KMF Rate; ಮಜ್ಜಿಗೆ, ಮೊಸರಿನ ದರವೂ ಏರಿಕೆ
Team Udayavani, Aug 1, 2023, 7:23 AM IST
ಬೆಂಗಳೂರು: ಸರಕಾರ ಹಾಲಿನ ಬೆಲೆ ಏರಿಕೆಗೆ ಸಮ್ಮತಿ ನೀಡಿದ ಬೆನ್ನಲ್ಲೇ ಕೆಎಂಎಫ್ ದರ ಪರಿಷ್ಕರಣೆ ಮಾಡಿದ್ದು, ಹಾಲಿನ ಜತೆಗೆ ಮೊಸರು, ಮಜ್ಜಿಗೆ ಬೆಲೆಯನ್ನೂ ಹೆಚ್ಚಿಸಿದೆ.
ಸರಕಾರವು ಹಾಲು ಒಕ್ಕೂಟಗಳ ಮನವಿಗೆ ಮಣಿದು ಆ. 1ರಿಂದ ಹಾಲಿನ ದರದಲ್ಲಿ 3 ರೂ. ಹೆಚ್ಚಳಕ್ಕೆ ಹಸುರು ನಿಶಾನೆ ನೀಡಿತ್ತು. ಕೆಎಂಎಫ್ ಇದನ್ನೇ ನೆಪವಾಗಿ ಇರಿಸಿಕೊಂಡು ಈಗ ಮೊಸರು, ಮಜ್ಜಿಗೆ ದರವನ್ನೂ ಏರಿಸಿದೆ. ಹೀಗಾಗಿ ಗ್ರಾಹಕರು 1 ಲೀ. ಮೊಸರಿಗೆ ಇನ್ನು ಮುಂದೆ ಹೆಚ್ಚುವರಿಯಾಗಿ 3 ರೂ. ಸೇರಿ ಒಟ್ಟು 50 ರೂ. ಹಾಗೂ 200 ಮಿ.ಲೀ. ಪೊಟ್ಟಣದ ಮಜ್ಜಿಗೆಗೆ 1 ರೂ. ಹೆಚ್ಚುವರಿಯಾಗಿ 9 ರೂ. ಪಾವತಿಸಬೇಕಾಗುತ್ತದೆ.
ಹಿಂದೆ ನಂದಿನಿ ಪ್ಯಾಕೆಟ್ ಮೊಸರು ಪ್ರತೀ ಲೀ.ಗೆ 47 ರೂ., ಪ್ರತೀ 200 ಮಿ.ಲೀ. ಮಜ್ಜಿಗೆ 8 ರೂ.ಗಳಿಗೆ ಮಾರಾಟವಾಗುತ್ತಿತ್ತು. ಕೆಎಂಎಫ್ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಮಂಗಳವಾರದಿಂದ 1 ಲೀ. ಟೋನ್ಡ್ ಹಾಲಿನ ಬೆಲೆ (ನೀಲಿ ಪೊಟ್ಟಣ) 42 ರೂ., ಟೋನ್ಡ್ ಹಾಲು (ಹೋಮೋಜಿನೈಸ್ಡ್) 43 ರೂ., ಹಸುವಿನ ಹಾಲು (ಹಸುರು) 46 ರೂ. ಮತ್ತು ಶುಭಂ 48 ರೂ.ಗೆ ಹೆಚ್ಚಳವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.