Kota ಚಿಟ್ಟಿಬೆಟ್ಟು ಪರಿಶಿಷ್ಟ ಪಂಗಡ ಮನೆ ನಿರ್ಮಾಣಕ್ಕೆ ಕೋಟ ಮಸೀದಿ ನೆರವು
Team Udayavani, May 27, 2024, 11:56 PM IST
ಕೋಟ: ಇಲ್ಲಿನ ಚಿಟ್ಟಿಬೆಟ್ಟಿನಲ್ಲಿ ಪರಿಶಿಷ್ಟ ಪಂಗಡದ ಹಲವು ಕುಟುಂಬಗಳು ಹಳೆಯ ಗುಡಿಸಲಿನಲ್ಲಿ ವಾಸವಾಗಿದ್ದು, ಅವರಿಗೆ ಕೋಟತಟ್ಟು ಗ್ರಾ.ಪಂ. ನೇತೃತ್ವದಲ್ಲಿ ದಾನಿ ಗಳ ಸಹಕಾರದಿಂದ 8 ಹೊಸ ಮನೆ ನಿರ್ಮಿಸಲಾಗುತ್ತಿದೆ. ಈ ಕಾರ್ಯಕ್ಕೆ ಸಹಾಯವಾಗಿ ಕೋಟ ಜಾಮಿಯಾ ಮಸೀದಿ ವತಿಯಿಂದ 25 ಸಾವಿರ ರೂ. ಸಹಾಯಧನ ನೀಡಲಾಯಿತು.
ಮಸೀದಿಯ ಅಧ್ಯಕ್ಷ ಕೆ.ಎಂ. ಸಲೀಂ ಚೆಕ್ ಹಸ್ತಾಂತರಿಸಿ, ಗ್ರಾ.ಪಂ. ವತಿಯಿಂದ 8 ಮನೆಗಳ ನಿರ್ಮಾಣ ಕಾರ್ಯ ಅತ್ಯಂತ ಶ್ಲಾಘನೀಯ. ಜಾತಿ-ಮತ-ಧರ್ಮವನ್ನು ಮೀರಿದ ಮನುಜ ಪ್ರೀತಿ ಇಂದಿನ ಅಗತ್ಯ. ಆ ನಿಟ್ಟಿನಲ್ಲಿ ಜಾಮೀಯಾ ಮಸೀದಿ ವತಿಯಿಂದ ಈ ಸಹಕಾರ ನೀಡಲಾಗುತ್ತಿದೆ ಎಂದರು.
ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ, ಗಣ್ಯರಾದ ಸೀತಾ, ರವೀಂದ್ರ ರಾವ್, ಬಶೀರ್, ವಾಹಿದ್ ಆಲಿ, ಅಬ್ದುಲ್ ಬಶೀರ್, ಅಬ್ದುಲ್ ಸಿರಾಜ್ ಬಾರಿಕೆರೆ, ಇಬ್ರಾಹಿಂ ಪಡುಕೆರೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.