![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 23, 2022, 7:31 PM IST
ತೆಲಸಂಗ: ಸರಕಾರಿ ಶಾಲೆಗಳಲ್ಲಿನ ಬಿಸಿಯೂಟವೆಂದರೆ ಮೂಗು ಮುರಿಯುವ ದಿನಮಾನದಲ್ಲಿ ಇಲ್ಲೊಂದು ಶಾಲೆಯ ಶಿಕ್ಷಕರು ರುಚಿಕಟ್ಟಾದ ಖಾದ್ಯಗಳೊಂದಿಗೆ ಬಿಸಿಯೂಟ ತಯಾರಿಸಿ ಬಡಿಸುತ್ತ ಮಾದರಿಯಾಗಿದ್ದಾರೆ.
ಮಕ್ಕಳ ಸಂಖ್ಯೆ ಹೆಚ್ಚಿಸಲು ವಿಭಿನ್ನ ಪ್ರಯೋಗ ಇದಾಗಿದ್ದು, ಮೃಷ್ಟಾನ್ನ ತಯಾರಿಸಿ ಮಕ್ಕಳಿಗೆ ಉಣಬಡಿಸುವ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡ ಕೊಟ್ಟಲಗಿ ಗ್ರಾಮದ ನಮ್ಮೂರ
ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಪಾಲಕರ ಹೊಗಳಿಕೆಗೆ ಪಾತ್ರರಾಗಿದ್ದಾರೆ. ಸರಕಾರ ಮಕ್ಕಳಿಗೆ ಕೊಡುವ ಧಾನ್ಯದಲ್ಲಿಯೇ ವಿಭಿನ್ನ ಊಟ ತಯಾರಿಸಬಹುದು ಎಂಬ ಮಹತ್ವದ ಸಂದೇಶ ಈ ಶಾಲೆಯಿಂದ ಹೊರಡುತ್ತಿದೆ.
ವಾರದಲ್ಲಿ ಒಂದೊಂದು ದಿನ ಇಡ್ಲಿ, ಬಜಿ, ದೋಸೆ, ಹೋಳಿಗೆ, ಚಪಾತಿ, ಪುರಿ ಸೇರಿದಂತೆ ವೈವಿಧ್ಯಮಯ ಅಡುಗೆ ಮಾಡುವ ಮೂಲಕ ಮಕ್ಕಳ ಸಂಖ್ಯೆ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ.
ಶಾಲೆಯಲ್ಲಿ ಓದುವ ಮಗುವಿನ ಜನ್ಮದಿನ ಇದ್ದರೆ ವಿಶೇಷ ಅಡುಗೆ ಮಾಡಿಸಿ ಸಸಿ ನೆಟ್ಟು ವಿಶಿಷ್ಟವಾಗಿ ಜನ್ಮದಿನ ಆಚರಿಸುತ್ತಾರೆ.
ಬಡವ-ಸಿರಿವಂತ ಎಂಬ ಭೇದ ಭಾವ ಮಕ್ಕಳಲ್ಲಿ ಮೂಡದಂತೆ ಎಚ್ಚರಿಕೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇಲ್ಲಿಯ ರೈತರು, ಕೂಲಿಕಾರ್ಮಿಕರ ಮಕ್ಕಳಿಗೆ
ಅಕ್ಷರದಾಸೋಹದೊಂದಿಗೆ ಅನ್ನ ದಾಸೋಹವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ.
1ರಿಂದ 7ನೇ ತರಗತಿವರೆಗಿನ ಶಾಲೆಯಲ್ಲಿ ಎರಡು ನೂರು ಮಕ್ಕಳು ಓದುತ್ತಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಾದ ಬಿ.ಎಸ್. ತಾಂಶಿ, ಎಸ್.ಜಿ. ಕಾಂಬಳೆ, ಎಸ್.ಎಸ್. ಸತ್ತೀಗೇರಿ
ಕಾರ್ಯದಕ್ಷತೆಯಿಂದ ಉತ್ತಮ ಮೈದಾನ ನಿರ್ಮಾಣ, ಶೌಚಾಲಯ ಸ್ವತ್ಛತೆ ಹಾಗೂ ಬಳಕೆ, ಗುಣಮಟ್ಟದ ಶಿಕ್ಷಣ ನಡೆಯುತ್ತಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.