ಮಂಗಳೂರಿನಲ್ಲಿ ಇಂದು “ಕುಡ್ಲದ ಪಿಲಿ ಪರ್ಬ’ ಸಂಭ್ರಮ

Team Udayavani, Oct 2, 2022, 6:40 AM IST

ಮಂಗಳೂರಿನಲ್ಲಿ ಇಂದು “ಕುಡ್ಲದ ಪಿಲಿ ಪರ್ಬ’ ಸಂಭ್ರಮ

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಂಸದ ನಳಿನ್‌ ಕುಮಾರ್‌ ಕಟೀಲು ಮಾರ್ಗದರ್ಶನ ದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ತುಳುನಾಡಿನ ಸಾಂಪ್ರದಾಯಿಕ ಕಲೆ ಹುಲಿವೇಷ ಸ್ಪರ್ಧಾಕೂಟ “ಕುಡ್ಲದ ಪಿಲಿ ಪರ್ಬ 2022′ ಅ. 2ರಂದು ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿದೆ.

ಸ್ಪರ್ಧೆಯ ಕುರಿತು ವೇದವ್ಯಾಸ ಕಾಮತ್‌ ಮಾಹಿತಿ ನೀಡಿದರು. ಬೆಳಗ್ಗೆ 9.30ಕ್ಕೆ ಸ್ಪರ್ಧೆ ಆರಂಭಗೊಳ್ಳಲಿದ್ದು ಮಧ್ಯರಾತ್ರಿಯವರೆಗೆ ಮುಂದುವರಿಯಲಿದೆ. ಈಗಾಗಲೇ 12 ತಂಡಗಳು ನೋಂದಣಿ ಮಾಡಿಕೊಂಡಿವೆ. ಒಂದು ತಂಡದಲ್ಲಿ 15 ಮಂದಿ ವೇಷಧಾರಿಗಳು ಇರಲಿದ್ದಾರೆ. ಅಕ್ಕಿಮುಡಿ ಎತ್ತಿ ಹಾಕುವುದು, ಪಲ್ಟಿ ಸೇರಿದಂತೆ ಒಂದೊಂದು ಪ್ರಯೋಗಕ್ಕೂ ಪ್ರತ್ಯೇಕ ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರತೀ ತಂಡಕ್ಕೆ 20 ನಿಮಿಷ ಕಾಲಾವಕಾಶ ನೀಡಲಾಗಿದೆ ಎಂದರು.

ಮೈದಾನದಲ್ಲಿ ತಿಂಡಿ-ತಿನಿಸು ಸೇರಿದಂತೆ ವಿವಿಧ ಮಾರಾಟ ಮಳಿಗೆಗಳು ಇರಲಿದ್ದು, ಸಾರ್ವಜನಿಕರಿಗೆ ಮುಖ ಪೈಂಟಿಂಗ್‌ಗೆ ಅವಕಾಶ ಕಲ್ಪಿಸಲಾಗುತ್ತದೆ. ಹುಲಿ ಟೊಪ್ಪಿ ಮಾರಾಟ, ಮುಖವಾಡ, ಕೀ ಚೈನ್‌ ಮಾರಾಟ ಇರಲಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಬೆಳಗ್ಗೆ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್‌. ಅಂಗಾರ, ಶಾಸಕರು ಸೇರಿದಂತೆ ವಿವಿಧ ಜನ  ಪ್ರತಿನಿಧಿಗಳು, ಕೈಗಾರಿ ಕೋದ್ಯಮಿಗಳು, ಧಾರ್ಮಿಕ ಮುಖಂಡರು, ಸರಕಾರಿ ಅಧಿಕಾರಿಗಳು ಭಾಗವಹಿ ಸಲಿ  ದ್ದಾರೆ. ವಿವಿಐಪಿ, ವಿಐಪಿ ಸೇರಿದಂತೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಮೈದಾನ ದಲ್ಲಿ ಎಲ್‌ಇಡಿ ಸ್ಕ್ರೀನ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಬೃಹತ್‌ ಗ್ಯಾಲರಿ
ಸುಮಾರು 3,500 ಮಂದಿಗೆ ಕುಳಿತುಕೊಳ್ಳಲು ಅವಕಾಶ ಇರುವ ಬೃಹತ್‌ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. ವಿನೂತನ ಕಲ್ಪನೆಯ ಎತ್ತರದ ಸ್ಟೇಜ್‌ ನಿರ್ಮಾಣ ಮಾಡಲಾಗುತ್ತಿದ್ದು, 15,000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ವಿಜೇತರಿಗೆ ರಾಜ್ಯ
ಮಟ್ಟದಲ್ಲಿ ಅವಕಾಶ
ಸ್ಪರ್ಧೆಯಲ್ಲಿ ಗೆದ್ದ ತಂಡಕ್ಕೆ ರಾಜ್ಯ ಮಟ್ಟದ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಭಾಗವಹಿಸಿದ ಎಲ್ಲ ತಂಡಕ್ಕೆ ಬಹುಮಾನ ನೀಡಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳ ಜತೆಗೆ ವಿಶೇಷ ಗೌರವ ಧನ, ಟ್ರೋಫಿ ನೀಡಲಾಗುತ್ತದೆ. 8 ವಿಭಾಗಗಳಲ್ಲಿ ವೈಯಕ್ತಿಕ ಪ್ರಶಸ್ತಿ ನೀಡಲಾಗುತ್ತದೆ ಎಂದು ಶಾಸಕ ಕಾಮತ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

7

ಶ್ರೀ ಮಂಗಳಾದೇವಿಗೆ ಸ್ವರ್ಣ ಪ್ರಭಾವಳಿ, ಪಾದುಕೆ ಸಮರ್ಪಣೆ

5

ಕುದ್ರೋಳಿ: ಮಂಗಳೂರು ದಸರಾಕ್ಕೆ ಚಾಲನೆ

10

ನವರಾತ್ರಿಯ ವೈಭವೋತ್ಸವ…. ಮಾತೃ – ಪ್ರಕೃತಿ – ಶಕ್ತಿ ಉಪಾಸನೆ

5

ಮಂಗಳೂರು: ದಸರಾ ದರ್ಶಿನಿಗೆ ಚಾಲನೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.