ಸಾಲ ಪಡೆಯಲು ನಾಗರಿಕರಿಗೆ ತೆರಿಗೆ: ಪಾಕಿಸ್ಥಾನ ಸರಕಾರ
Team Udayavani, Feb 12, 2023, 6:55 AM IST
ಇಸ್ಲಾಮಾಬಾದ್: ಐಎಂಎಫ್ ನಿಂದ ಆರ್ಥಿಕ ನೆರವು ಪಡೆಯುವ ನಿಟ್ಟಿನಲ್ಲಿ ದೇಶದಲ್ಲಿ ತೆರಿಗೆ ಪ್ರಮಾಣ ಹೆಚ್ಚಿಸಲು ಪಾಕಿಸ್ಥಾನ ಸರಕಾರ ನಿರ್ಧರಿಸಿದೆ.
ಪಾಕಿಸ್ಥಾನ ಪ್ರಜೆಗಳ ಮೇಲೆ ಇದರ ಬಿಸಿ ತಟ್ಟಲಿದೆ. “ಹೆಚ್ಚುವರಿಯಾಗಿ 170 ಬಿಲಿಯನ್ ಪಾಕಿಸ್ಥಾನಿ ರೂಪಾಯಿಗಳ ತೆರಿಗೆಯನ್ನು ವಿಧಿಸಲಾಗುವುದು,’ ಎಂದು ಪಾಕಿಸ್ಥಾನ ಹಣಕಾಸು ಸಚಿವ ಇಶಾಕ್ ಧರ್ ಘೋ ಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “7 ಬಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡುವ ನಿಟ್ಟಿನಲ್ಲಿ ಐಎಂಎಫ್ ನಿಂದ ಷರತ್ತುಗಳು ಮತ್ತು ನಿಯಮಗಳ ಜ್ಞಾಪನಾ ಪತ್ರ ಪಾಕಿಸ್ಥಾನ ಸರಕಾರಕ್ಕೆ ಬಂದಿದೆ,’ ಎಂದು ತಿಳಿಸಿದ್ದಾರೆ.
“ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿರುವ ಪಾಕಿಸ್ಥಾನಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಐಎಂಎಫ್ ನಿಯೋಗ ಈಗಾಗಲೇ ಪಾಕ್ ಸರಕಾರದೊಂದಿಗೆ 10 ದಿನಗಳ ಮಾತುಕತೆ ನಡೆಸಿದೆ. ಗುರುವಾರ ರಾತ್ರಿ ಐಎಂಎಫ್ ನಿಯೋಗ ಇಸ್ಲಾಮಾಬಾದ್ನಿಂದ ತೆರಳಿದ್ದು, ಮಾತುಕತೆ ಮುಂದುವರಿಯಲಿದೆ ಎಂದು ಇಶಾಕ್ ಧರ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.