ಕೃಷ್ಣಾ ನದಿಗೆ 2.83 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ : ನದಿ ಮಾರ್ಗದ ಸೇತುವೆಗಳು ಜಲಾವೃತ
Team Udayavani, Aug 20, 2020, 1:51 PM IST
ನಾರಾಯಣಪುರ: ಆಲಮಟ್ಟಿ ಶಾಸ್ತ್ರಿ ಜಲಾಶಯ ಹಾಗೂ ಮಲಪ್ರಭಾ ನದಿಯಿಂದ ಒಟ್ಟು 2.70 ಲಕ್ಷ ಕ್ಯೂಸೆಕ್ ನಷ್ಟು ಬಸವಸಾಗರಕ್ಕೆ ಒಳಹರಿವು ಇದ್ದು, ಬುಧವಾರ ಜಲಾಶಯದ 28 ಕ್ರಸ್ಟಗೇಟ್ ಗಳನ್ನು ತೆರೆದು 2.83 ಲಕ್ಷ ಕ್ಯೂಸೆಕ್‌ನಷ್ಟು
ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿ ಹರಿಬಿಡಲಾಗುತ್ತಿದೆ. ಕಳೆದ ಅ.6ರಿಂದಲೂ ಬಸವಸಾಗರದಿಂದ ನಿರಂತರವಾಗಿ
ನದಿಗೆ ಗರಿಷ್ಠ ಪ್ರಮಾಣದ ನೀರು ಬಿಡುಗಡೆ ಮಾಡುತ್ತಿರುವುದರಿಂದ ನದಿ ತೀರದ ಗ್ರಾಮಗಳಿಗೆ ಪ್ರಹಾದ ಬೀತಿ ಉಂಟಾಗಿದ್ದು ನದಿ ಮಾರ್ಗವಾಗಿ ಬರುವ ಸೇತುವೆಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಅಣೆಕಟ್ಟು ಅಧಿಕಾರಿಗಳ ಮಾಹಿತಿಯಂತೆ ಪ್ರಸ್ತುತ ಜಲಾಶಯಕ್ಕೆ ಎಷ್ಟು ಒಳಹರಿವಿನ ಪ್ರಮಾಣವಿದೆಯೋ ಅಷ್ಟೆ ಪ್ರಮಾಣದ ಹೊರಹರಿವನ್ನು ನದಿಗೆ ಹರಿಬಿಡಲಾಗುತ್ತಿದೆ. ಕೃಷ್ಣಾ ನದಿ ಹಾಗೂ ಉಪನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹಂತ ಹಂತವಾಗಿ ಏರಿಕೆ ಕಂಡು ಬರುತಿದ್ದು, ಸದ್ಯ ಆಲಮಟ್ಟಿ ಶಾಸ್ತ್ರೀ ಜಲಾಶಯಕ್ಕೆ 2.37 ಲಕ್ಷ ಕ್ಯೂಸೆಕ್ ನಷ್ಟು ಒಳಹರಿವು ಹರಿದು ಬರುತ್ತಿದೆ.
ಹೊರ ಹರಿವು (ಬಸವಸಾಗರಕ್ಕೆ) 2.50 ಲಕ್ಷ ಕ್ಯೂಸೆಕ್ ಇದೆ ಎಂದು ತಿಳಿದುಬಂದಿದೆ. ಬುಧವಾರ ಸಂಜೆ 6 ಗಂಟೆಯ
ಮಾಹಿತಿಯಂತೆ ಬಸವಸಾಗರ ಜಲಾಶಯ ಗರಿಷ್ಠ ಮಟ್ಟದಲ್ಲಿ 489.86 ಮೀಟರ್‌ಗೆ ನೀರು ಬಂದು ತಲುಪಿದ್ದು, 23.49 ಟಿಎಂಸಿ ಅಡಿ ನೀರು ಸಂಗ್ರಹವಿದೆ ಎಂದು ತಿಳಿದು ಬಂದಿದೆ.
ಜಲಾಶಯದಲ್ಲೆ ಬೀಡು ಬಿಟ್ಟ ಅಧಿಕಾರಿಗಳು: ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ನದಿಗಳಿಗೆ ಅಡ್ಡಲಾಗಿ
ನಿರ್ಮಿಸಲಾದ ಅಣೆಕಟ್ಟುಗಳಲ್ಲಿ ಕರ್ತವ್ಯ ನಿರ್ವಹಿಸುವುದು ಅ ಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಹಿರಿಯ,
ಕಿರಿಯ ಅ ಧಿಕಾರಿಗಳು ಅಣೆಕಟ್ಟಿನಲ್ಲೆ ಬೀಡು ಬಿಟ್ಟಿದ್ದಾರೆ. ಇಲ್ಲಿನ ಬಸವಸಾಗರ ಜಲಾಶಯಕ್ಕೆ ದಿನದ 24 ಗಂಟೆಯೂ
ಸತತ ಒಳಹರಿವು ಹರಿದು ಬರುತ್ತಿದೆ. ಆ ನೀರನ್ನು ಜಲಾಶಯದ ಕ್ರಸ್ಟಗೇಟ್‌ಗಳ ಮೂಲಕ ನದಿಗೆ ಹರಿಬಿಡುವ ಪ್ರಕ್ರಿಯೆ
ನಿರಂತರ ನಡೆಯುತ್ತಿದೆ. ಇದನ್ನು ಸಮರ್ಥವಾಗಿ ನಿಭಾಯಿಸಲೆಂದು ಕೃಷ್ಣಾ ಭಾಗ್ಯ ಜಲ ನಿಗಮವು ದಿನದ 24 ಗಂಟೆಗಳಲ್ಲಿ 12 ಗಂಟೆಗಳಿಗೆ 2 ಪಾಳೆಯದಲ್ಲಿ ಅಭಿಯಂತರರು ಇತರೆ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಹಗಲು ರಾತ್ರಿ ಎನ್ನದೆ ಪ್ರವಾಹದ ನಿರ್ವಹಣೆ ಕಾರ್ಯ ನಿಭಾಯಿಸುತ್ತಿದ್ದಾರೆ.
ಪ್ರವಾಹದ ಮುನ್ಸೂಚನೆ ವಿನಮಯಕ್ಕೆ ವಾಟ್ಸ್ ಆ್ಯಫ್ ಗ್ರೂಪ್ ರಚಿಸಿಕೊಂಡಿದ್ದು, ಉಭಯ ಜಲಾಶಯಗಳ ಕೆಬಿಜೆಎನ್
ಎಲ್ ಹಿರಿಯ ಅಧಿಕಾರಿಗಳು, ಯಾದಗಿರಿ, ರಾಯಚೂರು ಜಿಲ್ಲಾಡಳಿತ, ಪೊಲೀಸ್, ಕಂದಾಯ ಇಲಾಖೆ, ಇತರೆ
ಇಲಾಖೆಗಳ ಹಿರಿಯ ಅಧಿಕಾರಿಗಳು ಗ್ರೂಪ್ ಸದಸ್ಯರಿದ್ದಾರೆ. ಅವರಿಗೆ ಪ್ರತಿ ಗಂಟೆಗೊಮ್ಮೆ ನದಿಗೆ ನೀರು ಹರಿಸುವ
ಸಂದೇಶ ತಲುಪಿಸಲಾಗುತ್ತಿದೆ ಎಂದು ಅಣೆಕಟ್ಟು ಉಪ ವಿಭಾಗದ ಎಇಇಟಿ.ಎನ್. ರಾಮಚಂದ್ರ ಪತ್ರಿಕೆಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.