KPS: ಸಾವಿರ ಶಾಲೆಗಳಲ್ಲಿ ಒಂದೇ ಸೂರಿನಡಿ ಶಿಕ್ಷಣ!
ರಾಜ್ಯದಲ್ಲಿ ಮತ್ತಷ್ಟು ಕೆಪಿಎಸ್ ಆರಂಭಿಸಲು ಸರಕಾರ ಚಿಂತನೆ
Team Udayavani, Dec 3, 2023, 12:24 AM IST
ಕಾರ್ಕಳ: ಶಾಲೆಗಳನ್ನು ಗುಣಮಟ್ಟದ ಶೈಕ್ಷಣಿಕ ಕೇಂದ್ರಗಳನ್ನಾಗಿ (ಸೆಂಟರ್ ಆಫ್ ಎಕ್ಸೆಲೆನ್ಸ್) ಪರಿವರ್ತಿಸಲು 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ ಹಂತಹಂತವಾಗಿ 1 ಸಾವಿರ ಕರ್ನಾ ಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್)ಗಳನ್ನು ತೆರೆಯಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಪ್ರತೀ ಮಗುವಿಗೂ ಶಿಕ್ಷಣ ಎಂಬ ನೀತಿಯನ್ವಯ ನೀತಿಯನ್ವಯ ಪೂರ್ವ ಪ್ರಾಥಮಿಕ ಶಾಲೆಯಿಂದ 12ನೇ ತರಗತಿವರೆಗೆ ಗುಣಾತ್ಮಕ ಶಿಕ್ಷಣ ನೀಡಲು 2018ರಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗಿತ್ತು. ದ.ಕ.ದಲ್ಲಿ 9 ಹಾಗೂ ಉಡುಪಿಯಲ್ಲಿ 8 ಸಹಿತ ರಾಜ್ಯದಲ್ಲಿ ಪ್ರಸ್ತುತ ಇಂತಹ 285 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ.
ಹೊಸ ಶಾಲೆ
ಕರ್ನಾಟಕ ಜ್ಞಾನ ಆಯೋಗದ ಶಿಫಾರಸುಗಳ ಜಾರಿಯಡಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಮುಂದಿನ ಸಾಲಿನಲ್ಲಿ ಹೊಸದಾಗಿ ಕೆಪಿಎಸ್‌ಗಳನ್ನು ಆರಂಭಿಸಲು ಇಲಾಖೆಯ ಸಮಗ್ರ ಶಿಕ್ಷಣ (ಗುಣಮಟ್ಟ) ವಿಭಾಗದ ನಿರ್ದೇಶಕರು ಸೂಕ್ತ ಶಾಲೆಗಳನ್ನು ಗುರುತಿಸಲು ಎಲ್ಲ ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರಿಗೆ ಸುತ್ತೋಲೆ ಕಳುಹಿಸಲಾಗಿದೆ. ಈಗಾಗಲೇ ಜಿಲ್ಲಾವಾರು ಮಾಹಿತಿ ಸಂಗ್ರಹವೂ ಪ್ರಗತಿಯಲ್ಲಿದೆ. ಈ ಕೆಪಿಎಸ್‌ಗಳಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಬೋಧನ ಪದ್ಧತಿ ಇರಲಿದೆ.
ಮಾನದಂಡಗಳೇನು?
ಒಂದೇ ಆವರಣದಲ್ಲಿ ಹೊಂದಿ ಕೊಂಡಂತೆ ಸರಕಾರಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಇದ್ದು ಕನಿಷ್ಠ 500 ಮಕ್ಕಳು ಇರಬೇಕು. ತಪ್ಪಿದಲ್ಲಿ ಒಂದೇ ಆವರಣದಲ್ಲಿ ಹೊಂದಿಕೊಂಡಂತೆ ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಇರಬೇಕು. ಇರದಿದ್ದಲ್ಲಿ ಕನಿಷ್ಠ ಸುಮಾರು 500 ಮೀ. ಅಂತರದಲ್ಲಿ ಸರಕಾರಿ ಪ್ರಾಥಮಿಕ, ಪ್ರೌಢಶಾಲೆ, ಪ.ಪೂ. ಕಾಲೇಜು ಇರಬೇಕು.
ಸರಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಈ ಒಂದೇ ಸೂರಿನಡಿ ಪ್ರಾಥಮಿಕ ಹಂತದಿಂದ ಪ್ರೌಢಶಿಕ್ಷಣ ಹಂತದವರೆಗೆ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆ ಮುಂದಾಗಿದೆ.
ಶಾಲೆಯ ವೈಶಿಷ್ಟ್ಯಗಳೇನು?
ಈ ಶಾಲೆಗಳಲ್ಲಿ ಆಯಾ ಹಂತದ ಮಕ್ಕಳಿಗೆ ಉತ್ತಮ ಕೊಠಡಿ, ಸುಸಜ್ಜಿತ ಪ್ರಯೋಗಾಲಯ, ಪ್ರತ್ಯೇಕ ಕಂಪ್ಯೂಟರ್ ಲ್ಯಾಬ್ ಮತ್ತು ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳಿರಲಿವೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿರಲಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ. ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲದೆ ವೃತ್ತಿ ಶಿಕ್ಷಣ, ಕಲೆ, ಸಂಗೀತ ಇತ್ಯಾದಿ ಸಹ ಪಠ್ಯೇತರ ಚಟುವಟಿಕೆಗಳಿಗೂ ತರಬೇತಿ ನೀಡಲಾಗುವುದು. ಗುರು ಚೇತನ ಕಾರ್ಯಕ್ರಮದಡಿ ವಿಶೇಷ ಶಿಕ್ಷಕರನ್ನೂ ನೇಮಿಸಲಾಗುತ್ತದೆ.
ತಂತ್ರಜ್ಞಾನ ಕಲಿಕೆಗೂ ಆದ್ಯತೆ
ಈ ಶಾಲೆಯಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸಲಾಗುತ್ತದೆ. ಇಂಗ್ಲಿಷ್ ಭಾಷೆ ಮತ್ತು ಗಣಿತಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಪ್ರೌಢ
ಮತ್ತು ಪದವಿಪೂರ್ವ ಹಂತದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ನೆರವಿನ ಕಲಿಕೆಗೆ (ಟಿಎಎಲ್‌ಪಿ) ವಿಶೇಷ ಆದ್ಯತೆ ನೀಡುವುದರೊಂದಿಗೆ ಆರ್ಥಿಕ ನೆರವನ್ನೂ ಒದಗಿಸಲಾಗುತ್ತದೆ.
2024-25ನೇ ಸಾಲಿನಲ್ಲಿ ಪಬ್ಲಿಕ್ ಸ್ಕೂಲ್‌ಗಳನ್ನು ಆರಂಭಿಸಲು ಸೂಚಿತ ಮಾನದಂಡಗಳನ್ನು ಆಧರಿಸಿ ಸೂಕ್ತವಾಗಿರುವ ಶಾಲೆಗಳನ್ನು ಗುರುತಿಸಲಾಗುತ್ತಿದೆ. ನಮ್ಮ ಜಿಲ್ಲೆಗಳಲ್ಲಿ ಎಷ್ಟು ಶಾಲೆಗಳು ಹೆಚ್ಚುವರಿಯಾಗಿ ಸೇರಲಿವೆ ಎಂಬ ಸ್ಪಷ್ಟ ಚಿತ್ರಣ ಎರಡು ತಿಂಗಳಿನಲ್ಲಿ ತಿಳಿಯಬಹುದು.
-ಗಣಪತಿ ಮತ್ತು ದಯಾನಂದ, ಡಿಡಿಪಿಐಗಳು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ
ರಾಜ್ಯದಲ್ಲಿ ಕರ್ನಾಟಕ
ಪಬ್ಲಿಕ್ ಶಾಲೆಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವ ಹಿಸುತ್ತಿವೆ. ಹಂತ ಹಂತವಾಗಿ ಕೆಪಿಎಸ್ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ. ಪ್ರತೀ ಶಾಸಕರಿಗೆ 5ರಿಂದ 6 ಶಾಲೆಗಳು, ಎರಡು ಗ್ರಾಮ ಪಂಚಾಯತ್‌ಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯುವ ಕುರಿತು ಕೂಡ ಚಿಂತನೆ ನಡೆಸುತ್ತಿದ್ದೇವೆ.
-ಮಧು ಬಂಗಾರಪ್ಪ, ಪ್ರಾಥಮಿಕ ಶಿಕ್ಷಣ ಸಚಿವ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.