ಅದಮಾರು ಶ್ರೀಗಳಿಂದ ಸುಖಕಷ್ಟ ವಿಚಾರಣೆ
Team Udayavani, Jan 19, 2022, 3:05 AM IST
ಉಡುಪಿ: ಪರ್ಯಾಯೋತ್ಸವದ ದಿನ ನಿರ್ಗಮನ ಪೀಠಾಧೀಶರು ಬೆಳಗ್ಗೆ ನೈರ್ಮಲ್ಯ ವಿಸರ್ಜನೆ ಪೂಜೆ ನಡೆಸಿ ಸಿದ್ಧರಾಗಿ ದ್ದರು. ಪರ್ಯಾಯ ಪೀಠ ವೇರುವ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಗಮಿಸಿದ ಬಳಿಕ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಸಿ ಪರ್ಯಾಯ ದರ್ಬಾರ್ ಸಭಾಂಗಣಕ್ಕೆ ಆಗಮಿಸಿದರು.
ನಿರ್ಗಮನ ಪೀಠಾಧೀಶರ ಪಟ್ಟದ ದೇವ ರನ್ನು ಕೃಷ್ಣ ಮಠದ ಚಿನ್ನದ ಪಲ್ಲಕಿಯಲ್ಲಿರಿಸಿ ಗೌರವದೊಂದಿಗೆ ಕೃಷ್ಣಾಪುರ ಮಠಾಧೀಶರು ಬೀಳ್ಕೊಟ್ಟರು. ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅದಮಾರು ಮಠವನ್ನು ಪ್ರವೇಶಿಸಿ ಮತ್ತೆ ದೇವರ ಪೆಟ್ಟಿಗೆಯನ್ನು ಕೃಷ್ಣ ಮಠಕ್ಕೆ ತಂದಿರಿಸಿ ದರ್ಬಾರ್ ಸಭೆಯಲ್ಲಿಪಾಲ್ಗೊಂಡರು.
ದರ್ಬಾರ್ ಸಭೆ ಬಳಿಕ ಕೃಷ್ಣಪೂಜೆಗೆ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ತೆರಳಿದರೆ ಶ್ರೀ ಈಶಪ್ರಿಯತೀರ್ಥರು ತಮಗೆ 2014ರಲ್ಲಿ ಸನ್ಯಾಸಾಶ್ರಮ ಸ್ವೀಕಾರ ಸಂದರ್ಭದಲ್ಲಿ ಪೂರ್ವಭಾವಿ ಪ್ರಕ್ರಿಯೆ ನಡೆದ ಪಾಜಕದ ಬಾಣತೀರ್ಥದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಸನ್ಯಾಸಾಶ್ರಮ ಸ್ವೀಕರಿಸಿದ ಕುಂಜಾರುಗಿರಿ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಂಜೆ ರಾಜೀವ್ ನಗರದ ನೇತಾಜಿನಗರದಲ್ಲಿರುವ ನಾಗನಕಟ್ಟೆಗೆ ಭೇಟಿ ನೀಡಿ ಅಲ್ಲಿ ಧಾರ್ಮಿಕ ಪ್ರವಚನ ನೀಡಿ ಭಕ್ತರಿಗೆ ಪ್ರಸಾದ ಮಂತ್ರಾಕ್ಷತೆ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.