ಕುಕ್ಕುಂದೂರು ಗ್ರಾಮಸ್ಥರಿಗೆ ಸೇವೆಗಳು ದೂರ!
33 ಸದಸ್ಯರಿರುವಲ್ಲಿ ಪೂರ್ಣಕಾಲಿಕ ಪಿಡಿಒ ಇಲ್ಲ
Team Udayavani, Sep 30, 2021, 5:45 AM IST
ಕಾರ್ಕಳ: ಗ್ರಾಮದ ಜನತೆ ಪ್ರತಿಯೊಂದು ಆಗು ಹೋಗುಗಳಿಗೂ ಅವಲಂಬಿಸಿರುವುದು ಗ್ರಾ.ಪಂ. ಕಚೇರಿಯನ್ನು. ಆದರೆ ಅಲ್ಲಿ ಅಭಿವೃದ್ಧಿ ಅಧಿಕಾರಿಯೇ ಇಲ್ಲದಿದ್ದರೆ ಗ್ರಾಮ ಅಭಿವೃದ್ಧಿ ಕಾಣುವುದು ಹೇಗೆ? ಇಂಥ ಪರಿಸ್ಥಿತಿ ಕುಕ್ಕುಂದೂರು ಗ್ರಾಮಸ್ಥರಿಗೂ ಎದುರಾಗಿದೆ.
ಅತೀ ಹೆಚ್ಚು ಪಂ. ಸದಸ್ಯರು
ಕಾರ್ಕಳ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 33 ಮಂದಿ ಸದಸ್ಯರನ್ನು ಹೊಂದಿರುವ ಗ್ರಾ.ಪಂ. ಎನ್ನುವ ಹೆಗ್ಗಳಿಕೆ ಕುಕ್ಕುಂದೂರಿಗಿದೆ. 2010-11ರ ಜನಗಣತಿ ಪ್ರಕಾರ 13,180 ಜನಸಂಖ್ಯೆ, ಕಾರ್ಕಳ ಪುರಸಭೆಗೆ ಹೊಂದಿಕೊಂಡಂತೆ ಕುಕ್ಕುಂದೂರು ಗ್ರಾ.ಪಂ. ಕಚೇರಿ ಇದೆ. ಈ ಕಚೇರಿಯ ಸೇವಾ ವ್ಯಾಪ್ತಿ 33 ವಾರ್ಡ್‌ಗಳಿಗೆ ವಿಸ್ತರಿಸಿಕೊಂಡಿದೆ. ಆದರೆ ಕಚೇರಿಯಲ್ಲಿ ಪೂರ್ಣಕಾಲಿಕ ಪಿಡಿಒ ಅಧಿಕಾರಿಯಿಲ್ಲ. ಆಸುಪಾಸಿನ ಊರುಗಳಿಂದ ಕಚೇರಿ ಕೆಲಸಕ್ಕೆ ಬರುವ ನಾಗರಿಕರಿಗೆ ಇದರಿಂದ ತೊಂದರೆಯಾಗಿದೆ.
ಪೂರ್ಣಕಾಲಿಕ ಅಭಿವೃದ್ಧಿ ಅಧಿಕಾರಿ ಯಿಲ್ಲದೆ ಅಭಿವೃದ್ಧಿ ಕಾರ್ಯಗಳು ಕುಂಠಿತ ವಾಗಿದೆ ಎಂಬ ದೂರು ಇದೆ. ಸರಕಾರದ ವಿವಿಧ ಯೋಜನೆಯ ನೂರಕ್ಕೂ ಅಧಿಕ ಅರ್ಜಿಗಳು ಪಂಚಾಯತ್‌ಗೆ ಬರುತ್ತವೆ. ಇಲ್ಲಿ ಪ್ರಭಾರವಿರುವ ಪಿಡಿಒ ಅವರಿಗೆ ಪಳ್ಳಿ ಗ್ರಾ.ಪಂ. ಜವಾಬ್ದಾರಿಯೂ ಇದೆ. ವಾರದಲ್ಲಿ ಮೂರು ದಿನ ಕುಕ್ಕುಂದೂರು ಪಂಚಾಯತ್‌ನಲ್ಲಿ ಇವರು ಲಭ್ಯರಿರುತ್ತಾರೆ. ಆದರೆ ಅವರು ಎರಡೂ ಕಡೆ ಕೆಲಸ ನಿಭಾಯಿಸುವುದರಿಂದ ಅವರ ಮೇಲಿನ ಒತ್ತಡ ಹೆಚ್ಚಾಗಿದೆ. ಇಲ್ಲಿ ಪೂರ್ಣಾವಧಿ ಪಿಡಿಒ ಅಗತ್ಯ ಎನ್ನುತ್ತಾರೆ ಗ್ರಾಮಸ್ಥರು.
ಇದನ್ನೂ ಓದಿ:ಸಚಿವ ಎಸ್.ಟಿ.ಸೋಮಶೇಖರ್ ಗೆ ಧನ್ಯವಾದ ತಿಳಿಸಿದ ಎಸ್.ಎಂ.ಕೃಷ್ಣ
ಪೂರ್ಣಾವಧಿ ಪಿಡಿಒ ಇಲ್ಲದೆ ವಾರ್ಡ್‌ಗಳಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ವೇಗದಲ್ಲಿ ಸಾಗಲು ಸಾಧ್ಯವಾಗುತ್ತಿಲ್ಲ. ಪಿಡಿಒ ಇಲ್ಲದಿರುವುದರಿಂದ ಹಲವು ಅಭಿವೃದ್ಧಿ ಕಾಮಗಾರಿ, ರಸ್ತೆ, ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ ಇನ್ನಿತರ ಅಭಿವೃದ್ಧಿ ಕಾರ್ಯ ಕುಂಠಿತ ವಾಗಬಹುದು ಎನ್ನುವ ಆರೋಪವೂ ಇದೆ.
ಪಂಚಾಯತ್ ವತಿಯಿಂದ ಸುಮಾರು ನೂರರಷ್ಟು ಸೇವೆಗಳಿವೆ. ಗ್ರಾ. ಪಂ.ನಲ್ಲಿ ಮನೆ ತೆರಿಗೆ, ಕಟ್ಟಡ ತೆರಿಗೆಯಿಂದ ಆರಂಭಗೊಂಡು ಪಡಿತರ ಚೀಟಿ, ಯೋಜನೆಗಳ ಅನುಷ್ಠಾನ, ಗ್ರಾ.ಪಂ. ಸಭೆ, ವಾರ್ಡ್ ಸಭೆ, ಕುಡಿಯುವ ನೀರಿನ ಯೋಜನೆ, ಸ್ವಚ್ಛತೆ ಸಭೆ, ಅದರ ಅನುಷ್ಠಾನ ಹೀಗೆ 20ಕ್ಕೂ ಅಧಿಕ ಪಂಚಾಯತ್‌ನ ನೇರ ಸೇವೆಗಳು ಇರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಪಹಣಿಯಂತಹ ಕಂದಾಯವೂ ಸೇರಿ ಇನ್ನಷ್ಟು ಸೇವೆಗಳು ಪಂಚಾಯತ್ ವ್ಯಾಪ್ತಿಗೆ ಸೇರಿಸಲ್ಪಟ್ಟಿವೆ. ಎಲ್ಲ ಸೇವೆಗಳನ್ನು ಸಮರ್ಪಕವಾಗಿ ಗ್ರಾಮಸ್ಥರಿಗೆ ನೀಡಬೇಕಾದರೆ ಪಿಡಿಒ ಪೂರ್ಣಕಾಲಿಕ ವಾಗಿ ಕಚೇರಿಯಲ್ಲಿ ಇರಬೇಕು. ಇವರೇ ಇಲ್ಲದಿದ್ದರೆ ಇವೆಲ್ಲ ಸೇವೆಗಳನ್ನು ಪಡೆಯುವುದಾದರೂ ಹೇಗೆ ಎನ್ನುವ ಪ್ರಶ್ನೆ ಇಲ್ಲಿನ ಗ್ರಾಮಸ್ಥರಿಂದ ಕೇಳಿಬಂದಿದೆ.
ನಿತ್ಯ ಅಲೆದಾಟ
ತಾಲೂಕಿನ ಅತೀ ದೊಡ್ಡ ಗ್ರಾ.ಪಂ. ಕುಕ್ಕುಂದೂರು ಆಗಿದೆ. ಪಿಡಿಒ, ಕಾರ್ಯದರ್ಶಿ ಹುದ್ದೆಗಳು ಇಲ್ಲಿ ಇರಬೇಕು. ಆದರೆ ಪಿಡಿಒ ಹುದ್ದೆ ಪ್ರಭಾರ ಆಗಿದೆ. ಈ ಹಿನ್ನೆಲೆಯಲ್ಲಿ ಪಂಚಾಯತ್‌ಗೆ ಅತ್ಯಗತ್ಯವಾಗಿ ಪಿಡಿಒ ನೇಮಕಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಸಾರ್ವಜನಿಕರು ಡೋರ್ ನಂಬರ್, ಸ್ಥಳ ಪರಿಶೀಲನೆ ಸೇರಿದಂತೆ ಪಂಚಾಯತ್‌ಗೆಸಂಬಂಧಿಸಿದ ಹಲವು ಸೇವೆಗಳಿಗೆ ನಿತ್ಯ ಅಲೆದಾಟ ನಡೆಸುತ್ತಿರುತ್ತಾರೆ.
ಸದ್ಯದಲ್ಲೇ ನೇಮಕ ನಿರೀಕ್ಷೆ
ಪೂರ್ಣಾವಧಿ ಪಿಡಿಒ ಇಲ್ಲದೆ ಸಮಸ್ಯೆಯಾಗುತ್ತಿರುವುದು ಸತ್ಯ. ಈ ಬಗ್ಗೆ ಗಮನಹರಿಸಿ, ಪ್ರಯತ್ನಿಸಿದ್ದೇವೆ. ಮುಂದಿನ ಕೆಲವು ದಿನಗಳಲ್ಲಿ ಪೂರ್ಣಾವಧಿ ಪಿಡಿಒ ಆಗಮಿಸುವ ನಿರೀಕ್ಷೆಯಲ್ಲಿದ್ದೇವೆ.
-ಶಶಿಮಣಿ, ಕುಕ್ಕುಂದೂರು
ಗ್ರಾ.ಪಂ. ಅಧ್ಯಕ್ಷೆ
– ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.