ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ: ಚಾಲಕ-ನಿರ್ವಾಹಕರ ಕೊರತೆ
Team Udayavani, Mar 11, 2022, 5:45 AM IST
ಬಂಟ್ವಾಳ: ದ.ಕ. ಜಿಲ್ಲೆಯ ಗ್ರಾಮಾಂತರ ತಾಲೂಕುಗಳು ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿಯನ್ನೇ ನಂಬಿಕೊಂಡಿವೆ. ಆದರೆ ಇದೀಗ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಟಕ್ಕೆ ಬಸ್‌ಗಳ ಕೊರತೆಯ ಜತೆಗೆ ಚಾಲಕ- ನಿರ್ವಾಹಕರ ಕೊರತೆಯೂ ಕಾಡುತ್ತಿದೆ. ಮಾಹಿತಿ ಪ್ರಕಾರ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಲ್ಲಿ ಕಾರ್ಯಾ ಚರಣೆ ನಡೆಸುತ್ತಿರುವ ಬಸ್‌ಗಳ ಓಡಾಟಕ್ಕೆ 1,560 ಚಾಲಕ- ನಿರ್ವಾಹಕರು ಬೇಕಿದ್ದರೂ, 1,506 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೋವಿಡ್ ಕಾರ ಣಕ್ಕೆ ನೇಮಕಾತಿ ಪ್ರಕ್ರಿಯೆ ನಡೆಯದೇ ಇರುವು ದರಿಂದ ಸಿಬಂದಿ ಕೊರತೆ ಉಂಟಾ ಗಿದ್ದು, ಬಸ್‌ಗಳ ಓಡಾಟ ಕೋವಿ ಡ್ ಪೂರ್ವದ ಸ್ಥಿತಿಗೆ ಬಂದರೆ ಚಾಲಕ-ನಿರ್ವಾಹಕರ ಕೊರತೆ ಇನ್ನೂ ಹೆಚ್ಚಾಗುತ್ತದೆ. ಪ್ರಸ್ತುತ ಕೋವಿಡ್ ಪರಿಸ್ಥಿತಿ ತಿಳಿಯಾಗಿ ಹಿಂದಿನ ಸ್ಥಿತಿ ಮರುಕಳಿಸುತ್ತಿದ್ದು, ಪೂರ್ಣ ಪ್ರಮಾಣ ದಲ್ಲಿ ಬಸ್‌ಗಳ ಓಡಾಟಕ್ಕೆ ಬೇಡಿಕೆ ಬಂದು ಆಗಲೂ ಸಿಬಂದಿ ನೇಮಕಾತಿ ಆಗದೇ ಇದ್ದರೆ ತೀವ್ರ ಸಮಸ್ಯೆ ಉಂಟಾಗಲಿದೆ.
ಸವಾಲು
ಪ್ರಸ್ತುತ 54 ಚಾಲಕ-ನಿರ್ವಾಹಕರ ಕೊರತೆ ಇದ್ದು, ಕೋವಿಡ್‌ಗಿಂದ ಮುಂಚಿನ ಬಸ್‌ಗಳ ಓಡಾಟಕ್ಕೆ ಹೋಲಿಸಿದರೆ ಚಾಲಕ-ನಿರ್ವಾಹಕರ ಕೊರತೆ ಸುಮಾರು ಮುನ್ನೂರರಷ್ಟಾಗುತ್ತದೆ. ಹೀಗಾಗಿ ಈಗ ಕಾರ್ಯ ನಿರ್ವಹಿಸುತ್ತಿರುವ ಸಿಬಂದಿ ಒತ್ತಡದಲ್ಲಿ ಕರ್ತವ್ಯ ಮಾಡ ಬೇಕಿದೆ. ಇದನ್ನು ಹೊಂದಾ ಣಿಕೆ ಮಾಡಿಕೊಂಡು ನಿಭಾ ಯಿಸುವುದು ಕೂಡ ಅಧಿಕಾರಿ ವರ್ಗಕ್ಕೆ ಸವಾಲಿನ ವಿಚಾರ.
ಚಾಲಕ-ನಿರ್ವಾಹಕರ ಕೊರತೆ
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ಕೋವಿಡ್‌ಗಿಂತ ಮುಂಚೆ 556 ಅನುಸೂಚಿ(ರೂಟ್)ಗಳಲ್ಲಿ ಬಸ್‌ಗಳು ಓಡಾಟ ನಡೆಸುತ್ತಿದ್ದು, 1,789 ಮಂದಿ ಚಾಲಕ-ನಿರ್ವಾಹಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಲಾಕ್‌ಡೌನ್ ತೆರವಿನ ಬಳಿಕ ಇನ್ನೂ ಪೂರ್ಣ ಪ್ರಮಾಣದ ಬಸ್ ಓಡಾಟ ಆರಂಭಗೊಂಡಿಲ್ಲ. ಪ್ರಸ್ತುತ ವಿಭಾಗ ವ್ಯಾಪ್ತಿಯಲ್ಲಿ 493 ಅನುಸೂಚಿ (ರೂಟ್)ಗಳಲ್ಲಿ ಬಸ್‌ಗಳು ಓಡುತ್ತಿದ್ದು, 1,506 ಮಂದಿ ಚಾಲಕ-ನಿರ್ವಾಹಕರು ದುಡಿಯುತ್ತಿದ್ದಾರೆ. ಈಗಿನ ಕಾರ್ಯಾಚರಣೆಗೆ 54 ಮಂದಿ ಕೊರತೆಯಾದರೆ ಎಲ್ಲ 560 ಅನುಸೂಚಿಗಳಲ್ಲಿ ಬಸ್ ಓಡಾಟ ಆರಂಭಿಸಿದರೆ ಕೊರತೆಯ ಸಂಖ್ಯೆ 283ಕ್ಕೇರುತ್ತದೆ.
ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ
ಲಾಕ್‌ಡೌನ್ ಕಾರಣಕ್ಕೆ ಕೆಎಸ್‌ಆರ್‌ಟಿಸಿಯು ಸಾಕಷ್ಟು ನಷ್ಟ ಅನುಭವಿಸಿದ್ದು, ಲಾಕ್‌ಡೌನ್ ತೆರವುಗೊಂಡು ಓಡಾಟ ಆರಂಭಗೊಂಡ ಬಳಿಕವೂ ಪ್ರಯಾಣಿಕರ ಸಂಖ್ಯೆ ಕುಸಿದು ಹಿಂದಿಗಿಂತ ಆದಾಯವೂ ಕಡಿಮೆಯಾಗಿತ್ತು. ಈ ಎಲ್ಲ ಕಾರಣಗಳಿಂದ ಚಾಲಕ- ನಿರ್ವಾಹಕರ ನೇಮಕಾತಿ ನಡೆಯದೆ ಎರಡೂವರೆ ವರ್ಷ ದಾಟಿದೆ. ಹಿಂದೆ ಬಹುತೇಕ ವರ್ಷಕ್ಕೊಮ್ಮೆ ನೇಮಕಾತಿ ನಡೆಯುತ್ತಿದ್ದು, ಸಿಬಂದಿ ನಿವೃತ್ತಿಯಾದರೂ ಕೊರತೆ ಉಂಟಾಗುತ್ತಿರಲಿಲ್ಲ.
ನೇಮಕಾತಿ ನಡೆಯದೆ ಇದ್ದರೂ, ಸಿಬಂದಿಯ ವಯೋ ನಿವೃತ್ತಿ ಹಿಂದಿನಂತೆಯೇ ನಡೆಯುತ್ತಿರುವುದರಿಂದ ಕೊರತೆಯ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಹಿಂದೆ ಕೆಎಸ್‌ಆರ್‌ಟಿಸಿ ಚಾಲಕ-ನಿರ್ವಾಹಕರ ಪ್ರತಿಭಟನೆಯ ಸಂದರ್ಭದಲ್ಲಿ ಅಂತರ್ ನಿಗಮ ವರ್ಗಾವಣೆಗೆ ಸರಕಾರದ ಮಟ್ಟದಲ್ಲಿ ನಿರ್ಣಯವಾಗಿದ್ದು, ಇದರ ಪರಿಣಾಮ ಒಂದಷ್ಟು ಮಂದಿ ವರ್ಗಾವಣೆಯಾಗಿ ಹೋಗಿದ್ದಾರೆ. ಕೆಲವರು ವರ್ಗಾವಣೆ ಕೇಳಿದ್ದರೂ ವಿಭಾಗದಿಂದ ರಿಲೀವ್ ಮಾಡದೇ ಇರುವುದರಿಂದ ಸಮಸ್ಯೆಯ ತೀವ್ರತೆ ಕಡಿಮೆ ಇದೆ.
ಬಸ್‌ಗಳ ಕೊರತೆಯೂ ಇದೆ
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಲ್ಲಿ ಕೋವಿಡ್‌ಗಿಂತ ಮೊದಲು 588 ಬಸ್‌ಗಳಿದ್ದು, ಪ್ರಸ್ತುತ 542 ಬಸ್‌ಗಳಿವೆ. ಅಂದರೆ 46 ಬಸ್‌ಗಳ ಕೊರತೆ ಇದೆ. ರಾಜಹಂಸ ಹಾಗೂ ಸ್ಲಿàಪರ್ ಸೇರಿ 18 ಬಸ್‌ಗಳು, 28 ಕರ್ನಾಟಕ ಸಾರಿಗೆ ಬಸ್‌ಗಳ ಕೊರತೆ ಇದೆ ಎಂದು ವಿಭಾಗ ಮೂಲಗಳು ತಿಳಿಸಿವೆ.
ನೇಮಕಾತಿ ಪ್ರಕ್ರಿಯೆ ನಡೆದಿಲ್ಲ
ಎರಡೂವರೆ ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಗಳು ನಡೆಯದೆ ಚಾಲಕ- ನಿರ್ವಾಹಕರ ಕೊರತೆ ಇದ್ದು, ನಿವೃತ್ತಿ ಹೊಂದಿದ ಕಾರಣದಿಂದಲೂ ಕೊರತೆ ಕಾಣುತ್ತಿದೆ. ಒಂದಷ್ಟು ಮಂದಿ ವರ್ಗಾವಣೆಯಾಗಿದ್ದು, ಕೆಲವರನ್ನು ಇನ್ನೂ ಕೂಡ ರಿಲೀವ್ ಮಾಡಿಲ್ಲ. ಮುಂದೆ ನೇಮಕಾತಿ ಪ್ರಕ್ರಿಯೆ ನಡೆದು ಸಿಬಂದಿ ಆಗಮಿಸಿದರೆ ಕೊರತೆ ನಿವಾರಣೆಯಾಗುತ್ತದೆ.
-ಜಯಕರ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ,
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ.
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.