Koppal: ಸಂಗಣ್ಣ ಹ್ಯಾಟ್ರಿಕ್ ಹೀರೋ? ಹಿಟ್ನಾಳ್‌ಗೆ ಮತ್ತೆ ಟಿಕೆಟ್?
ಬಿಜೆಪಿಯ ಹಾಲಿ ಸಂಸದರಿಗೆ 3ನೇ ಬಾರಿ ಸ್ಪರ್ಧಿಸಿ ಗೆಲ್ಲುವಾಸೆ ಬಿಜೆಪಿ ಹೊಸಬರಿಗೆ ಪಕ್ಷ ಮಣೆ ಹಾಕುತ್ತದಾ?
Team Udayavani, Jan 14, 2024, 5:20 AM IST
ಕೊಪ್ಪಳ: ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಯಲ್ಲೂ ಕಮಲವೇ ಅರಳಿದೆ. ಈವರೆಗೆ 17 ಚುನಾವಣೆಗಳನ್ನು ಎದುರಿಸಿರುವ ಈ ಕ್ಷೇತ್ರದಲ್ಲಿ 9 ಬಾರಿ ಕಾಂಗ್ರೆಸ್, 3 ಬಾರಿ ಬಿಜೆಪಿ ಹಾಗೂ 2 ಬಾರಿ ಜೆಡಿಎಸ್ ಗೆದ್ದಿದೆ. ಅಲ್ಲದೆ, ಪಕ್ಷೇತರರು ಸಹಿತ ಇತರ ಪಕ್ಷಗಳು ಒಂದೊಂದು ಬಾರಿ ಗೆದ್ದಿವೆ. 1950ರ ಮೊದಲ ಸಂಸತ್ ಚುನಾವಣೆಯಲ್ಲೇ ಪಕ್ಷೇತರ ಅಭ್ಯರ್ಥಿ ಗೆದ್ದಿರುವುದು ಕೊಪ್ಪಳ (ಹಿಂದೆ ಕುಷ್ಟಗಿ ಕ್ಷೇತ್ರ) ರಾಜಕೀಯದ ಇತಿಹಾಸವಾಗಿದೆ.
ಹಾಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಎರಡು ಬಾರಿ ಗೆದ್ದಿದ್ದು, ಹ್ಯಾಟ್ರಿಕ್ ಜಯದ ಕನಸು ಕಾಣುತ್ತಿ ದ್ದಾರೆ. ಕಾಂಗ್ರೆಸ್‌ನಲ್ಲಂತೂ ಶಾಸಕ ರಾಘವೇಂದ್ರ ಹಿಟ್ನಾಳ್ ಸೋದರ, 2019ರ ಪರಾಜಿತ ಅಭ್ಯರ್ಥಿ ರಾಜಶೇಖರ ಹಿಟ್ನಾಳ್, ಮಾಜಿ ಸಚಿವ ಅಮರೇಗೌಡ ಬಯ್ನಾಪುರ ರೇಸ್‌ನಲ್ಲಿದ್ದಾರೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಗೆ ಟಿಕೆಟ್ ಕೊಟ್ಟರೂ ಅಚ್ಚರಿಪಡಬೇಕಿಲ್ಲ.
ಬಿಜೆಪಿಯಿಂದ ಯಾರು?
2004ರ ವರೆಗೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕೊಪ್ಪಳವನ್ನು ಬಿಜೆಪಿ ಸತತ ಮೂರು ಗೆದ್ದಿದೆ. 2014ರಿಂದ ಹಾಲಿ ಸಂಸದ ಸಂಗಣ್ಣ ಕರಡಿ ಎರಡು ಅವ ಧಿಗೆ ಗೆದ್ದಿದ್ದು, 2024ರ ಲೋಕಸಭೆಗೂ ನಾನು ಸಿದ್ಧ ಎನ್ನುವ ಸಂದೇಶ ಸಾರಿದ್ದಾರೆ. ಆದರೆ ಪಕ್ಷವು ಕಳೆದ ಬಾರಿಯೇ ಇವರಿಗೆ ಎರಡನೇ ಹಂತದಲ್ಲಿ ಟಿಕೆಟ್ ಘೋಷಿಸಿ ಇರುಸು ಮುರುಸು ಮಾಡಿತ್ತು. ಸಂಗಣ್ಣ ಅವರ ಹ್ಯಾಟ್ರಿಕ್ ಗೆಲುವಿಗೆ ಕಮಲ ಪಡೆ ಮಣೆ ಹಾಕುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಇವರಿಗೆ ಜತೆಗೆ ಕೊಪ್ಪಳದ ಖ್ಯಾತ ವೈದ್ಯರಾದ ಡಾ| ಬಸವರಾಜ ಕೆ.ಕೂಡ ಟಿಕೆಟ್‌ಗೆ ಕಸರತ್ತು ನಡೆಸಿದ್ದಾರೆ. 2019ರಿಂದಲೂ ಸ್ಪರ್ಧಿಸಲು ಪ್ರಯತ್ನಿಸಿದ್ದು, ಈ ಬಾರಿ ಶತಾಯಗತಾಯ ಕಣಕ್ಕೆ ಇಳಿಯಲೇಬೇಕೆಂದು ಓಡಾಡುತ್ತಿದ್ದಾರೆ.
ಸಂಗಣ್ಣ ಅವರಿಗೆ ಪಕ್ಷದೊಳಗೆ ವಿರೋ ಧವೂ ಇದೆ. ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಪಕ್ಷದ ಸಭೆಯಲ್ಲಿ ಸ್ಥಳೀಯ ನಾಯಕರು ಬಹಿರಂಗವಾಗಿಯೇ ವಿರೋಧಿಸಿದ್ದರು. ವಯಸ್ಸಿನ ಕಾರಣಕ್ಕಾಗಿ ಇವರಿಗೆ ಟಿಕೆಟ್ ನೀಡಬಾರದೆಂಬ ವಾದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಂಗಣ್ಣ, ಪ್ರಧಾನಿ ಮೋದಿಗೆ ವಯಸ್ಸಾದರೂ ಟಿಕೆಟ್ ನೀಡುವುದಾದರೆ ನನಗೇಕೆ ಇಲ್ಲ ಎಂದು ಸಡ್ಡು ಹೊಡೆದಿದ್ದರು.
ಮೈತ್ರಿ ಅಭ್ಯರ್ಥಿ ಕಸರತ್ತು
ಇನ್ನು ಕೇಂದ್ರ ಮಟ್ಟದಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಾಗಿರುವ ಜೆಡಿಎಸ್ ರಾಜ್ಯದಲ್ಲಿ ಆಯ್ದ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದು ಸೀಟು ಕೇಳುವ ಲೆಕ್ಕಾಚಾರದಲ್ಲಿದೆ. ಈ ಹಿಂದೆ ಬಿಜೆಪಿ ಯಲ್ಲೇ ಇದ್ದ ಸಿ.ವಿ.ಚಂದ್ರಶೇಖರ ವಿಧಾನಸಭೆಗೆ ಬಿಜೆಪಿ ಟಿಕೆಟ್ ಸಿಗದೆ ಜೆಡಿಎಸ್ ಸೇರಿದ್ದರು. ಈಗ ಮತ್ತೆ ಮೈತ್ರಿಯಾಟದ ಲೆಕ್ಕಾಚಾರದಲ್ಲಿ ಸಂಸತ್ ಚುನಾವಣೆಗೆ ನಾನೂ ಸ್ಪರ್ಧಿಸಲು ಸಿದ್ಧ ಎನ್ನುವ ಸಂದೇಶ ಸಾರಿದ್ದಾರೆ. ಹೀಗಾಗಿ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟು ಕೊಡುತ್ತದಾ ಅಥವಾ ತಮ್ಮ ಅಭ್ಯರ್ಥಿಗೇ ಮಣೆ ಹಾಕುತ್ತದಾ ಎನ್ನುವುದು ಕುತೂಹಲದ ಸಂಗತಿ.
ಕಾಂಗ್ರೆಸ್‌ನಲ್ಲಿ ಯಾರ್ಯಾರು?
ಕಾಂಗ್ರೆಸ್ ಪಾಳೆಯದಲ್ಲಂತೂ ಆಕಾಂಕ್ಷಿತರ ಪಟ್ಟಿ ದೊಡ್ಡದಿದೆ. ಕಳೆದ ಅವಧಿಗೆ ರಾಜಶೇಖರ ಹಿಟ್ನಾಳ್ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದು, ನನಗೆ ಈ ಬಾರಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಮಾಜಿ ಸಚಿವ ಅಮರೇಗೌಡ ಬಯ್ನಾಪುರ ನಾನೂ ಕೂಡ ಟಿಕೆಟ್ ಆಕಾಂಕ್ಷಿ ಎಂದಿದ್ದಾರೆ. ಅಲ್ಲದೆ ಪಕ್ಷದ ಸಂಘಟನ ಕಾರ್ಯದಲ್ಲಿ ತೊಡಗಿರುವ ಶಿವರಾಮೇ ಗೌಡ ಕೂಡ ಟಿಕೆಟ್‌ಗೆ ಬೇಡಿಕೆಯಿಟ್ಟಿದ್ದಾರೆ. ಜತೆಗೆ ಯುವ ಕಾಂಗ್ರೆಸ್ ಪಡೆ ಕಟ್ಟಿದ್ದ ಬಸನಗೌಡ ಬಾದರ್ಲಿ ಈ ಬಾರಿ ಟಿಕೆಟ್‌ಗೆ ಬಿಗಿಪಟ್ಟು ಹಿಡಿದಿದ್ದಾರೆ. ಇದೆಲ್ಲದರ ಮಧ್ಯೆ ಕಾಂಗ್ರೆಸ್ ಕ್ಷೇತ್ರದಲ್ಲಿ ಪ್ರಭಾವಿ ಎನಿಸಿರುವ ಬಸವರಾಜ ರಾಯರಡ್ಡಿ ಅವರನ್ನು ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಿಲ್ಲ. ಅನುಭವಿ, ಭಾಷಾ ಜ್ಞಾನ ಇದೆ. 1996ರಲ್ಲಿ ನಡೆದ ಚುನಾವಣೆಯಲ್ಲಿ ರಾಯರಡ್ಡಿ ಗೆದ್ದಿರುವ ಇತಿಹಾಸವಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯವೇ ಹೆಚ್ಚಿದೆ. ಇದಲ್ಲದೆ ಕುರುಬ ಸಮುದಾಯ, ಎಸ್‌ಸಿ, ಎಸ್‌ಟಿ ಸಹಿತ ಅಲ್ಪಸಂಖ್ಯಾಕ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.