Kota ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆ; ಪ್ರಕರಣ ದಾಖಲು
Team Udayavani, Oct 18, 2023, 11:32 PM IST
ಕೋಟ: ಗಂಡ ಮತ್ತು ಆತನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಮಾನಸಿಕ ಹಿಂಸೆ ನೀಡಿದ್ದಾರೆ ಹಾಗೂ ಚಿನ್ನಾಭರಣ ಸಹಿತ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ ಎಂದು ಸುಳ್ಳು ಆರೋಪ ಮಾಡಿ ಮಾನಹಾನಿ ಮಾಡಿದ್ದಾರೆ ಎಂದು ಬನ್ನಾಡಿ ಕಂಬಳಗದ್ದೆಮನೆ ನಿವಾಸಿ ಸ್ಫೂರ್ತಿ ಶೆಟ್ಟಿ ಅವರು ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇವರಿಗೆ ಕುಂದಾಪುರ ತಾಲೂಕಿನ ಉಳ್ಳೂರು- 74ನೇ ನಿವಾಸಿ ಸಂಕೇತ್ ಶೆಟ್ಟಿ ಅವರೊಂದಿಗೆ 2023 ಮೇ 21ರಂದು ವಿವಾಹವಾಗಿದ್ದು, ವಿವಾಹದ ಸಂದರ್ಭ ಗಂಡನ ಮನೆಯವರು 15ಲಕ್ಷ ರೂ. ವರದಕ್ಷಿಣಿಗೆ ಬೇಡಿಕೆ ಇಟ್ಟಿದಾರೆ ಹಾಗೂ ಮದುವೆ ದಿನ 5 ಲಕ್ಷ ರೂ ವರದಕ್ಷಿಣೆ ಪಡೆದಿದ್ದಾರೆ. ಆದರೆ ಮದುವೆಯ ಅನಂತರ ಸಂಕೇತ್‌ಗೆ ಲೈಂಗಿಕ ವಿಷಯಕ್ಕೆ ಸಂಬಂಧಪಟ್ಟಂತೆ ಆರೋಗ್ಯದ ಸಮಸ್ಯೆ ಇರುವುದು ಗಮನಕ್ಕೆ ಬಂದಿದ್ದು ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ. ಅನಂತರ ಸ್ಫೂರ್ತಿಯವರಿಗೆ ಗಂಡ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದು, ಮಾವ ಸಂಜೀವ ಶೆಟ್ಟಿ ಮತ್ತು ಅತ್ತೆ ವನಿತಾ ಶೆಡ್ತಿ ಜತೆಯಾಗಿ ಹೆಚ್ಚಿನ ವರದಕ್ಷಿಣೆಗೂ ಬೇಡಿಕೆ ಸಲ್ಲಿಸಿ ತವರು ಮನೆಗೆ ಬಿಟ್ಟು ಹೋಗಿದ್ದಾರೆ.
ಅನಂತರ ಗಂಡ ಹಾಗೂ ಅವರ ಮನೆಯವರು ಸ್ಫೂರ್ತಿಗೆ ಸಹದ್ಯೋಗಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು, ಮದುವೆ ಸಂದರ್ಭ ಹಾಕಿದ ಚಿನ್ನಾಭರಣ ಸಹಿತ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ ಎಂದು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದಾರೆ ಎಂದು ಸ್ಫೂರ್ತಿ ಉಡುಪಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.