ಕಡಲ ಕಾವಲಿನಲ್ಲಿ ಕೆಎನ್‌ಡಿ ಸಕ್ರಿಯ
ಸಿಎಸ್‌ಪಿಗೆ ಸ್ಥಳೀಯರ ನೇಮಕ: ಇನ್ನೂ ಈಡೇರದ ಬೇಡಿಕೆ
Team Udayavani, Sep 18, 2020, 6:22 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಕಡಲು/ ತೀರದಲ್ಲಿ ಭದ್ರತೆ ನೀಡುವ ಕರಾವಳಿ ಕಾವಲು ಪೊಲೀಸ್‌ಗೆ (ಸಿಎಸ್‌ಪಿ) ಸ್ಥಳೀಯರನ್ನೇ ನೇಮಿಸಿಕೊಳ್ಳಬೇಕೆಂಬ ಬಹುಕಾಲದ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಆದರೆ ಸ್ಥಳೀಯರನ್ನೊಳಗೊಂಡ ಕೆಎನ್‌ಡಿ(ಕರಾವಳಿ ನಿಯಂತ್ರಣ ದಳ) ಕರಾವಳಿ ಕಾವಲು ಪೊಲೀಸರಿಗೆ ಸಾಥ್ ನೀಡಿ ಕರಾವಳಿಯ ಕಾವಲು ಕಾಯುತ್ತಿದೆ.
ಸಮುದ್ರದ ಬಗ್ಗೆ ಸರಿಯಾದ ಮಾಹಿತಿ ಇರುವವರು, ಬೋಟ್‌ಗಳ ಬಗ್ಗೆ ತಿಳಿದಿರುವವರು, ಉತ್ತಮ ಈಜುಪಟುಗಳು, ಸಮುದ್ರ ಭಾಗದ ವಾತಾವರಣಕ್ಕೆ ಹೊಂದಿಕೊಳ್ಳುವ ವರನ್ನು ಅರ್ಥಾತ್ ಸಮುದ್ರ ಪಕ್ಕದಲ್ಲೇ ವಾಸವಿರುವ ಮೀನುಗಾರ ಸಮುದಾಯ ಅಥವಾ ಮೀನು ಗಾರಿಕಾ ವೃತ್ತಿ ನಡೆಸುವ ಕುಟುಂಬ ಗಳ ಯುವಕರನ್ನೇ ಕರಾವಳಿ ಕಾವಲು ಪೊಲೀಸ್‌ಗೆ ನೇಮಕ ಮಾಡಿಕೊಳ್ಳಬೇಕು ಎಂಬುದು ಹಲವು ವರ್ಷಗಳಿಂದ ಇರುವ ಬೇಡಿಕೆ. ಸಮುದ್ರ/ತೀರದಲ್ಲಿ ಅವಘಡಗಳಾ ದಾಗ, ಅನಪೇಕ್ಷಿತ ಘಟನೆಗಳಾದಾಗ ಈ ವಿಚಾರ ಚರ್ಚೆಗೆ ಬರುತ್ತಿದೆ. ಆದರೆ ಈ ಕುರಿತಾಗಿ ಸರಕಾರದ ಮಟ್ಟದಲ್ಲಿ ಇನ್ನೂ ನಿರ್ಧಾರಗಳು ಹೊರಬಿದ್ದಿಲ್ಲ.
ಪ್ರತ್ಯೇಕ ನೇಮಕಾತಿ ಬೇಕು
ಸದ್ಯ ಕರಾವಳಿ ಕಾವಲು ಪೊಲೀಸ್‌ಗೆ ಜಿಲ್ಲಾ ಪೊಲೀಸ್‌ನಿಂದ ಕೆಲವು ಸಿಬಂದಿಯನ್ನು ಡೆಪ್ಯುಟೇಶನ್‌ನಲ್ಲಿ ನೀಡಲಾಗುತ್ತದೆ. ಒಂದುವೇಳೆ ಕರಾವಳಿ ಕಾವಲು ಪೊಲೀಸ್‌ಗೆ ಪ್ರತ್ಯೇಕ ನೇಮಕಾತಿ ನಡೆದರೆ, ಅದಕ್ಕೆ ಪೂರಕವಾಗಿ ಸರಕಾರ ನಿರ್ಧಾರಗಳನ್ನು ತೆಗೆದುಕೊಂಡು ಸ್ಥಳೀಯರ ಆಯ್ಕೆಗೆ ಅವಕಾಶ ನೀಡಿದರೆ ಮಾತ್ರ ಇದು ಕಾರ್ಯಸಾಧ್ಯವಾಗಬಹುದು.
ತರಬೇತಿ ಪಡೆದರೂ ನಿರಾಸಕ್ತಿ
ಕರಾವಳಿಯ ಯುವಜನತೆ ಇಲಾಖೆಗೆ ಸೇರಬೇಕೆಂಬ ಉದ್ದೇಶ ದಿಂದ ಪೊಲೀಸ್ ಇಲಾಖೆ ಕಳೆದ ಬಾರಿ 240 ಮಂದಿಗೆ ಇಲಾಖೆಯ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಲು ಶಿಬಿರ ನಡೆಸಿತ್ತು. ಅರ್ಜಿ ಸಲ್ಲಿಸಿದವರು 40 ಮಂದಿ ಮಾತ್ರ. ಅದರಲ್ಲಿಯೂ ಆಯ್ಕೆ ಹಂತದವರೆಗೆ ಹೋದವರು ಸುಮಾರು ಐವರಷ್ಟೇ. ಅವರಲ್ಲಿ ಮೂವರು ಮಹಿಳೆಯರು. ನೇಮಕಾತಿ ಆದೇಶ ಇನ್ನಷ್ಟೇ ಆಗಬೇಕಿದೆ.
ಕರಾವಳಿ ಕಾವಲು ಪೊಲೀಸ್(ಸಿಎಸ್‌ಪಿ) ಜತೆಗೆ 200 ಮಂದಿಯನ್ನೊಳಗೊಂಡ ಕೆಎನ್‌ಡಿ (ಕರಾವಳಿ ನಿಯಂತ್ರಣ ದಳ) ಕೆಲಸ ಮಾಡುತ್ತಿದೆ. ಕೆಎನ್‌ಡಿ ಸಂಪೂರ್ಣವಾಗಿ ಸ್ಥಳೀಯರನ್ನೊಳಗೊಂಡಿರುವ ದಳ. ಗೃಹರಕ್ಷಕರ ನೆಲೆಯಲ್ಲಿ ಇವರ ಸೇವೆ ಪಡೆದುಕೊಳ್ಳಲಾಗುತ್ತಿದೆ. ಕರಾವಳಿ ಕಾವಲು ಪೊಲೀಸ್‌ಗೆ ಸ್ಥಳೀಯರ ನೇಮಕ ಮಾಡಿಕೊಳ್ಳಬೇಕಾದರೆ ಸರಕಾರದ ಮಟ್ಟದಲ್ಲಿಯೇ ತೀರ್ಮಾನವಾಗಬೇಕಾಗುತ್ತದೆ.
-ಚೇತನ್ ಕುಮಾರ್, ಎಸ್‌ಪಿ, ಕರಾವಳಿ ಕಾವಲು ಪೊಲೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.