ಪಾಕ್ ಜೈಲಿನ ಚಿತ್ರ ಹಿಂಸೆ ಬಿಚ್ಚಿಟ್ಟ ಕುಲದೀಪ್ ಸಿಂಗ್
Team Udayavani, Dec 28, 2021, 7:05 AM IST
ಶ್ರೀನಗರ: “ಪಾಕಿಸ್ಥಾನದವರ ಕೈಗೆ ಸಿಗುವ ಭಾರತೀಯರನ್ನು ಮನುಷ್ಯರಂತೆ ನೋಡದೆ, ಪ್ರಾಣಿಗಳಂತೆ ಶಿಕ್ಷಿಸಲಾಗುತ್ತದೆ.. ಆ ನರಕದಿಂದ ಬಿಡುಗಡೆಗೊಂಡ ನಾನು ಪುಣ್ಯವಂತ.’ ಹೀಗೆಂದು ಪಾಕ್ ಜೈಲಿನಲ್ಲಿ 29 ವರ್ಷ ಶಿಕ್ಷೆ ಅನುಭವಿಸಿ, ಇತ್ತೀಚೆಗೆ ಮನೆಗೆ ಮರಳಿರುವ ಭಾರತೀಯ ಕುಲದೀಪ್ ಸಿಂಗ್ ಹೇಳಿದ್ದಾರೆ.
“1992ರಲ್ಲಿ ಗೊತ್ತಿಲ್ಲದೆ ಗಡಿ ದಾಟಿದ್ದ ನನಗೆ ಪಾಕಿಸ್ಥಾನಿ ಸೇನೆ ಚಿತ್ರಹಿಂಸೆ ಕೊಟ್ಟಿತು. ಜೈಲಿನಲ್ಲಿ ಮೂರೂವರೆ ವರ್ಷಗಳ ಕಾಲ ಸಾಕಷ್ಟು ಹಿಂಸಿಸಲಾಯಿತು. ಅವರ ಕಣ್ಣಿಗೆ ಕಾಣುವ ಎಲ್ಲ ಭಾರತೀಯರನ್ನೂ ಬೇಹುಗಾರಿಕೆ ಆರೋಪದ ಮೇಲೆ ಜೈಲಿಗೆ ಹಾಕುತ್ತಾರೆ. ಈಗ ಆ ಜೈಲಿನಲ್ಲಿ ಜಮ್ಮು ಮೂಲದ ಇಬ್ಬರಿದ್ದಾರಷ್ಟೇ. ಉಳಿದವರೆಲ್ಲ, ಅಲ್ಲಿನ ಅಧಿಕಾರಿಗಳ ಕಾಟದಿಂದಾಗಿ ಮಾನಸಿಕ ಅಸ್ವಸ್ಥರಾಗಿ ಮಾನಸಿಕ ಆರೋಗ್ಯ ಆಸ್ಪತ್ರೆ ಸೇರಿದ್ದಾರೆ’ ಎಂದು ಅವರು ಹೇಳಿದ್ದಾರೆ.
ನನ್ನ ಪುಣ್ಯ ಚೆನ್ನಾಗಿತ್ತು. ನನ್ನ ಕುಟುಂಬ ದವರು ಅವರಿವರ ಕಾಲು ಹಿಡಿದು, ನನ್ನನ್ನು ಮನೆಗೆ ವಾಪಸು ಕರೆತಂದಿದ್ದಾರೆ ಎಂದು ಕುಲದೀಪ್ ಕಣ್ಣೀರಿಡುತ್ತ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.