Kolar: ಕೋಲಾರದಲ್ಲಿ ಈ ಬಾರಿಯೂ “ಮುನಿ” ಕಾಳಗ?

  ಬಿಜೆಪಿಯಿಂದ ಸಂಸದ ಮುನಿಸ್ವಾಮಿ ಸ್ಪರ್ಧೆಗೆ ಸಿದ್ಧ - ಆದರೆ, ಜೆಡಿಎಸ್‌ ಮೈತ್ರಿಯಿಂದ ಇದಕ್ಕೆ ತಣ್ಣೀರು?

Team Udayavani, Jan 11, 2024, 5:27 AM IST

muniyappa muniswamy

ಕೋಲಾರ: ಮೀಸಲು ಲೋಕಸಭಾ ಕ್ಷೇತ್ರವಾಗಿರುವ ಕೋಲಾರದಲ್ಲಿ ಒಮ್ಮೆ ಜನತಾದಳ, ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದದ್ದು ಬಿಟ್ಟರೆ ಬರೋಬ್ಬರಿ 15 ಬಾರಿ ಕಾಂಗ್ರೆಸ್‌ ಪಕ್ಷ ಗೆದ್ದಿದೆ.

ವಿಶೇಷವೆಂದರೆ ಬರೀ ಆರು ಮಂದಿ ಮಾತ್ರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 3 ಬಾರಿ ದೊಡ್ಡತಿಮ್ಮಯ್ಯ, 4 ಬಾರಿ ಜಿ.ವೈ. ಕೃಷ್ಣನ್‌ ಹಾಗೂ 7 ಸಲ ಕೆ.ಎಚ್‌. ಮುನಿಯಪ್ಪ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಕಳೆದ ಸಲ ಬಿಜೆಪಿಯ ಎಸ್‌. ಮುನಿಸ್ವಾಮಿ ಅವರು 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ಮುನಿಯಪ್ಪ ಅವರ 8ನೇ ಗೆಲುವಿಗೆ ಅಡ್ಡಗಾಲಾದರು. ಈ ಸಲವೂ ಇವರಿಬ್ಬರು ಕಣಕ್ಕಿಳಿಯುವ ಉಮೇದು ತೋರಿಸುತ್ತಿದ್ದಾರೆ. ಈ ಸಲ ಬಿಜೆಪಿ-ಜೆಡಿಎಸ್‌ ನಡುವಿನ ಮೈತ್ರಿ ಗೊಂದಲ ಮುನಿಸ್ವಾಮಿಗೆ ಅವರಿಗೆ ವರವಾಗಬಹುದೇ ಅಥವಾ ಶಾಪವಾಗುವುದೇ ಎಂದು ಕಾದುನೋಡಬೇಕು. ಇನ್ನೊಂದೆಡೆ ಗುಂಪುಗಾರಿಕೆ ಸಂಘರ್ಷದಲ್ಲಿರುವ ಕಾಂಗ್ರೆಸ್‌ನಲ್ಲೂ ಅಭ್ಯರ್ಥಿ ಆಯ್ಕೆ ಸರಳವಾಗೇನೂ ಇಲ್ಲ.

ಅಜ್ಞಾತ ಮತದಾರರ ಬಲ

ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಐದು ಮತ್ತು ಜೆಡಿಎಸ್‌ ಮೂರು ಸ್ಥಾನಗಳನ್ನು ಪ್ರತಿನಿಧಿಸುತ್ತಿದೆ. ಬಿಜೆಪಿ ಯಾವ ಕ್ಷೇತ್ರವನ್ನೂ ಪ್ರತಿನಿಧಿಸುತ್ತಿಲ್ಲ. ಆದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಜ್ಞಾತ ಮತದಾರರ ಬಲವನ್ನು ಹೊಂದಿದೆ. ಇಲ್ಲಿನ ರಾಜಕಾರಣ ರಾಷ್ಟ್ರ ಅಥವಾ ರಾಜ್ಯದ ಪರಿಸ್ಥಿತಿಯನ್ನು ಅವಲಂಬಿಸಲೇ ಇಲ್ಲ. ಹಿಂದೆ ಇಂದಿರಾಗಾಂಧಿ ಅಲೆ ಇದ್ದಾಗ ಕೋಲಾರದಲ್ಲಿ ಜನತಾ ಪಕ್ಷ ಗೆದ್ದಿದ್ದರೆ, 2014ರಲ್ಲಿ ಮೋದಿ ಅಲೆ ಇದ್ದಾಗ ಕಾಂಗ್ರೆಸ್‌ನ ಮುನಿಯಪ್ಪ ಗೆದ್ದಿದ್ದರು. ಆದರೆ, 2019ರಲ್ಲಿ ಮುನಿಯಪ್ಪ ಮೇಲಿನ ಕೋಪದಿಂದ ಕಾಂಗ್ರೆಸ್‌-ಜೆಡಿಎಸ್‌ ಮುಖಂಡರೇ ಬಹಿರಂಗವಾಗಿ ಬಿಜೆಪಿ ಅಭ್ಯರ್ಥಿ ಎಸ್‌. ಮುನಿಸ್ವಾಮಿಗೆ ಗೆಲುವು ತಂದು ಕೊಟ್ಟಿದ್ದಾರೆ.

ಗುಂಪುಗಾರಿಕೆ ಶಮನಗೊಂಡಿಲ್ಲ

ಈ ಬಾರಿಯೂ ಕೋಲಾರ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಶಮನಗೊಂಡಿಲ್ಲ. ಮತ್ತೆ ಲೋಕಸಭಾ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಕೆ.ಎಚ್‌.ಮುನಿಯಪ್ಪರನ್ನು ಒಂದು ಗುಂಪು ವಿರೋಧಿಸುತ್ತಲೇ ಇದೆ. ರಮೇಶ್‌ಕುಮಾರ್‌ ಬಣದ ಪರವಾಗಿ ಸಿ.ಎಂ. ಮುನಿಯಪ್ಪ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಮಾಲೂರು ತಾಲೂಕಿನ ಸಂಪಂಗೆರೆ ವಿ. ಮುನಿರಾಜು , ಹಿರಿತನದ ಆಧಾರದಲ್ಲಿ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಮಹಿಳಾ ಕೋಟಾದಡಿ ಶಾಂತಕುಮಾರಿ, ಮುದ್ದುಕೃಷ್ಣ ಸೇರಿದಂತೆ ಒಂಭತ್ತು ಮಂದಿ ಇತರರು ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿಯಿಂದ ಹಾಲಿ ಸಂಸದ ಎಸ್‌. ಮುನಿಸ್ವಾಮಿ ಪ್ರಚಾರ ಆರಂಭಿಸಲು ಮೈತ್ರಿ ಗೊಂದಲ ಅಡ್ಡಿಯಾಗಿದೆ. ಜೆಡಿಎಸ್‌ ಕೋಲಾರ ಕ್ಷೇತ್ರಕ್ಕಾಗಿ ಹಕ್ಕು ಪ್ರತಿಪಾದಿಸಿದೆ. ಆದರೂ ಮುನಿಸ್ವಾಮಿ ಮತ್ತೆ ಸ್ಪರ್ಧಿಸುವ ಪ್ರಯತ್ನದಲ್ಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಮತದಾನ ಲೆಕ್ಕಾಚಾರವೂ ಜೆಡಿಎಸ್‌ಗೆ ವರದಾನವಾಗಿದೆ. ಆದ್ದರಿಂದ, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್‌, ಮಾಜಿ ಶಾಸಕ ನಿಸರ್ಗನಾರಾಯಣಸ್ವಾಮಿ ಹಾಗೂ ಹಾಲಿ ಅಧಿಕಾರದಲ್ಲಿರುವ ಐಎಎಸ್‌ ಅಧಿಕಾರಿಯೊಬ್ಬರನ್ನು ಕಣಕ್ಕಿಳಿಸಬಹುದು. ಭೋವಿ ಸಮುದಾಯದ ಹಿರಿಯ ಅಧಿಕಾರಿಯೊಬ್ಬರು ಮೈತ್ರಿ ಅಭ್ಯರ್ಥಿಯಾಗುವ ಉತ್ಸಾಹ ತೋರಿಸುತ್ತಿದ್ದಾರೆ. ಮತ್ತೂರ್ವ ಐಪಿಎಸ್‌ ಅಧಿಕಾರಿಯೊಬ್ಬರ ಕುಟುಂಬದವರು ಚುನಾವಣೆಗೆ ಇಳಿಯುವ ಸಾಧ್ಯತೆ ಇದೆ. ಮುನಿಯಪ್ಪರಿಗೆ ಟಿಕೆಟ್‌ ಸಿಗದಿದ್ದರೆ ಅವರ ಕುಟುಂಬದಿಂದ ಕೆಎಎಸ್‌ ಮತ್ತು ಹಿರಿಯ ಅಧಿಕಾರಿಗಳಾಗಿದ್ದವರು ಕಣಕ್ಕಿಳಿಯಬಹುದು.

ಜಾತಿವಾರು ಲೆಕ್ಕಾಚಾರ

ಇಲ್ಲಿ ಪರಿಶಿಷ್ಟ ಜಾತಿ ವರ್ಗದ ಮತದಾರರ ಸಂಖ್ಯೆ ಒಟ್ಟು ಮತದಾರರ ಪೈಕಿ ಶೇ. 30ರಿಂದ 35ರಷ್ಟಿದೆ. ಅಲ್ಪಸಂಖ್ಯಾಕ ಮತದಾರರ ಸಂಖ್ಯೆ ಶೇ. 15ರಷ್ಟಿದೆ. ದಲಿತ, ಅಲ್ಪಸಂಖ್ಯಾಕರ ಮತ ಶೇ. 50ರಷ್ಟಿದೆ. ದಲಿತ ಮತದಾರರಲ್ಲಿ ಎಡ, ಬಲ, ಭೋವಿ, ಬಲಗೈ ಸಮುದಾಯದಲ್ಲಿ ಚಿಕ್ಕತಾಳಿ, ದೊಡ್ಡತಾಳಿ ಎಂಬ ಗುಂಪುಗಳಿವೆ. ಕೆ.ಎಚ್‌. ಮುನಿಯಪ್ಪ ಎಡಗೈ, ಎಸ್‌. ಮುನಿಸ್ವಾಮಿ ಬಲಗೈ ಸಮುದಾಯಕ್ಕೆ ಸೇರಿದವರು. ಬಲಗೈ ಮತಗಳು ಹೆಚ್ಚಾಗಿರುವುದರಿಂದ ನೇರ ಸ್ಪರ್ಧೆಯಲ್ಲಿ ಮುನಿಸ್ವಾಮಿಗೆ ಗೆಲುವು ಸುಲಭವಾಗಿತ್ತು. ಈ ಬಾರಿಯೂ ಬಿಜೆಪಿ ಜೆಡಿಎಸ್‌ ಮೈತ್ರಿ ಇರುವುದರಿಂದ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಎಡಗೈಗೆ ಕಾಂಗ್ರೆಸ್‌ ಟಿಕೆಟ್‌ ದೊರೆತರೆ ಬಿಜೆಪಿ, ಜೆಡಿಎಸ್‌ ಬಲಗೈ ಅಭ್ಯರ್ಥಿಗೆ ಒತ್ತು ನೀಡುತ್ತದೆ. ಕಾಂಗ್ರೆಸ್‌ ಬಲಗೈಗೆ ಟಿಕೆಟ್‌ಗೆ ನೀಡಿದರೆ ಬಿಜೆಪಿ ಜೆಡಿಎಸ್‌ ಭೋವಿ ಸಮುದಾಯಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಬಲಗೈನಲ್ಲಿ ಚಿಕ್ಕತಾಳಿ, ದೊಡ್ಡತಾಳಿ ಸಮುದಾಯಗಳ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಸ್ಪರ್ಧೆಯಲ್ಲಿ ಸಮಗ್ರ ಬಲಗೈ ಅಭ್ಯರ್ಥಿ ಒಂದು ಕಡೆ ಇದ್ದು, ಮತ್ತೂಂದು ಕಡೆ ಎಡಗೈ ಅಥವಾ ಭೋವಿ ಅಭ್ಯರ್ಥಿ ಇರುವ ಸಾಧ್ಯತೆ ಇದೆ. ಮೈತ್ರಿಯಲ್ಲಿ ಕೋಲಾರ ಯಾರದು ಎಂಬುದು ಇತ್ಯರ್ಥವಾದ ನಂತರವಷ್ಟೇ ಈ ಲೆಕ್ಕಾಚಾರಕ್ಕೆ ಮಹತ್ವ ಸಿಗಲಿದೆ.

 ಕೆ.ಎಸ್‌. ಗಣೇಶ್‌

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.