Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!
Team Udayavani, Apr 17, 2024, 12:22 AM IST
ಕೋಟ: ಅನಾರೋಗ್ಯದಿಂದ ಬಳಲು ತ್ತಿದ್ದ ವೃದ್ಧೆಯೋರ್ವರು ಮನೆಯಲ್ಲೇ ಮತದಾನ ಕಾರ್ಯಕ್ರಮದಡಿ ಮತ ದಾನ ಮಾಡಿ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದ ಘಟನೆ ಸಾಸ್ತಾನ ಪಾಂಡೇಶ್ವರದ ಚಡಗರ ಅಗ್ರಹಾರದ ಶ್ಯಾನುಭೋಗರ ಮನೆಯಲ್ಲಿ ಎ. 15ರಂದು ಸಂಭವಿಸಿದೆ.
ನಿವೃತ್ತ ಗ್ರಾಮಲೆಕ್ಕಾ ಧಿಕಾರಿ ದಿ| ನಾರಾಯಣ ಉಪಾಧ್ಯ ಅವರ ಪತ್ನಿ ಪಿ. ಯಶೋದಾ ನಾರಾಯಣ ಉಪಾಧ್ಯ (83) ಮೃತಪಟ್ಟವರು.ಅವರಿಗೆ ಶನಿವಾರ ರಾತ್ರಿಯಿಂದ ಸಣ್ಣ ಪ್ರಮಾಣದ ಎದೆನೋವು, ಸುಸ್ತು ಕಾಣಿಸಿಕೊಂಡಿತ್ತು. ಸೋಮವಾರ ಅವರಿಗೆ ಮನೆಯಿಂದಲೇ ಮತದಾನಕ್ಕೆ ಸಮಯ ನಿಶ್ಚಯವಾಗಿತ್ತು. ಆದ್ದರಿಂದ “ಮತದಾನ ಮುಗಿಸಿಯೇ ನಾನು ಆಸ್ಪತ್ರೆಗೆ ತೆರಳುವುದು’ ಹಠ ಹಿಡಿದಿದ್ದರು. ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಹೋಗುವಂತೆ ಮನೆಯವರು ಮತ್ತೊಮ್ಮೆ ಒತ್ತಾಯಿಸಿದ್ದರೂ “ಅಧಿಕಾರಿಗಳು ಮನೆಗೆ ಬರುವಾಗ ನಾನು ಇಲ್ಲದಿದ್ದರೆ ಅವರಿಗೆ ಬೇಸರವಾಗುತ್ತದೆ, ನಾನು ಮತದಾನ ಮಾಡಲೇ ಬೇಕು’ ಎಂದು ಹೇಳಿ ಮಧ್ಯಾಹ್ನ 12.30ರ ತನಕ ಕಾದು ಮತದಾನ ಮಾಡಿ ಬಳಿಕ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ಅನಾರೋಗ್ಯ ಉಲ್ಬಣಗೊಂಡು ರಾತ್ರಿ 9 ಗಂಟೆಗೆ ಕೊನೆಯುಸಿರೆಳೆದರು.
ಮೃತರು ಪುತ್ರ, ಇಬ್ಬರು ಪುತ್ರಿ ಯರನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.