Kolar: ಮತ್ತೂಂದು ಮರ್ಯಾದಾ ಹತ್ಯೆ
Team Udayavani, Aug 27, 2023, 11:54 PM IST
ಕೋಲಾರ: ಅನ್ಯಜಾತಿಯ ಅಪ್ರಾಪ್ತ ವಯಸ್ಕ ಯುವಕನನ್ನು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ತಂದೆಯೇ ಮಗಳನ್ನು ಹತ್ಯೆಗೈದಿರುವ ಘಟನೆ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಜರುಗಿದ್ದು, ಮುಚ್ಚಿ ಹಾಕಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.
ತಾಲೂಕಿನ ತೊಟ್ಲಿ ಗ್ರಾಮದ ರಮ್ಯಾ (19) ತಂದೆಯಿಂದಲೇ ಹತ್ಯೆಗೀಡಾದ ಯುವತಿ. ಹತ್ಯೆ ಸಂಬಂಧ ತಂದೆ ವೆಂಕಟೇಶ್‌ಗೌಡ, ಆತನ ಸಹೋದರರಾದ ಮೋಹನ್ ಗೌಡ, ವೆಂಕಟೇಶ್ ಗೌಡ ಅವರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಿಯುಸಿ ಮುಗಿಸಿದ್ದ ರಮ್ಯಾ ಕೋಲಾರ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಈ ನಡುವೆ ಪಕ್ಕದೂರಿನಲ್ಲಿ ಅನ್ಯಜಾತಿಯ ಹುಡುಗನೊಂದಿಗೆ ಪ್ರೀತಿ ಶುರುವಾಗಿತ್ತು. ಈ ವಿಚಾರ ಮನೆಯವರಿಗೆ ತಿಳಿದು, ತಂದೆ ಮತ್ತು ಮಗಳ ನಡುವೆ ಜಗಳ ನಡೆಯುತ್ತಿತ್ತು. ಆಗಸ್ಟ್ 24ರ ರಾತ್ರಿ ವೆಂಕಟೇಶ್ ಗೌಡ ಕೆಲಸ ಮುಗಿಸಿ ಮನೆಗೆ ಬಂದು ಮಲಗಿದ್ದ ವೇಳೆ, ಮಧ್ಯರಾತ್ರಿಯಲ್ಲಿ ರಮ್ಯಾ ಪೋನ್‌ನಲ್ಲಿ ಮಾತನಾಡುತ್ತಿದ್ದು, ಈ ವೇಳೆ ತಂದೆ-ಮಗಳ ನಡುವೆ ಜಗಳ ನಡೆದಿದೆ. ವೆಂಕಟೇಶ್‌ಗೌಡ ರಮ್ಯಾಳ ಕಪಾಳಕ್ಕೆ ಬಲವಾಗಿ ಹೊಡೆದಿದ್ದು, ಕೆಳಗೆ ಬಿದ್ದ ಮಗಳ ಮೇಲೆ ಕಾಲಿನಿಂದ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದ. ಕಳೆದ 2 ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವ 2ನೇ ಮರ್ಯಾದೆ ಹತ್ಯೆ ಪ್ರಕರಣ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾ*ವು
ಈ ಜಾಗ ನಮ್ಮದು… ವಿದ್ಯಾರ್ಥಿಗಳನ್ನು ಹೊರಹಾಕಿ ಶಾಲೆಗೆ ಬೀಗ ಜಡಿಯಲು ಯತ್ನಿಸಿದ ಕುಟುಂಬ
ಮೈಕ್ರೋ ಫೈನಾನ್ಸ್ ಗಳಿಂದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ
Hubballi: ಚಾಕು ಇರಿದು ಯುವಕನ ಕೊಲೆ ಪ್ರಕರಣ… ಪೊಲೀಸರಿಂದ ಮೂವರು ಆರೋಪಿಗಳ ಕಾಲಿಗೆ ಗುಂಡು
IT Raid: ಬೆಳಗಾವಿಯ ಉದ್ಯಮಿ ದೊಡ್ಡಣ್ಣವರ ಸೇರಿ ನಾಲ್ವರು ಉದ್ಯಮಿಗಳಿಗೆ ಐಟಿ ಶಾಕ್
MUST WATCH
ಹೊಸ ಸೇರ್ಪಡೆ
ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾ*ವು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: 15 ಬೈಕ್ ಕರಕಲು
Robbery: ಮನೆಗೆ ನುಗ್ಗಿ ಚಿನ್ನ, ನಗದು ದರೋಡೆ; ಬಾಲಕ ಸೇರಿದಂತೆ ಮೂವರ ಬಂಧನ
ಈ ಜಾಗ ನಮ್ಮದು… ವಿದ್ಯಾರ್ಥಿಗಳನ್ನು ಹೊರಹಾಕಿ ಶಾಲೆಗೆ ಬೀಗ ಜಡಿಯಲು ಯತ್ನಿಸಿದ ಕುಟುಂಬ
Arrested: ಬಿಡಿಸಿಸಿ, ಅಪೆಕ್ಸ್ ಬ್ಯಾಂಕ್‌ಗೆ 19 ಕೋಟಿ ರೂ. ವಂಚನೆ: ಮೂವರ ಸೆರೆ