ಸಿಎಂ ವಿರುದ್ಧ ಹೇಳಿಕೆ : ಯತ್ನಾಳರನ್ನ ಪಕ್ಷದಿಂದ ಹೊರಹಾಕುವಂತೆ ಪ್ರಾರ್ಥಿಸುವೆ : ಈಶ್ವರಪ್ಪ
Team Udayavani, Oct 21, 2020, 3:48 PM IST
ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆ ಮೂರ್ಖತನದ್ದು, ಪಕ್ಷದ ರಾಜ್ಯ ಅಧ್ಯಕ್ಷರು ಯತ್ನಾಳರನ್ನ ಪಕ್ಷದಿಂದ ಹೊರಹಾಕುವಂತೆ ಪ್ರಾರ್ಥಿಸುವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಯತ್ನಾಳ ವಿರುದ್ದ ಗುಡುಗಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ಬಿಎಸ್ವೈ ಬಗ್ಗೆ ಯತ್ನಾಳ ಹೇಳಿಕೆಯು ಫೂಲಿಶ್ ತನದ್ದಾಗಿದೆ. ಪದೆ ಪದೆ ಇಂತಹ ಹೇಳಿಕೆಯಿಂದ ರಾಜ್ಯ ಬಿಜೆಪಿಗೆ ಏನೂ ಆಗಲ್ಲ. ಕೆಲವರಿಗೆ ಮಾತನಾಡಲು ಬಾಯಿ ಚಪಲ ಇರುತ್ತೆ. ಮೊನ್ನೆ ತಾನೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಅಲ್ಲಿ ಯತ್ನಾಳ ಸಹ ಬಂದಿದ್ದರು. ಸಿಎಂ ಸಹಿತ ಎಲ್ಲ ಶಾಸಕರ ಕ್ಷೇತ್ರದ ಸಮಸ್ಯೆಗಳ ಕುರಿತು ಕೇಳಿದ್ದಾರೆ.ಅಲ್ಲಿ ಬಾಯಿ ಮುಚ್ಚಿಕೊಂಡು ಕೂಳಿತುಕೊಂಡು ಈಗ ಇದ್ದಕ್ಕಿದ್ದಂತೆ ಉತ್ತರನ ಪೌರುಷನ ತರ ಹೇಳಿಕೆ ಕೊಟ್ಟು ಸಿಎಂ ಬದಲಾವಣೆ ಆಗ್ತಾರೆ, ಮೋದಿ ಭರವಸೆ ನೀಡಿದ್ದಾರೆ ಅಂದ್ರೆ ಹೇಗೆ ? ಎಂದರು.
ಬಿಜೆಪಿ ಸರ್ಕಾರವನ್ನು ಯಾರಿಂದಲೂ ಬೀಳಿಸಲು ಸಾಧ್ಯವಿಲ್ಲ. ಸ್ವರ್ಗದಲ್ಲಿ ಇರುವ ಇಂದಿರಾ ಗಾಂಧಿ ಬಂದ್ರೂ ಸರ್ಕಾರ ಬೀಳಲ್ಲ. ಯತ್ನಾಳರ ಇಂತಹ ಹೇಳಿಕೆ ಬಿಜೆಪಿ ಸಹಿಸಲ್ಲ. ಅವರ ಮೇಲೆ ಪಕ್ಷ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ. ಎಂದರು.
ಇದನ್ನೂ ಓದಿ :ಪುತ್ರ ವ್ಯಾಮೋಹ ಬಿಟ್ಟು ಪ್ರವಾಹ ಸಂತ್ರಸ್ತರಿಗೆ ನೆರವಾಗಿ! ಸಿಎಂ ವಿರುದ್ಧ ಸಿಡಿದ ಯತ್ನಾಳ್
ನೆರೆ ಹಾನಿಯ ವಿಚಾರ :
ಉ.ಕ ಭಾಗದಲ್ಲಿ 103 ವರ್ಷದ ನಂತರ ಇಂತಹ ನೆರೆ ಬಂದಿದೆ. ನಾನು ಈಗಾಗಲೆ ನಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಏನೇನು ಹಾನಿಯಾಗಿದೆ ಸರ್ವೆ ನಡೆಸಿ ವರದಿ ನೀಡುವಂತೆ ಹೇಳಿದ್ದೇನೆ. ವರದಿ ಬಂದ ನಂತರ ಪರಿಹಾರ ಕಾರ್ಯ ಆರಂಭವಾಗಲಿದೆ ಎಂದರು.
ಕಳೆದ ಬಾರಿ ನೆರೆ ಬಂದಾಗ ನಮ್ಮ ಇಲಾಖೆಯಿಂದ 1500 ಕೋಟಿ ನಾವು ಬಿಡುಗಡೆ ಮಾಡಿದ್ದೆವು. ಈ ಹಿಂದೆ ಯಾವ ಸರ್ಕಾರವು ಇಷ್ಟು ಪರಿಹಾರ ಕೊಟ್ಡಿರಲಿಲ್ಲ. ಈಗ ಮತ್ತೆ ನೆರೆ ಬಂದಿದೆ.
ನಮ್ಮಲ್ಲಿ ದುಡ್ಡಿಲ್ಲದೆ ಇರಬಹುದು ಆದರೆ ನಾವು ಸುಮ್ಮನೆ ಕುಳಿತಿಲ್ಲ. ನಾವು ಕುರ್ಚಿ ಬಿಟ್ಟು ಹೋಗಲ್ಲ. ಸಿದ್ದು, ಡಿಕೆಶಿ ಕುರ್ಚಿ ಕನಸು ಕಾಣಬೇಡಿ ಎಂದರಲ್ಲದೆ ಬಡವರಿಗೆ, ನೆರೆ ಸಂತ್ರಸ್ತರಿಗೆ ನಾವು ಪರಿಹಾರ ಕೊಡುವ ಕೆಲಸ ಮಾಡಲಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.