಳ ಮಾರಾಟಕ್ಕೂ ಕಿಯೋಸ್ಕ್
Team Udayavani, Apr 23, 2020, 3:17 PM IST
ತೈಪೆ: ಈಗಾಗಲೇ ವಿಶ್ವದ್ಯಾಂತ ನಾನಾ ದೇಶಗಳು ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ರೋಬೊಟ್‌ಗಳನ್ನು ಬಳಸುತ್ತಿವೆ. ಹಾಗೆಯೆ ತೈಪೆಯಲ್ಲಿ ಮಾಸ್ಕ್ಗಳ ಮಾರಾಟ ಮತ್ತು ವಿತರಣೆಗಾಗಿ ವೆಂಡಿಂಗ್ ಯಂತ್ರ ಕಿಯೋಸ್ಕ್ ಮಾದರಿಯಲ್ಲಿ ಬಳಸಲಾಗುತ್ತಿದೆ.
ತೈಪೆ ನಗರದಲ್ಲಿ ಫೇಸ್ ಮಾಸ್ಕ್ ಮಾರಲು ಸ್ವಯಂಚಾಲಿತ ಯಂತ್ರ ವನ್ನು ಬಳಸಲಾಗುತ್ತಿದ್ದು, ಇದರಿಂದ ಔಷಧ ವಿತರಕರ ಸಮಯ ಉಳಿತಾ ಯವಾಗುತ್ತಿದೆ. ನಗರದ ಕ್ಸಿನಿ ಜಿಲ್ಲಾ ಆರೋಗ್ಯ ಕೇಂದ್ರದ ಬಳಿ ಸ್ವಯಂ ಚಾಲಿತ ಯಂತ್ರವನು ಸ್ಥಾಪಿಸಿದ್ದು, ಸಾಮಾಜಿಕ ಅಂತರ ಕಾಯ್ದು ಕೊಳ್ಳಲಾಗುತ್ತಿದೆ. ಯಂತ್ರಗಳಿಂದ ಕಾರ್ಯದಕ್ಷತೆ ಹೆಚ್ಚಿಸಬಹುದಾಗಿದ್ದು, ಸೋಂಕು ಹರಡುವಿಕೆ ಪ್ರಮಾಣವನ್ನೂ ತಗ್ಗಿಸಬಹುದು. ಈ ಯಂತ್ರದ ಮೂಲಕ ವಿವಿಧ ದರ್ಜೆಯ ಮಾಸ್ಕ್ ಗಳು ಲಭ್ಯವಿವೆ. ಎಟಿಎಂ ಯಂತ್ರಗಳ ಮಾದರಿಯಲ್ಲಿ ಇವುಗಳನ್ನೂ ಮಾಸ್ಕ್ ವಿತರಣೆಗೆ ಬಳಸಬಹುದು ಎಂದು ತೈಪೆಯ ಸಕಾರದ ಮಾಹಿತಿ ತಂತ್ರ ಜ್ಞಾನ ವಿಭಾಗ ತಿಳಿಸಿದೆ.
ಖರೀದಿದಾರರು ತಮಗೆ ಬೇಕಾದ ಮಾಸ್ಕ್ನ ಹೆಸರನ್ನು ಪ್ರಮಾಣೀಕರಿಸಿ ಮತ್ತು ಖರೀದಿಸಲು ಅನುಮತಿಸ ಬೇಕು. ಯಂತ್ರದಲ್ಲೇ ಹಣ ಪಾವತಿಗೆ ಅವಕಾಶವಿದೆ ಎಂದು ತಿಳಿಸಿದೆ.
ಈ ಯಂತ್ರಗಳು ನಿಮಿಷಕ್ಕೆ ಇಬ್ಬರು ಗ್ರಾಹಕರಿಗೆ ಮಾಸ್ಕ್ ವಿತರಿಸಲಿದೆ. ಆದ್ದರಿಂದ, ಪ್ರತಿ ಯಂತ್ರವೂ ದಿನಕ್ಕೆ 1,100 ಗ್ರಾಹಕರಿಗೆ ಸೇವೆ ಸಲ್ಲಿಸಲಿದೆ. ನಗರದ ತಂತ್ರಜ್ಞಾನ ಇಲಾಖೆ ಈ ವ್ಯವಸ್ಥೆ ಪ್ರಾರಂಭಿಸಿದೆ. ಇಲಾಖೆಯು ಖಾಸಗಿ ಕಂಪೆನಿಗಳ ಸಹಯೋಗದಲ್ಲಿ 3 ವಾರದ ಅವಧಿ ಯಲ್ಲಿ ಈ ಯಂತ್ರಗಳನ್ನು ರೂಪಿಸಿದೆ. ಇದರಿಂದ ಮಾರಾಟಗಾರ ಮತ್ತು ಖರೀದಿಗಾರರ ಇಬ್ಬರ ಸಮಯವು ಉಳಿತಾಯವಾಗಲಿದೆ. ಹಾಗೇ ಸೋಂಕು ಹರಡುವಿಕೆ ತಪ್ಪಿಸಬಹುದು ಎಂಬುದು ಇಲ್ಲಿಯ ನಾಗರಿಕರ ಅಭಿಪ್ರಾಯ. ರಾಷ್ಟ್ರೀಯ ಆರೋಗ್ಯ ವಿಮಾ ಕಾರ್ಡ್ ಹೊಂದಿರುವ ಪ್ರತಿ ಪ್ರಜೆ, ಈ ಯಂತ್ರದಿಂದ 14 ದಿನಗಳಿಗೊಮ್ಮೆ 9 ಮಾಸ್ಕ್ಗಳನ್ನು ಖರೀದಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.