ಅಧಿಕಾರಿಗಳ ನಿರ್ಲಕ್ಷ್ಯ : ಅಂಗನವಾಡಿಗಳಿಗೆ ಹಂಚಿಕೆಯಾಗುತ್ತಿದ್ದ ಮೊಟ್ಟೆಗಳ ಅನುದಾನ ವಾಪಾಸ್


Team Udayavani, Mar 16, 2022, 7:18 PM IST

ಅಧಿಕಾರಿಗಳ ನಿರ್ಲಕ್ಷ್ಯ : ಅಂಗನವಾಡಿಗಳಿಗೆ ಹಂಚಿಕೆಯಾಗುತ್ತಿದ್ದ ಮೊಟ್ಟೆಗಳ ಅನುದಾನ ವಾಪಾಸ್

ಕೊರಟಗೆರೆ : ಅಪೌಷ್ಟಿಕ ಮುಕ್ತ ಸಮಾಜ ಗೊಳಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಮೊಟ್ಟೆ ವಿತರಣೆ ಕಾರ್ಯಕ್ರಮ ಅಧಿಕಾರಿಗಳ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನದಿಂದ ಲಕ್ಷಾಂತರೂ ಹಣ ಸರ್ಕಾರಕ್ಕೆ ವಾಪಸಾಗಿರುವ ಘಟನೆ ಕೊರಟಗೆರೆ ತಾಲೂಕಿನಲ್ಲಿ ಜರುಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಮಕ್ಕಳು ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ಕಾಡದಿರಲಿ ಎಂದು ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ ಹಾಲು ಇತರ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದ್ದು ಕೊರಟಗೆರೆ ತಾಲೂಕಿನಲ್ಲಿ ಜನವರಿ ತಿಂಗಳ 85000ರಷ್ಟು ಮೊಟ್ಟೆ ಹಂಚಿಕೆಯಾಗಿದೆ ಅನುದಾನ ವಾಪಸ್ ಸರ್ಕಾರಕ್ಕೆ ಹಿಂತಿರುಗಿದರೆ ಫೆಬ್ರವರಿ ಮಾಹೆಯಲ್ಲಿಯೂ ಸಹ ಈ ಯೋಜನೆ ಅನುಷ್ಠಾನದಲ್ಲಿ ಏರುಪೇರಾಗಿದೆ ಎನ್ನಲಾಗಿದೆ.

ಕೊರಟಗೆರೆ ತಾಲೂಕಿನಲ್ಲಿ 3ರಿಂದ 6 ವರ್ಷದೊಳಗಿನ 4541 ಮಕ್ಕಳಿದ್ದು, ಬಾಣಂತಿಯರು 1057 ಹಾಗೂ ಗರ್ಭಿಣಿಯರು 886 ಜನರಿಗೆ ಮಕ್ಕಳಿಗೆ ಪ್ರತಿ ವಾರ 2 ಮೊಟ್ಟೆ ಗಳಂತೆ ತಿಂಗಳಿಗೆ 8, ಬಾಣಂತಿಯರಿಗೆ ಪ್ರತಿನಿತ್ಯ 1 ರಂತೆ ತಿಂಗಳಿಗೆ 25 ಗರ್ಭಿಣಿಯರಿಗೂ ಸಹ ಪ್ರತಿ ಮಾಹೆ 25ರಂತೆ ಒಟ್ಟು 85 ಸಾವಿರ ಮೊಟ್ಟೆಗಳು ತಾಲ್ಲೂಕಿನಲ್ಲಿ ಅಂಗಡಿ ಮೂಲಕ ಪ್ರತಿ ತಿಂಗಳು ವಿತರಣೆಯಾಗುತ್ತಿದ್ದು, ಜನವರಿ ಮಾಹೆಯ 85000 ಮೊಟ್ಟೆಗೆ 4.5ಲಕ್ಷ ಅನುದಾನ ‌ ಸರ್ಕಾರಕ್ಕೆ ವಾಪಸ್ ಆಗಿರುವುದಲ್ಲದೆ ಫೆಬ್ರವರಿ ಮಾಹೆ ಸಹ ಕೆಲವು ಅಂಗನವಾಡಿಗಳಲ್ಲಿ ಸಮರ್ಪಕವಾಗಿ ವಿತರಣೆ ಆಗಿರುವುದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಇದನ್ನೂ ಓದಿ : ಮಧುಗಿರಿ : ನಮ್ಮ ಕಾಲೇಜಿನಲ್ಲಿ ಸಮವಸ್ತ್ರ ಇಲ್ಲ, ಹಿಜಾಬ್ ಧರಿಸಲು ಅವಕಾಶ ನೀಡಿ

ನಿಯಮದಂತೆ ಪ್ರತಿ ಅಂಗನವಾಡಿ ವ್ಯಾಪ್ತಿಯ 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ವಾರಕ್ಕೆ 2 ದಿನ ಒಟ್ಟು ತಿಂಗಳಿಗೆ 8, ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ತಿಂಗಳಿಗೆ ಸರಾಸರಿ 25 ದಿನ ಮೊಟ್ಟೆ ವಿತರಿಸಲಾಗುತ್ತದೆ ಇದಕ್ಕೆ ಆಯಾ ಕೇಂದ್ರಗಳಿಗೆ ಪ್ರತಿ ಮೊಟ್ಟೆಗೆ ಸರ್ಕಾರ 5 ರೂ ನಂತೆ ಸರ್ಕಾರ ನಿಗದಿ ಮಾಡಿ ಅಂಗನವಾಡಿ ಕೇಂದ್ರಗಳಿಗೆ ಅನುದಾನ ಬಿಡುಗಡೆಗೊಳಿಸಲಾಗುತಿದ್ದು, ಆದರೆ ಅಂಗನವಾಡಿ ಕೇಂದ್ರಗಳಲ್ಲಿ ಸಾಗಣಿಕೆ ವೆಚ್ಚ ಹಾಗೂ ಸಾಗಾಣಿಕೆ ಸಂದರ್ಭದಲ್ಲಿ ಆಗುವಂತ ವೇಸ್ಟೇಜ್ ಗಳಿಗೆ ಸರ್ಕಾರ ಹಣ ಬರಿಸುತ್ತಿಲ್ಲ ಎಂಬ ಸಮಾಧಾನ ಅಂಗನವಾಡಿ ಕೇಂದ್ರಗಳಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದ್ದು ಇದು ಸಹ ಈ ಯೋಜನೆಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕೇಂದ್ರ ಹಾಗು ರಾಜ್ಯ ಸರ್ಕಾರ ಮಕ್ಕಳ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ದೂರದೃಷ್ಠಿಯ ಹಿನ್ನೆಲೆಯಲ್ಲಿ, ಇಲಾಖೆಯು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಜಾರಿಯಲ್ಲಿರುವ ನೀತಿ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿ ಪ್ರಾಥಮಿಕ ಹಂತದಲ್ಲಿಯೇ ಪೌಷ್ಟಿಕ ಆಹಾರ ಒದಗಿಸಿ ಆರೋಗ್ಯ ಸಮಾಜ ಸೃಷ್ಟಿಸುವ ಸರ್ಕಾರದ ಧೆಯೋದ್ದೇಶ ಗಳಿಗೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇಡೀ ಯೋಜನೆ ಹಾಳಾಗುವ ಸಾಧ್ಯತೆಗಳಿದ್ದು ಸರ್ಕಾರದ ಮೇಲ್ಪಟ್ಟ ಅಧಿಕಾರಿಗಳು ಸಹ ಈ ಯೋಜನೆಗಳ ಅನುಷ್ಠಾನದ ಬಗ್ಗೆ ಹೆಚ್ಚು ಜವಾಬ್ದಾರಿ ವಹಿಸಿ ಕೆಳಹಂತದ ಅಧಿಕಾರಿಗಳಿಂದ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಶ್ರಮ ವಾಗುವ ಅವಶ್ಯಕತೆ ಇದೆ ಎನ್ನಲಾಗಿದೆ.

ಕೊರಟಗೆರೆ ತಾಲೂಕಿನಲ್ಲಿ ಜನವರಿ ಮಾಹೆಯ 6484 ಫಲಾನುಭವಿಗಳ 85 ಸಾವಿರ ಮೂಟ್ಟೆಗಳು ವಿತರಣೆ ಯಾಗಿರುವುದಿಲ್ಲ, ಜೊತೆಗೆ ಫೆಬ್ರವರಿ ತಿಂಗಳ ಅನುದಾನ ಅಂಗನವಾಡಿ ಕಾರ್ಯಕರ್ತರ ಕೈ ಸೇರದ ಕಾರಣ ಅಂಗನವಾಡಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಮೊಟ್ಟೆಗಳು ಹಂಚಿಕೆ ಯಾಗಿರುವುದಿಲ್ಲ ಒಂದು ತಿಂಗಳು ಸ್ಥಗಿತಗೊಂಡ ಕಾರಣ ಮುಂದಿನ ತಿಂಗಳು ಅಂದರೆ ಫೆಬ್ರವರಿ ಮಾಹೆಯಿಂದ ಪ್ರತಿ ಅಂಗನವಾಡಿಯಲ್ಲಿಯೂ ಮೊಟ್ಟೆ ಹಂಚಿಕೆ ಮಾಡುವುದು ಎಂದು ಆದೇಶ ಹೊರಡಿಸಿದ್ದರು ಸಹ ಅನುದಾನ ಕೊರತೆಯಿಂದ ಕೆಲವು ಅಂಗನವಾಡಿಗಳಲ್ಲಿ ಫೆಬ್ರವರಿ ಮಾಹೆಯಲ್ಲಿಯೂ ಸಹ ಸಮರ್ಪಕವಾಗಿ ಮೊಟ್ಟೆ ವಿತರಣೆಯಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ.

ಕೊರೋನಾ ಸುಳಿಗೆ ಸಿಲುಕಿ 2 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರ ನಲುಗಿ ಹೋಗಿದ್ದು, ಈಗ ಇನ್ನೇನು ಸುಧಾರಣೆ ಗೊಂಡಿದೆ ಎನ್ನುವ ಸಂದರ್ಭದಲ್ಲಿ ಶಿಕ್ಷಣದ ಮೂಲ ಬೇರಾದ ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಸಮರ್ಪವಾಗಿ ನಿರ್ವಹಣೆ ಆಗಬೇಕಿದ್ದ ಉಪಯುಕ್ತ ಯೋಜನೆಗಳು ಅಧಿಕಾರಿಗಳು ಹಾಗೂ ನೌಕರ ವರ್ಗದ ನಿರ್ಲಕ್ಷದಿಂದ ಯೋಜನೆ ದಾರಿ ತಪ್ಪಿ ಅದರಲ್ಲೂ ಹೆಚ್ಚು ಅಪೌಷ್ಟಿಕತೆಯಿಂದ ನರಳುತ್ತಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಈ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಹಲವು ನಾಗರಿಕರಲ್ಲಿ ಅಸಮಧಾನಕ್ಕೆ ಕಾರಣವಾಗಿದ್ದು, ಅನುದಾನ ಕೊರತೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಬಂದ ಅನುದಾನ ಸಮರ್ಪಕವಾಗಿ ಬಳಕೆ ಮಾಡದೆ ಸರಕಾರಕ್ಕೆ ವಾಪಸ್ ಹಿಂತಿರುಗಿಸಿರುವುದು ಅಧಿಕಾರಿಗಳ ಹಾಗೂ ನೌಕರ ವರ್ಗದ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿ ಎಂದು ಹಲವರು ಆರೋಪಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಜನವರಿ ತಿಂಗಳಲ್ಲಿ ಅಂಗನವಾಡಿ ನೌಕರಿಗೆ ಸಂಬಂಧಿಸಿದಂತೆ ಕೆಲವೊಂದು ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸಿದರು ಮುಷ್ಕರದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ರೀತಿಯ ಗುಣಾತ್ಮಕ ಮೂಲಭೂತ ಸೌಕರ್ಯ ಒದಗಿಸಬೇಕು ಅಂಗನವಾಡಿ ಕೇಂದ್ರಗಳಿಗೆ ಅನುದಾನ ಒದಗಿಸುವಾಗ ಸಮರ್ಪಕವಾಗಿ ಅನುದಾನ ಬಳಕೆಗೆ ಬೇಕಾಗುವ ಪೂರಕ ವಾತಾವರಣವನ್ನು ಕಲ್ಪಿಸಬೇಕು ಜೊತೆಗೆ ಕೋಳಿ ಮಟ್ಟೆ ವಿತರಣಾ ಯೋಜನೆಯ ಸಾಧಕ-ಬಾದಕಗಳನ್ನು ಪರಿಶೀಲಿಸಿ ಮೊಟ್ಟೆ ಸಾಗಾಣಿಕೆಯ ಪ್ರಯಾಣ ಭತ್ಯೆ ಹಾಗೂ ವೇಸ್ಟೇಜ್ ತುಂಬುವಂಥ ಕೆಲಸ ಸರ್ಕಾರದಿಂದ ಆಗಬೇಕು ಎಂದು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಈ ಯೋಜನೆಯನ್ನ‌ ಒಂದು ತಿಂಗಳ ಕಾಲ ಸ್ಥಗಿತಗೊಳಿಸಿ ಆ ಅನುದಾನದ ಮೊತ್ತವನ್ನು ಸದ್ಬಳಕೆ ಮಾಡಿಕೊಳ್ಳದೆ ಸರ್ಕಾರಕ್ಕೆ ವಾಪಸ್ ಹಿಂತಿರುಗಿಸಿರುವ ಬೆಳವಣಿಗೆ ಅಧಿಕಾರಿಗಳ ನಿರ್ಲಕ್ಷ ಧೋರಣೆ ಎದ್ದುಕಾಣುತ್ತದೆ ಎನ್ನಲಾಗಿದೆ.

– ಅಂಬಿಕಾ .ಸಿ.ಎಸ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಇಲಾಖೆ ಕೊರಟಗೆರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಪ್ರತಿಯೊಂದು ಯೋಜನೆಗಳು ನಿಯಮಾನುಸಾರ ಸರ್ಕಾರದ ಆದೇಶದನ್ವಯ ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಈಗ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ಹೆಚ್ಚಾಗಿ ದ್ದು,ಒಂದು ಮೊಟ್ಟೆಗೆ 5ರೂ ನಂತೆ ಸರ್ಕಾರ ಅನುದಾನ ನೀಡುತ್ತಿದೆ. ಮಕ್ಕಳಿಗೆ ವಾರಕ್ಕೆ2 ರಂತೆ ತಿಂಗಳಿಗೆ 8 ಮೊಟ್ಟೆ ಹಾಗೂ ಗರ್ಭಿಣಿ ಮತ್ತು ಬಾಣಂತಿಯರಿಗೆ 25 ಮೊಟ್ಟೆ ನೀಡಲೇ ಬೇಕು ಎಂಬ ಆದೇಶವಿದೆ. ಮಾರುಕಟ್ಟೆಯಲ್ಲಿ ಹೆಚ್ಚಾದ ಮೊಟ್ಟೆಯ ಬೆಲೆಯನ್ನು ಸರಿದೂಗಿಸಲು ಅಂಗನ ವಾಡಿಗಳಲ್ಲಿ ಮಕ್ಕಳಿಗೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಮೊಟ್ಟೆಗಳನ್ನು ಕಡಿಮೆ ಮಾಡಿ ವಿತರಿಸಲು ಕ್ರಮ ಕೈಗೊಳ್ಳುವ ಪರಿಷ್ಕೃತ ಆದೇಶವಿದೆ. ಇದನ್ನು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕು. ನಾವು 5 ರೂನಂತೆ ಹಣವನ್ನು ಅಂಗನವಾಡಿಗಳಿಗೆ ನೀಡಿದ್ದೇನೆ. ಹೆಚ್ಚಾದ ಮೊಟ್ಟೆಯ ದರದಿಂದ ನಿಗಧಿತ ಮೊಟ್ಟೆಗಳನ್ನು‌ ನೀಡಲಾಗುತ್ತಿಲ್ಲ. ವ್ಯತ್ಯಾಸವಾಗುತ್ತಿದೆ ಇದಕ್ಕೆ ನಾವೇನು ಮಾಡಲಿಕ್ಕಾಗಲ್ಲ.

ಪ್ರಭಾಕರ್ ಸಿ.ಡಿ- ಜೆಟ್ಟಿ ಅಗ್ರಹಾರ ಗ್ರಾಪಂ ಸದಸ್ಯರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿಗಳ ಮೂಲಕ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು ‌ ಪ್ರಾಥಮಿಕ ಹಂತದಲ್ಲಿ ಬಾಲ್ಯವ್ಯವಸ್ಥೆ ಯಿಂದಲೂ ಮಾನಸಿಕವಾಗಿ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾದ ಯೋಜನೆಗಳ ಆಗಿದ್ದು ಇಂತಹ ಯೋಜನೆಗಳ ಅನುಷ್ಠಾನದ ವಿಚಾರದಲ್ಲಿ ನೌಕರವರ್ಗ ಬಹಳ ಎಚ್ಚರಿಕೆಯ ಹೆಜ್ಜೆಯಿಟ್ಟು ಗ್ರಾಮೀಣ ಪ್ರದೇಶದ ಜನರ ಒಳಿತಿಗೆ ಜಾರಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳು ಅನುಷ್ಠಾನದಲ್ಲಿ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು.

ಅಂಗನವಾಡಿಗಳಲ್ಲಿ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಮೊಟ್ಟೆ ವಿತರಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆದೇಶವಿದೆ. ಆದರೆ ಅಂಗನವಾಡಿಗಳಲ್ಲಿ 2 ರಿಂದ 3 ವರ್ಷದೊಳಗಿನ ಮಕ್ಕಳೂ ಇರುತ್ತಾರೆ. ಒಬ್ಬರಿಗೆ ಕೊಟ್ಟು ಮತ್ತೊಬ್ಬರಿಗೆ ಕೊಡದಿದ್ದರೆ ಹೇಗೆ? ನಮಗೆ ಇದು ಬಹಳ ಬೇಸರದ ಸಂಗತಿ. ಹೀಗಾಗಿ ಕೆಲವೊಮ್ಮೆ ಒಂದು ಮೊಟ್ಟೆಯಲ್ಲಿ ಇಬ್ಬರು-ಮೂವರಿಗೆ ಕೊಡುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಂಗನವಾಡಿ ಶಿಕ್ಷಕಿಯರು. 6 ತಿಂಗಳಿನಿಂದ ಆರು ವರ್ಷದೊಳಗಿನ ಮಕ್ಕಳಿಗೆ ಮೂರು ತಿಂಗಳಿಗೊಮ್ಮೆ 500 ಗ್ರಾಂ ಹಾಲಿನ ಪುಡಿ ನೀಡಲಾಗುವುದು. ಆದರೆ ಮೊಟ್ಟೆ ವಿತರಿಸುವುದು ಮಾತ್ರ ಕಷ್ಟವಾಗುತ್ತಿದೆ ಎಂಬುದು ಅವರ ಅಳಲು.

ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ದರಗಳಲ್ಲಿ ವ್ಯತ್ಯಾಸವಿರುತ್ತಿದೆ. ಹೀಗಾಗಿ ಪ್ರದೇಶಕ್ಕೆ ಅನುಗುಣವಾಗಿ ಮತ್ತು ಮಕ್ಕಳ ಹಾಜರಾತಿಗೆ ತಕ್ಕಂತೆ ಮೊಟ್ಟೆ, ಹಾಲು ಸೇರಿದಂತೆ ಪೂರಕ ಪೌಷ್ಟಿಕ ಆಹಾರ ವಿತರಿಸಬೇಕು.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

Devegowda

Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್‌.ಡಿ.ದೇವೇಗೌಡ

Sathish-rajanna-mahadevappa

Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್‌ ಲೀಡರ್‌ʼ ಅಸ್ತ್ರ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.