Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು
Team Udayavani, Nov 16, 2024, 6:40 AM IST
ಕುಂಬಳೆ: ಉದ್ಯೋಗ ಭರವಸೆ ನೀಡಿ ಹಲವರಿಗೆ ವಂಚಿಸಿದ ಆರೋಪ ಎದುರಿಸಿ ಪ್ರಸ್ತುತ ಬಂಧಿಸಲ್ಪಟ್ಟು ಜೈಲಿನಲ್ಲಿರುವ ಸಚಿತಾ ರೈ ವಿರುದ್ಧ ಮತ್ತೂಂದು ವಂಚನೆ ಕೇಸು ದಾಖಲಾಗಿದೆ. ಮಗಳಿಗೆ ಉದ್ಯೋಗ ಕೊಡಿಸುವಂತೆ ಸಚಿತಾ ರೈಗೆ 12 ಲಕ್ಷ ರೂ. ನೀಡಿ ಮೋಸ ಹೋಗಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಬದಿಯಡ್ಕ ಪಳ್ಳತ್ತಡ್ಕ ನೆಲ್ಲಿಕ್ಕಳ ನಿವಾಸಿ ಅರವಿಂದಾಕ್ಷನ್ ಅವರ ಪತ್ನಿ ಸರೋಜಿನಿ (50) ಅವರಿಂದ ಪುತ್ರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ
ಸಚಿತಾ ರೈ 12.70 ಲಕ್ಷ ರೂ. ಪಡೆದಿದ್ದಳು.
ಸರೋಜಿನಿ ತನ್ನ ಚಿನ್ನಾಭರಣವನ್ನು ಅಡವಿರಿಸಿ ಹಣ ನೀಡಿದ್ದು, ಬಳಿಕ ಸಚಿತಾಳ ಮೋಸ ಅರಿವಾಯಿತು. ಇದೇ ಕೊರಗಿನಲ್ಲಿ ಸರೋಜಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತಿ ಅರವಿಂದಾಕ್ಷನ್ ಪೊಲೀಸ ರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.