ವಸತಿ ಶಾಲೆ ಸಮಸ್ಯೆ ಇತ್ಯರ್ಥ : ವಾರದೊಳಗೆ ಶಿಲಾನ್ಯಾಸ : ಸಚಿವ ಕೋಟ
Team Udayavani, Apr 2, 2022, 12:31 PM IST
ಕುಂದಾಪುರ: ಸಿದ್ದಾಪುರ ಹಾಗೂ ಶಂಕರನಾರಾಯಣ ವಸತಿ ಶಾಲೆ ಸಮಸ್ಯೆ ಇತ್ಯರ್ಥಪಡಿಸಿ ವಾರದಲ್ಲಿ ಶಾಸಕರಿಂದ ಶಿಲಾನ್ಯಾಸ ಆಗುವಂತೆ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಶುಕ್ರವಾರ ಇಲ್ಲಿನ ಪ್ರವಾಸಿಮಂದಿರದಲ್ಲಿ ಇಲಾಖಾಧಿಕಾರಿಗಳ ಸಭೆ ನಡೆಸಿದರು.
ಇಂದಿರಾ ಗಾಂಧಿ ಶಾಲೆ ಸಿದ್ದಾಪುರ ಇಂದಿರಾ ಗಾಂಧಿ ವಸತಿ ಶಾಲೆಯ ಸಮಸ್ಯೆ ನಿವಾರಿಸಲು ವಿಫಲರಾದ ಬೈಂದೂರು ಆರ್‌ಎಫ್ಒ ಸತೀಶ್‌ಬಾಬು ಅವರನ್ನು ವರ್ಗ ಮಾಡಲಾಗಿದೆ. ಸಚಿವನಾಗಿ ಹೇಳಿದರೂ ಆದೇಶ ಪಾಲಿಸಿರಲಿಲ್ಲ. ಇನ್ನೂ ಕಠಿನ ಕ್ರಮ ಕೈಗೊಳ್ಳುವಂತೆ ಮಾಡಬೇಡಿ. ಇಂದು ಸಂಜೆಯೊಳಗೆ ಕಡತ ತಯಾರಿಸಿ ಡಿಸಿ ಕಚೇರಿಗೆ ಕಳುಹಿಸಿ ಎಂದು ಡಿಎಫ್ಒಗೆ ಸೂಚಿಸಿದರು. ಮಂಗಳವಾರದ ಒಳಗೆ ಮರಗಳ ತೆರವಾಗಬೇಕು. ಶನಿವಾರದೊಳಗೆ ಬೈಂದೂರು ಶಾಸಕ ಸುಕುಮಾರ ಶೆಟ್ಟರ ಅನುಕೂಲ ನೋಡಿ ಅವರಿಂದ ಶಿಲಾನ್ಯಾಸ ಮಾಡಿಸಿ ಸಮಾಜ ಕಲ್ಯಾಣ ಇಲಾಖಾಧಿಕಾರಿ ಗಳಿಗೆ, ಗುತ್ತಿಗೆದಾರರಿಗೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಅಧಿಕಾರಿಗಳಿಗೆ ತಿಳಿಸಿದರು.
ಅಂಬೇಡ್ಕರ್ ಶಾಲೆ
ಶಂಕರನಾರಾಯಣದಲ್ಲಿ ಅಂಬೇಡ್ಕರ್ ವಸತಿ ಶಾಲೆ ಸಮಸ್ಯೆಯೂ ಇತ್ಯರ್ಥವಾಗಿದ್ದು ಶೀಘ್ರ ಶಿಲಾನ್ಯಾಸ ನಡೆಯಲಿದೆ. ಉಡುಪಿ, ದ.ಕ. ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ವಾರ್ಡ್‌ನ್ ಕೊರತೆ ಇರುವ ಕುರಿತು ಅಧಿಕಾರಿಗಳು ಗಮನಕ್ಕೆ ತಂದರು. ಸಂಬಂಧಪಟ್ಟವರನ್ನು ಸಂಪರ್ಕಿಸಿದ ಸಚಿವರು, ಕೌನ್ಸಿಲಿಂಗ್ ಮೂಲಕ ವಾರ್ಡನ್ ನೇಮಕಾತಿ ನಡೆಯಲಿದ್ದು ದ.ಕ., ಉಡುಪಿ, ಉ.ಕ. ಜಿಲ್ಲೆಗೆ ಮೊದಲ ಆದ್ಯತೆ ನೀಡಿ. ಉಡುಪಿ ಜಿಲ್ಲೆಗೆ 11 ವಾರ್ಡನ್‌ಗಳ ಅಗತ್ಯವಿದೆ ಎಂದರು. ಉಡುಪಿಯ ಅಜ್ಜರಕಾಡಿನಲ್ಲಿ ವಸತಿ ಶಾಲೆ ಸ್ಥಾಪಿಸಲು ಜಾಗ ಮೀಸಲಿಡಲಾಗಿದೆ ಎಂದರು.
ನಾರಾಯಣ ಗುರು ಶಾಲೆ
ರಾಜ್ಯದಲ್ಲಿ ನಾರಾಯಣ ಗುರು ಹೆಸರಿನಲ್ಲಿ 4 ವಸತಿ ಶಾಲೆ ಆರಂಭವಾಗಲಿದ್ದು ಉಡುಪಿ ಜಿಲ್ಲೆಗೆ ಮಂಜೂರಾದ ಶಾಲೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬೇಡಿಕೆಯಂತೆ ಕುಂದಾಪುರ ತಾಲೂಕಿನಲ್ಲಿ ಆರಂಭಿಸಲಾಗುವುದು. ಉಳಿದಂತೆ ದ.ಕ., ಉ.ಕ., ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ 1 ಶಾಲೆ ಆರಂಭವಾಗಲಿದೆ.
ಸಾಲದ ದಾಖಲು
ಸಹಕಾರಿ ಸಂಘಗಳಲ್ಲಿ ಕೃಷಿಗೆ ಸಂಬಂಧಪಟ್ಟಂತೆ ಅಭಿವೃದ್ಧಿ ಸಾಲಗಳನ್ನು ಮಾಡಿದರೆ ಆರ್‌ಟಿಸಿಯಲ್ಲಿ ದಾಖಲಾಗಬೇಕು. ಸಂಘಗಳ ನಿಬಂಧನೆಯಂತೆ ಸಾಲಗಾರನು ತನ್ನ ವ್ಯಾಪ್ತಿಗೆ ಬರುವ ಉಪನೋಂದಣಾ ಕಚೇರಿಗೆ ಹೋಗಿ ತಾನು ಕೊಟ್ಟಿರುವ ಭೂಮಿಯನ್ನು ಅಡಮಾನ ಮಾಡಿ ನಂತರ ಅದನ್ನು ಆರ್‌ಟಿಸಿಯಲ್ಲಿ ದಾಖಲು ಮಾಡಬೇಕು. ಇದಕ್ಕೆ ರೈತ ಸಾಲಗಾರ 3-4 ಬಾರಿ ಉಪ ನೋಂದಣಿ ಕಚೇರಿಗೆ ಹೋಗಬೇಕು ಎಂದರು.
ಕೊರಗ ಮನೆಗೆ ಅನುದಾನ
ಕುಂದಾಪುರ ಪುರಸಭೆ ವ್ಯಾಪ್ತಿಯ ಕೊರಗರ ಮನೆಗಳಿಗೆ ಅನುದಾನ ಬಿಡುಗಡೆ ಭಾಗಶಃ ಆಗಿದ್ದು ಉಳಿಕೆ ಅನುದಾನ ಶೀಘ್ರ ಬಿಡುಗಡೆಯಾಗಲಿದೆ. ಆಲೂರಿನಲ್ಲಿ 225 ಎಕರೆ ಗಣಿಗಾರಿಕೆ ನಡೆಯುತ್ತಿದ್ದರೂ 23 ಕೊರಗ ಕುಟುಂಬಗಳಿಗೆ ಜಾಗ ಇಲ್ಲ ಎಂಬ ವಿಚಾರದ ಕುರಿತು ಗಮನಹರಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.