ಕಿಸಾನ್ ಸಮ್ಮಾನ್ ಹಣ ಮಾನ “ದಂಡ’ ಪ್ರಯೋಗ
Team Udayavani, Nov 17, 2021, 7:15 AM IST
ಕುಂದಾಪುರ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಹಾಗೂ ರಾಜ್ಯದಿಂದ ಬರುತ್ತಿರುವ ವಾರ್ಷಿಕ 10 ಸಾವಿರ ರೂ. ಅನುದಾನವನ್ನು ಮಾನದಂಡ ಮೀರಿ ಪಡೆಯುತ್ತಿರುವವರ ಪತ್ತೆ ಕಾರ್ಯ ನಡೆಯುತ್ತಿದೆ. ಒಂದು ವೇಳೆ ಯಾರಾದರೂ ಮಾನದಂಡ ಮೀರಿ ಅನುದಾನ ಪಡೆಯುತ್ತಿದ್ದರೆ ಅದನ್ನು ವಸೂಲಿ ಮಾಡಲಾಗುತ್ತಿದೆ. ಇದಲ್ಲದೇ ದಂಡ ಶುಲ್ಕ ವಿಧಿಸದೇ ಇದ್ದರೂ ಖಾತೆಯಿಂದ ಮರಳಿ ಸರಕಾರಕ್ಕೆ ಸ್ವಯಂ ಪಾವತಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ಪ್ರಧಾನಿ ಕಿಸಾನ್ ಸಮ್ಮಾನ್
2019ರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ಬಂದಿದ್ದುವಾರ್ಷಿಕ ಮೂರು ಕಂತಿನಲ್ಲಿ ತಲಾ 2 ಸಾವಿರ ರೂ.ಗಳಂತೆ ಸಣ್ಣ ಹಾಗೂ ಮಧ್ಯಮ ರೈತರಿಗೆ 6 ಸಾವಿರ ರೂ. ನೀಡಲಾಗುತ್ತದೆ. ರಾಜ್ಯದಲ್ಲಿದ್ದ ಯಡಿಯೂರಪ್ಪ ನೇತೃತ್ವದ ಸರಕಾರ ಮತ್ತೆ 4 ಸಾವಿರ ರೂ.ಗಳನ್ನು ಸೇರಿಸಿ ರೈತರಿಗೆ ಒಟ್ಟು 10 ಸಾವಿರ ರೂ. ದೊರೆಯುತ್ತಿದೆ.
ಯಾರಿಗೆಲ್ಲ
ಎರಡು ಹೆಕ್ಟೇರ್‌ವರೆಗಿನ ಕೃಷಿ ಭೂಮಿ ಹೊಂದಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ಈ ಯೋಜನೆಯಡಿ ಬರುತ್ತಾರೆ. ಈಗಾಗಲೇ 11.17ಕೋಟಿಗೂ ಹೆಚ್ಚು ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಡಿಸೆಂಬರ್‌ನಿಂದ ಮಾರ್ಚ್, ಎಪ್ರಿಲ್‌ನಿಂದ ಜುಲೈ, ಆಗಸ್ಟ್‌ನಿಂದ ನವಂಬರ್ ಅವಧಿ ಯಲ್ಲಿ ಖಾತೆಗೆ ಅನುದಾನ ಬರುತ್ತದೆ.
ಇದನ್ನೂ ಓದಿ:ಹಸಿವು ನೀಗಿಸುವ ಯೋಜನೆ ಜಾರಿ ಮಾಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್
ಹಣ ಮರುಪಾವತಿ
ಮಾನದಂಡ ಪ್ರಕಾರ ಕಿಸಾನ್ ನಿಧಿ ಪಡೆಯಲು ಅರ್ಹತೆ ಇಲ್ಲದವರನ್ನು ರಾಜ್ಯ ಸರಕಾರ ಪತ್ತೆ ಹಚ್ಚಬೇಕು. ಅವರಿಂದ ಮರಳಿ ಹಣ ಪಡೆಯಬೇಕು. ಮೃತರ ಹೆಸರಿನಲ್ಲಿ ಸಂದಾಯವಾಗುತ್ತಿದ್ದರೆ, ಮಾನದಂಡ ಮೀರಿ ತಪ್ಪು ಮಾಹಿತಿ ನೀಡಿದ್ದರೆ ಕೃಷಿ ಇಲಾಖೆ ಪತ್ತೆ ಹಚ್ಚುತ್ತಿದೆ. ಅಷ್ಟೂ ಹಣ ಮರಳಿ ಕಟ್ಟಿಸುತ್ತಿದೆ.
ಸ್ವಯಂ ಕಡಿತ
ಪಿಂಚಣಿ, ವೇತನ, ಆದಾಯ ತೆರಿಗೆ ಇತ್ಯಾದಿಗಳ ಮಾಹಿತಿ ಅನ್ವಯ ಬ್ಯಾಂಕ್‌ಗಳು ಸ್ವಯಂ ಆಗಿ ಖಾತೆಯಿಂದ ಕಡಿತ ಮಾಡಿ ಹಣ ಮರುಪವಾತಿಸುವ ವ್ಯವಸ್ಥೆಗೆ ಹಸುರುನಿಶಾನೆ ತೋರಿಸಲಾಗಿದೆ. ಬ್ಯಾಂಕ್ ಖಾತೆಯಲ್ಲಿ ನಿರ್ದಿಷ್ಟ ಮೊತ್ತ ಇಲ್ಲದೇ ಇದ್ದಲ್ಲಿ ಬೇರೆ ಯಾವುದೇ ಮೊತ್ತ ಖಾತೆಗೆ ಬಿದ್ದ ತತ್‌ಕ್ಷಣ ಸರಕಾರಕ್ಕೆ ಸಂದಾಯವಾಗಬೇಕಾದ ಹಣ ಕಡಿತವಾಗುತ್ತದೆ. (ಇದು ಸಾಲದ ಕಂತು, ದಂಡದ ಹಣ ಸೇರಿದಂತೆ ಎಲ್ಲದಕ್ಕೂ ಅನ್ವಯ).
ಫಲಾನುಭವಿಗಳು
ಯೋಜನೆಯ 9ನೇ ಕಂತಿನ ಹಣ ಆ. 9ರಂದು ಬಿಡುಗಡೆಯಾಗಿದೆ. 8ನೇ ಕಂತಿನ ಹಣ ಮೇ 14ರಂದು ಬಿಡುಗಡೆ ಮಾಡಲಾಗಿತ್ತು. ರಾಜ್ಯದಲ್ಲಿ 51 ಲಕ್ಷ, ಉಡುಪಿ ಜಿಲ್ಲೆಯಲ್ಲಿ 1,54,592 ಫಲಾನುಭವಿಗಳು ನೋಂದಣಿಯಾಗಿದ್ದು 1,49,147 ಫಲಾನುಭವಿಗಳಿಗೆ ಹಣ ಬಂದಿದೆ. ದ.ಕ. ಜಿಲ್ಲೆಯಲ್ಲಿ 1,54,516 ಫಲಾನುಭವಿಗಳ ಖಾತೆಗೆ ಹಣ ದೊರೆತಿದೆ. ದೇಶದಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿ ಇದ್ದು ಇಲ್ಲಿ 97 ಶೇ.ದಷ್ಟು ಮಾಹಿತಿ ಅಧಿಕೃತವಾಗಿದೆ. ನೋಂದಾಯಿಸಿದ 90 ಶೇ.ದಷ್ಟು ಜನ ಹಣ ಪಡೆದಿದ್ದಾರೆ.
ಮಾನದಂಡ ಮೀರಿ ಕಿಸಾನ್ ಸಮ್ಮಾನ್ ನಿಧಿ ಪಡೆಯುತ್ತಿರುವವರ ಪತ್ತೆ ಕಾರ್ಯ ನಡೆಯುತ್ತಿದೆ. ನಿಖರ ಸಂಖ್ಯೆ ಕಷ್ಟ. ಏಕೆಂದರೆ ಪತ್ತೆ ಕಾರ್ಯ ನಿರಂತರವಾಗಿದೆ. ಬ್ಯಾಂಕ್‌ಗಳು ಸ್ವಯಂ ಆಗಿ ಪತ್ತೆಹಚ್ಚಿ ಹಣ ಮರಳಿಸುತ್ತಿವೆ. ಅದರ ಹೊರತಾಗಿ ಇಲಾಖೆಯೂ ಕಾರ್ಯಾಚರಿಸುತ್ತಿದೆ. ತಪ್ಪು ಮಾಹಿತಿ ನೀಡಿ ಸರಕಾರದ ಹಣ ಪಡೆಯುವುದು ಅಪರಾಧ.
– ಕೆಂಪೇಗೌಡ/ ಸೀತಾ,
ಜಂಟಿ ನಿರ್ದೇಶಕರು
ಕೃಷಿ ಇಲಾಖೆ ಉಡುಪಿ/ದ.ಕ.
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.