ಕೊಲ್ಲೂರು ಬಸ್ ನಿಲ್ದಾಣ ಸ್ತಬ್ಧ
Team Udayavani, Jun 3, 2020, 5:16 AM IST
ಕೊಲ್ಲೂರು: ಕೋವಿಡ್-19 ನಡುವೆ ಸರಕಾರಿ ಹಾಗೂ ಖಾಸಗಿ ಬಸ್ ಸಂಚಾರಕ್ಕೆ ಸರಕಾರ ಅನುವು ಮಾಡಿಕೊಟ್ಟರೂ ಕೇವಲ ಒಂದೆರಡು ಬಸ್ಸುಗಳು ಮಾತ್ರ ಕೊಲ್ಲೂರಿನಲ್ಲಿ ಸಂಚರಿಸುತ್ತಿವೆ.
ಶ್ರೀ ಮೂಕಾಂಬಿಕಾ ದೇವಿಯ ದರ್ಶನಕ್ಕೆ ಉಡುಪಿ, ಮಂಗಳೂರು ಜಿಲ್ಲೆಯಿಂದ ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಬಸ್ ನಿಲ್ದಾಣ, ದೇಗುಲ ಹಾಗೂ ಮುಖ್ಯ ರಸ್ತೆಯು ಸದಾ ಜನಸಂದಣಿಯಿಂದ ಕೂಡಿರುತ್ತಿತ್ತು. ಆದರೆ ಇದೀಗ ಬಸ್ ಸಂಚಾರಕ್ಕೆ ಅನುಮತಿ ದೊರೆತಿದ್ದರೂ ಭಕ್ತರ ಆಗಮನದ ಕೊರತೆಯಿಂದ ಆರ್ಥಿಕ ಹೊಡೆತ ಬೀಳಬಹುದೆಂಬ ಅಂಜಿಕೆಯಿಂದ ಅನೇಕ ಬಸ್ ಮಾಲಕರು ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಪ್ರತಿ ದಿನ 80ಕ್ಕೂ ಮಿಕ್ಕಿ ಸಂಚಾರವಿರುವ ನಿಲ್ದಾಣದಲ್ಲಿ ಈಗ ಬೆರಳೆಣಿಕೆಯ ಬಸ್‌ಗಳು ಮಾತ್ರ ಸಂಚರಿಸುತ್ತಿದೆ.
ಜನವಿರಳ ಕೊಲ್ಲೂರು
ಪ್ರವಾಸಿಗರನ್ನೇ ಅವಲಂಬಿಸಿರುವ ಕೊಲ್ಲೂರು ಎರಡು ತಿಂಗಳಿಂದೀಚೆ ಜನ ಸಂಚಾರ ಇಲ್ಲದೆ ಸಂಪೂರ್ಣ ಕರ್ಫ್ಯೂ ಹೇರಿದಂತಿದೆ.ದೇಗುಲವು ಜೂ.7ರ ವರೆಗೆ ಮುಚ್ಚಿರುವುದರಿಂದ ಸ್ಥಳೀಯರೂ ಕೂಡ ಕೊರೊನ ವೈರಸ್ ಭೀತಿಯಿಂದ ಅಗತ್ಯಕ್ಕಷ್ಟೇ ಪೇಟೆಗೆ ಬರುವ ಪರಿಪಾಠ ಹೊಂದಿದ್ದಾರೆ. ಕೊಲ್ಲೂರು ಒಂದು ರೀತಿಯ ನಿರ್ಜನ ಪ್ರದೇಶವಾಗಿ ಕಂಡುಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!
Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ
B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು
ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಡಾ. ಮನಮೋಹನ್ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.