Kotekar Robbery: ಇನ್ನೆರಡು ದಿನಗಳಲ್ಲಿ ಕಣ್ಣನ್‌ ಮಣಿ ಆಸ್ಪತ್ರೆಯಿಂದ ಬಿಡುಗಡೆ?

ಪ್ರಕರಣ ಫಾಲೋಅಪ್‌: ಒಂದೆರಡು ದಿನದಲ್ಲಿ ಮಹತ್ವದ ಮಾಹಿತಿ ಹೊರ ಬರುವ ಸಾಧ್ಯತೆ

Team Udayavani, Jan 29, 2025, 7:35 AM IST

Kotekar-Robb1

ಮಂಗಳೂರು: ಕೋಟೆಕಾರ್‌ ದರೋಡೆ ಪ್ರಕರಣವೇ ಒಂದು ರೀತಿ ವಿಚಿತ್ರ. ದರೋಡೆಯಾದ ಸುಮಾರು 18 ಕೆ.ಜಿ ಯಷ್ಟು ಚಿನ್ನ ವಾಪಸು ಸಿಕ್ಕಿದೆ. ಪ್ರಮುಖ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಆದರೂ ಮಂಗಳೂರು ಪೊಲೀಸರ ನಾಲ್ಕು ತಂಡ ತಮಿಳುನಾಡು, ಮುಂಬಯಿ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ದುರ್ಬೀನು ಹಾಕಿಕೊಂಡು ಸಂಚುಕೋರನನ್ನು ಹುಡುಕುತ್ತಿದ್ದಾರೆ.

ಯಾಕೆಂದರೆ ಈ ಪ್ರಕರಣದಲ್ಲಿ ದರೋಡೆ ನಡೆಸಿದವನೇ ಬೇರೆ, ಸಂಚು ರೂಪಿಸಿದವನೇ ಬೇರೆ. ಉಳಿದಂತೆ ಸಾಮಾನ್ಯವಾಗಿ ಪ್ರಕರಣಗಳಲ್ಲಿ ಸೊತ್ತು ಹಾಗೂ ಪ್ರಮುಖ ಆರೋಪಿಗಳು ಸಿಕ್ಕಿದರೆ ಪ್ರಕರಣ ಬಹುತೇಕ ಮುಗಿದಂತೆಯೇ. ಈ ಮಧ್ಯೆ ಮತ್ತೆ ಒಂದು ತಂಡ ತಮಿಳುನಾಡಿಗೆ ತೆರಳಿದೆ ಎನ್ನಲಾಗಿದೆ. ಆರೋಪಿಗಳು ಉಳಿದಿದ್ದ ಲಾಡ್ಜ್ ಸೇರಿದಂತೆ ಅವರು ತೆರಳಿದ್ದ ವಿವಿಧ ಸ್ಥಳಗಳ ಮಹಜರು ಪ್ರಕ್ರಿಯೆ ನಡೆಸಲು ಬಾಕಿ ಇದೆ ಎಂಬುದು ಪೊಲೀಸರ ಮಾಹಿತಿ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸುಳಿವು ಸಿಕ್ಕಿದೆ ಎನ್ನಲಾಗಿದ್ದು, ಅದಕ್ಕೇ ಈ ತಂಡ ಹೋಗಿದೆ ಎನ್ನಲಾಗಿದೆ. ಈ ಬಗ್ಗೆ ಒಂದೆರಡು ದಿನದಲ್ಲಿ ಮಹತ್ವದ ಮಾಹಿತಿ ಹೊರ ಬರುವ ಸಾಧ್ಯತೆಯಿದೆ.

ಎರಡು ತಂಡ ಉತ್ತರದಲ್ಲಿ:
ಎರಡು ತಂಡಗಳು ಉತ್ತರದಲ್ಲೇ ಇವೆ. ಒಂದು ತಂಡ ಮುಂಬಯಿಯಲ್ಲಿದ್ದು ಇನ್ನೊಂದು ತಂಡ ಅನ್ಯ ರಾಜ್ಯದಲ್ಲಿದ್ದು, ಇಲ್ಲಿನ ಪೊಲೀಸರ ತನಿಖಾ ಮಾಹಿತಿ ಆಧರಿಸಿ ಆರೋಪಿಗಳಿಗೆ ಬಲೆ ಬೀಸತೊಡಗಿದೆ. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಕೆ.ಸಿ.ರೋಡ್‌ ಶಾಖೆ ಪ್ರಕರಣದ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದು ಒಂದು ವಾರ ಕಳೆದಿದೆ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ಮುಂದುವರಿದಿದೆ. ಇದರೊಂದಿಗೆ ದೇಶದ ವಿವಿಧ ರಾಜ್ಯಗಳಿಗೆ ತೆರಳಿರುವ ಪೊಲೀಸ್‌ ತಂಡಗಳು ಇನ್ನಷ್ಟು ದರೋಡೆಕೋರರನ್ನು ಬಂಧಿಸಿದರೆ ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಗಲಿದೆ.

ಕಣ್ಣನ್‌ ಶೀಘ್ರ ಪೊಲೀಸ್‌ ತನಿಖೆಗೆ
ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಣ್ಣನ್‌ ಮಣಿ ಚೇತರಿಸಿಕೊಳ್ಳುತ್ತಿದ್ದು, ಇನ್ನೆರಡು ದಿನದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಬಳಿಕ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳ ಪಡಿಸಲು ಸಿದ್ಧತೆ ನಡೆಸಿದ್ದಾರೆ. ಆರೋಪಿಗಳಿಗೆ ತಮಿಳು ಮತ್ತು ಹಿಂದಿಯಲ್ಲಿ ಮಾತ್ರವೇ ವಿಚಾರಣೆ ನಡೆಸಬೇಕು. ಇದರಿಂದ ಪೊಲೀಸರಿಗೆ ಸ್ವಲ್ಪ ಹಿನ್ನಡೆಯಾಗಿದೆ. ಪೊಲೀಸರು ವಶಪಡಿಸಿಕೊಂಡಿರುವ 18.314 ಕೆ.ಜಿ. ಚಿನ್ನವನ್ನು ಮಾರುಕಟ್ಟೆ ಮೌಲ್ಯಕ್ಕೆ ಪರಿವರ್ತಿಸುವ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಮುಂದಿನ ಒಂದೆರಡು ದಿನಗಳಲ್ಲಿ ನಿಖರ ಮೌಲ್ಯ ತಿಳಿದು ಬರುವ ಸಾಧ್ಯತೆಯಿದೆ. ಇದರಿಂದ ಎಷ್ಟು ಕೋಟಿ ಮೊತ್ತದ ಚಿನ್ನ ದರೋಡೆಯಾಗಿರುವ ಮಾಹಿತಿ ಹೊರಬರಲಿದೆ.

ಹೆತ್ತವರ ಒಬ್ಬನೇ ಮುದ್ದಿನ ಮಗ
ಬಂಧಿತ ಷಣ್ಮುಗ ಸುಂದರಂಗೆ ಮುರುಗಂಡಿ ಥೇವರ್‌ ಒಬ್ಬನೇ ಮಗ. ಹಾಗಾಗಿ ಆತನನ್ನು ಮುದ್ದಿನಿಂದ ಬೆಳೆಸಿದ್ದರು. ಷಣ್ಮುಗ ಸುಂದರಂ “ಷಣ್ಮುಗ’ (ಸುಬ್ರಹ್ಮಣ್ಯ) ದೇವರ ಭಕ್ತನಾಗಿದ್ದ ಕಾರಣ ಪುತ್ರನಿಗೂ ಮುರುಗಂಡಿ ಎನ್ನುವ ಹೆಸರು ಇಟ್ಟಿದ್ದಾನೆ. ಥೇವರ್‌ ಎಂದರೆ ದೇವರು. ಆತ ಒಳ್ಳೆಯ ವ್ಯಕ್ತಿಯಾಗಬೇಕು ಎನ್ನುವ ಉದ್ದೇಶವೂ ಷಣ್ಮುಗಂ ಕುಟುಂಬಕ್ಕೆ ಇತ್ತು. ಆದರೆ ಆತ ಕೆಟ್ಟ ಹಾದಿ ಹಿಡಿದಾಗ ಬಹಳಷ್ಟು ನೊಂದಿದ್ದರು. ಆದರೂ ಕೊನೆಗೆ “ಹೆತ್ತವರಿಗೆ ಹೆಗ್ಗಣ ಮುದ್ದು’ ಎನ್ನುವಂತೆ ಆತನ ಕುಕೃತ್ಯಗಳನ್ನು ವಿರೋಧಿಸಲಿಲ್ಲ. ಈಗ ಮಗ ಕದ್ದು ತಂದಿದ್ದ ಚಿನ್ನವನ್ನು ಮನೆಯಲ್ಲಿ ಇರಿಸುವುದಕ್ಕೆ ನೆರವಾದ ತಂದೆ ಕೂಡ ಜೈಲು ಪಾಲಾದಂತಾಗಿದೆ.

ಟಾಪ್ ನ್ಯೂಸ್

Women’s FIH Pro League: ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ 3-2ರಿಂದ ಜಯ

Women’s FIH Pro League: ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ 3-2ರಿಂದ ಜಯ

Akhilesh-Yadav

Maha Kumbh Mela: ಕುಂಭ ಮೇಳ ಅವಧಿ ಫೆ.26ರ ಬಳಿಕವೂ ವಿಸ್ತರಿಸಿ: ಅಖಿಲೇಶ್‌ ಯಾದವ್‌

Tragedy: ಕುದುರೆ ಮೇಲೆ ಕುಳಿತು ಮೆರವಣಿಗೆ ಹೊರಟ ವರನಿಗೆ ಹೃದಯಾಘಾತ… ದುರಂತ ಅಂತ್ಯ

Tragedy: ಸಾವಿನ ಕದ ತಟ್ಟಿದ ವರ… ಕುದುರೆ ಮೇಲೆ ಕುಳಿತು ಮೆರವಣಿಗೆ ಹೊರಟ ವರನಿಗೆ ಹೃದಯಾಘಾತ

ICC Event: ಚಾಂಪಿಯನ್ಸ್‌ ಟ್ರೋಫಿಯೇ ರೋಹಿತ್‌, ಕೊಹ್ಲಿ, ಜಡೇಜಗೆ ಕೊನೆಯ ಐಸಿಸಿ ಕೂಟ?

ICC Event: ಚಾಂಪಿಯನ್ಸ್‌ ಟ್ರೋಫಿಯೇ ರೋಹಿತ್‌, ಕೊಹ್ಲಿ, ಜಡೇಜಗೆ ಕೊನೆಯ ಐಸಿಸಿ ಕೂಟ?

SHashi Taroor (2)

US; ಮುಚ್ಚಿದ ಬಾಗಿಲುಗಳ ಹಿಂದೆ ಗಡಿಪಾರು ವಿಷಯ ಮೋದಿ ಪ್ರಸ್ತಾಪಿಸಿದ್ದಾರೆಯೇ?:ತರೂರ್

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

Mahakumbh-fire

Maha Kumbh: ಕುಂಭಮೇಳದ ಸೆಕ್ಟರ್ 18, 19ರಲ್ಲಿ ಭಾರೀ ಅಗ್ನಿ ಅನಾಹುತ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Mangaluru: ನಾವು ಧರ್ಮ ವಿರೋಧಿ‌‌ಯಲ್ಲ, ಆದರೆ…: ಪ್ರಕಾಶ್‌ ರಾಜ್

Mangaluru: ನಾವು ಧರ್ಮ ವಿರೋಧಿ‌‌ಯಲ್ಲ, ಆದರೆ…: ಪ್ರಕಾಶ್‌ ರಾಜ್ ಹೇಳಿದ್ದೇನು?

Mangaluru: ನಗರಗಳ ಜಲತ್ಯಾಜ್ಯ ವ್ಯರ್ಥವಲ್ಲ ಮರುಬಳಕೆ ಮಾಡಿದರೆ ಸಂಪತ್ತು!

Mangaluru: ನಗರಗಳ ಜಲತ್ಯಾಜ್ಯ ವ್ಯರ್ಥವಲ್ಲ ಮರುಬಳಕೆ ಮಾಡಿದರೆ ಸಂಪತ್ತು!

MUST WATCH

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

ಹೊಸ ಸೇರ್ಪಡೆ

Women’s FIH Pro League: ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ 3-2ರಿಂದ ಜಯ

Women’s FIH Pro League: ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ 3-2ರಿಂದ ಜಯ

Akhilesh-Yadav

Maha Kumbh Mela: ಕುಂಭ ಮೇಳ ಅವಧಿ ಫೆ.26ರ ಬಳಿಕವೂ ವಿಸ್ತರಿಸಿ: ಅಖಿಲೇಶ್‌ ಯಾದವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

ಬರಿಮಾರಿನ ಮುಳಿಬೈಲಿನಲ್ಲಿ ಜಾಗದ ಗೇಟ್ ತೆರವು ವಿಚಾರ: ಇತ್ತಂಡಗಳ ಜಗಳ; ಆಸ್ಪತ್ರೆಗೆ ದಾಖಲು

ಬರಿಮಾರಿನ ಮುಳಿಬೈಲಿನಲ್ಲಿ ಜಾಗದ ಗೇಟ್ ತೆರವು ವಿಚಾರ: ಇತ್ತಂಡಗಳ ಜಗಳ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.