ಅಕ್ರಮ ವಲಸಿಗರಿಗೆ ವರದಾನವಾದ ಕೋವಿಡ್
Team Udayavani, May 26, 2020, 5:31 PM IST
ಲಂಡನ್: ಕೋವಿಡ್-19 ಜಗತ್ತಿಗೆ ಮಹಾಮಾರಿಯಾಗಿ ಕಾಡುತ್ತಿದ್ದರೂ ಇಂಗೆಂಡ್‌ನಲ್ಲಿ ಆಶ್ರಯ ಕೋರುತ್ತಿರುವವರ ಪಾಲಿಗೆ ವರದಾನವಾಗಿ ಪರಿಣಮಿಸಿದೆ.
ಏಕೆಂದರೆ, ಅವರು ಬಂಧನ ಕೇಂದ್ರಗಳಿಂದ ಬಿಡುಗಡೆಗೊಂಡಿದ್ದಾರೆ. ಸಂಭವನೀಯ ಗಡೀಪಾರಿನಿಂದ ಪಾರಾಗಿದ್ದಾರೆ. ಗೃಹ ಕಚೇರಿ ಮುಂದೆ ನಿಯಮಿತವಾಗಿ ಹಾಜರಾಗಬೇಕಿಲ್ಲ. ಲಾಕ್‌ಡೌನ್‌ನ ಈ ಅವಧಿ ಅವರಿಗೆ ಒಂದು ಬಗೆಯ ನೆಮ್ಮದಿಯನ್ನು ತಂದಿದೆ. ನಾಗರಿಕ ಹಕ್ಕುಗಳನ್ನು ತೀವ್ರವಾಗಿ ನಿರ್ಬಂಧಿಸಿದಾಗ ಬದುಕುವುದು ಎಷ್ಟು ಕಷ್ಟವೆಂದು ಸಾಮಾನ್ಯ ಜನರಿಗೆ ಮನವರಿಕೆಯಾಗತೊಡಗಿದ ಸಂದರ್ಭದಲ್ಲಿ ಇದು ಸಂಭವಿಸಿದೆ.
ಜಾಂಬಿಯಾದಿಂದ ಆಶ್ರಯ ಕೋರಿ ಇಂಗ್ಲೆಂಡ್‌ಗೆ ಬಂದಿರುವ ಮೈಮುನಾ ಜಾವೊ ಕೋವಿಡ್ ವೈರಸ್ ತೊಲಗಬಾರದೆಂದು ತಾನು ಬಯಸುವುದಾಗಿ ಹೇಳುತ್ತಾಳೆ. ಆಕೆ ಮಾರ್ಚ್‌ಗೆ ಮುನ್ನ ತಿಂಗಳಿಗೊಮ್ಮೆ ಗೃಹ ಕಚೇರಿಯ ಮುಂದೆ ಹಾಜರಾಗಬೇಕಾಗಿತ್ತು. ನಾಳೆ ಏನಾಗಬಹುದೆಂದು ತನಗೆ ಗೊತ್ತಿಲ್ಲ. ತನ್ನನ್ನು ಗಡೀಪಾರು ಮಾಡಲೂಬಹುದು ಎಂದಳು.
ಕೋವಿಡ್ ಪರಿಣಾಮ ಗೃಹ ಕಚೇರಿ ಮುಂದೆ ಹಾಜರಾಗುವ ಆವಶ್ಯಕತೆಯನ್ನು ರದ್ದುಗೊಳಿಸಲಾಗಿದೆಯೆಂದು ಮಾ. 17ರಂದು ಆಕೆಗೆ ತಿಳಿಸಲಾಗಿತ್ತು. ಗಡೀಪಾರು ಕ್ರಮ ಬಾಕಿಯಿರುತ್ತ ಬಂಧನ ಕೇಂದ್ರಗಳಲ್ಲಿ ಕಾಲ ಕಳೆಯುತ್ತಿರುವ ನೂರಾರು ಮಂದಿ ಸದ್ಯಕ್ಕೆ ಪಾರಾಗಿದ್ದಾರೆ.
ಆಶ್ರಯ ಕೋರಿ ಇಂಗ್ಲೆಂಡ್‌ಗೆ ಬಂದು ಬಂಧನಕ್ಕೊಳಗಾಗಿದ್ದ ಜನರ ಸಂಖ್ಯೆ ಜನವರಿಯಲ್ಲಿ 1,225 ಇದ್ದುದು ಎಪ್ರಿಲ್ 29ರ ಹೊತ್ತಿಗೆ ಕೇವಲ 368ಕ್ಕೆ ಇಳಿದಿತ್ತು.
ಅಕ್ರಮ ವಲಸಿಗರ ವಿರುದ್ಧ ಶೂನ್ಯ ಸಹನೆಯ ಇಂಗ್ಲೆಂಡ್‌ನ ನೀತಿಯನ್ನು ಈಗ ಮರುಪರಿಶೀಲಿಸಲಾದೀತೆಂದು ಅವರು ಹಾರೈಸುತ್ತಿದ್ದಾರೆ. ಕೋವಿಡ್-19ರಿಂದಾಗಿ ಸದ್ಯದ ಮಟ್ಟಿಗೆ ಅವರನ್ನು ಗಡೀಪಾರು ಮಾಡಲು ಸಾಧ್ಯವಿಲ್ಲ ಮತ್ತು ಬಂಧನ ಕೇಂದ್ರಗಳಲ್ಲಿ ಒತ್ತೂತ್ತಾಗಿ ಇರಿಸಲು ಸಾಧ್ಯವಿಲ್ಲ.
ಬಂಧನದಲ್ಲಿರಿಸುವುದಕ್ಕೆ ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ವಲಸೆ ಜಾಮೀನಿನ ಮೇಲೆ ಬಿಡುಗಡೆಗೊಳಿಸುವುದು ಸೂಕ್ತ ಆಯ್ಕೆಯೆನಿಸುತ್ತದೆ ಎಂದು ಗೃಹ ಕಚೇರಿಯ ವಕ್ತಾರರೋರ್ವರು ಹೇಳಿದ್ದಾರೆ.
ದಶಕಗಳಿಂದ ನಡೆಸಿದ ಹೋರಾಟಕ್ಕೆ ಯಶಸ್ಸು ಸಿಗದಿರುವಾಗ ಕೋವಿಡ್ ಪ್ರತ್ಯಕ್ಷವಾಗಿ ಅಲ್ಪಾವಧಿಯಲ್ಲಿ ಉಂಟಾಗಿರುವ ಬದಲಾವಣೆ ಆಶ್ರಯ ಕೋರುವವರ ಪಾಲಿಗೆ ಆಶಾದಾಯಕವಾಗಿ ಕಾಣಿಸಿದೆ. ಇಲ್ಲದಿದ್ದರೆ ಗೃಹ ಕಚೇರಿ ಮುಂದೆ ಹಾಜರಾಗುವುದನ್ನು ರದ್ದುಗೊಳಿಸಿರುವುದು, ನೂರಾರು ಮಂದಿಯ ಬಿಡುಗಡೆ ಮತ್ತು ವೀಸಾಗಳ ವಿಸ್ತರಣೆ, ಇವೆಲ್ಲ ಸಾಧ್ಯವಾಗುತ್ತಿರಲಿಲ್ಲ ಎಂದು ಅಕ್ರಮ ವಲಸಿಗರ ಪರ ಹೋರಾಡುತ್ತಿರುವ ಕೆಲವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.