ಅಶಕ್ತ ಕುಟುಂಬಕ್ಕೆ ಕುಂದಾಪುರ ಎ.ಎಸ್‌.ಪಿ. ತುರ್ತು ಸ್ಪಂದನೆ

ಉದಯವಾಣಿಗೆ ಕರೆ ಮಾಡಿ ಅಳಲು ತೋಡಿಕೊಂಡ ವ್ಯಕ್ತಿಗೆ ನೆರವು

Team Udayavani, Apr 18, 2020, 5:45 AM IST

ಅಶಕ್ತ ಕುಟುಂಬಕ್ಕೆ ಕುಂದಾಪುರ ಎ.ಎಸ್‌.ಪಿ. ತುರ್ತು ಸ್ಪಂದನೆ

ಬೈಂದೂರು: ಕೋವಿಡ್ 19 ನಿಯಂತ್ರಿಸಲು ಹೇರಿರುವ ಲಾಕ್‌ಡೌನ್‌ನಿಂದಾಗಿ ಕೆಲವರಿಗೆ ಸಮಸ್ಯೆಯೂ ಆಗಿದೆ. ಬೈಂದೂರು ತಾಲೂಕಿನ ಉಳ್ಳೂರು-11ರಲ್ಲಿ ಶೆಡ್‌ನ‌ಲ್ಲಿ ವಾಸವಿದ್ದ ಕುಟುಂಬಕ್ಕೆ ದಿಕ್ಕೇ ತೋಚದೆ ಇದ್ದಾಗ ನೆರವಿಗೆ ಬಂದದ್ದು ಉದಯವಾಣಿ ಪತ್ರಿಕೆ. ಪತ್ರಿಕೆಯಲ್ಲಿದ್ದ ದೂರ ವಾಣಿ ಸಂಖ್ಯೆಗೆ ಫೋನ್‌ ಮಾಡಿ ಬೇರೆ ಪ್ರದೇಶಕ್ಕೆ ಹೋಗಲು ಸಹಾಯ ಮಾಡುವಂತೆ ಕೇಳಿದ್ದು,ಇದನ್ನು ಕುಂದಾಪುರ ಎಎಸ್‌ಪಿ ಅವರ ಗಮನಕ್ಕೆ ತಂದಾಗ ಅವರು ತುರ್ತಾಗಿ ಸ್ಪಂದಿಸಿದ್ದಾರೆ.

ಉಳ್ಳೂರಿನಲ್ಲಿ ಪ್ಲಾಸ್ಟಿಕ್‌ ಶೆಡ್‌ನ‌ಲ್ಲಿ 67ರ ಹರೆ ಯದ ವೃದ್ಧೆ ಮೂಕಾಂಬಿಕೆ ತನ್ನ ಪುತ್ರ ಈಶ್ವರ್‌ (47) ಜತೆ ವಾಸಿಸುತ್ತಿದ್ದರು. ಇವರು ಮೂಲತಃ ಬೈಂದೂರಿನವರಾಗಿದ್ದರೂ ಹಲವು ವರ್ಷಗಳ ಹಿಂದೆ ಹೊಸನಗರದಲ್ಲಿ ಬಾಡಿಗೆ ಮನೆಯಲ್ಲಿದ್ದರು. ನಾಲ್ಕು ತಿಂಗಳ ಹಿಂದೆ ಮತ್ತೆ ಬೈಂದೂರು ತಾಲೂಕಿಗೆ ಬಂದು ಇಲ್ಲಿ ನೆಲೆಸಿ ದ್ದರು. ಕೆಲವು ದಿನಗಳ ಹಿಂದೆ ಮೂಕಾಂಬಿಕೆ ಅವರು ಬಿದ್ದು ಕಾಲು ಮುರಿದಿತ್ತು.

ಚಿಕಿತ್ಸೆಗೆಂದು ಕುಂದಾಪುರ ಆಸ್ಪತ್ರೆಗೆ ಹೋದಾಗ ಪರೀಕ್ಷಿಸಿದ ವೈದ್ಯರು ಉಡುಪಿಗೆ ಹೋಗಬೇಕು ಎಂದಿದ್ದರು. ಆದರೆ ಈಗ ಕೋವಿಡ್ 19 ಇರುವುದರಿಂದ ಸ್ವಲ್ಪ ಸಮಯ ಬಿಟ್ಟು ಹೋಗುವಂತೆ ತಿಳಿಸಿದ್ದರು. ಹೀಗಾಗಿ ಮನೆಯಲ್ಲೆ ತಾತ್ಕಾಲಿಕ ವ್ಯವಸ್ಥೆ ಮಾಡಲು ತಿಳಿಸಿ ದರು.ಈ ನಡುವೆ ಕಾಲುನೋವು ಉಲ್ಬಣಗೊಂಡು ಮೇಲೆಳಲಾಗದ ಪರಿಸ್ಥಿತಿ ಉಂಟಾಯಿತು. ಹೀಗಾಗಿ ಮಗ ಮನೆಬಿಟ್ಟು ಹೊರ ಹೋಗಲಾಗದ ಸ್ಥಿತಿ ನಿರ್ಮಾಣವಾಯಿತು.ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿಯಲ್ಲಿ ಇತ್ತು.

ಪತ್ರಿಕೆಗೆ ಕರೆ
ಹೀಗಿರುವಾಗ ಉದಯವಾಣಿ ಪತ್ರಿಕೆ ಇವರಿಗೆ ಸಿಕ್ಕಿದ್ದು ಅದರಲ್ಲಿರುವ ನಂಬರ್‌ಗೆ ಕರೆ ಮಾಡಿ ತಾವು ಮೊದಲು ಇದ್ದ ಹೊಸನಗರಕ್ಕೆ ತೆರಳಲು ಪೊಲೀಸರಿಂದ ಅನುಮತಿ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು. ಅಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸುವ ಬಯಕೆಯನ್ನು ಈಶ್ವರ್‌ ವ್ಯಕ್ತಪಡಿಸಿದ್ದರು. ಕೂಡಲೇ ಕುಂದಾಪುರ ಎ.ಎಸ್‌.ಪಿ. ಹರಿರಾಮ್‌ ಶಂಕರ್‌ಗೆ ವಾಸ್ತವತೆ ತಿಳಿಸಲಾಯಿತು. ತತ್‌ಕ್ಷಣ ಸ್ಪಂದಿಸಿದ ಅವರು ಬೈಂದೂರು ಠಾಣಾಧಿಕಾರಿ ಸಂಗೀತಾ ಮತ್ತು ಸಿಬಂದಿ ಯನ್ನು ಅವರ ಮನೆಗೆ ಪರಿಶೀಲನೆಗಾಗಿ ಕಳುಹಿಸಿದರು. ಇವರ ಶೋಚ ನೀಯ ಪರಿಸ್ಥಿತಿ ಕಂಡ ಠಾಣಾಧಿಕಾರಿಗಳು ಸ್ವಲ್ಪ ಆರ್ಥಿಕ ನೆರವು ಹಾಗೂ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿ ಕೂಡ ನೀಡಿದರು. ಮಾತ್ರವಲ್ಲದೆ ಮೂಕಾಂಬಿಕೆ ಅವರ ಚಿಕಿತ್ಸೆಗೆ ವೈದ್ಯಕೀಯ ನೆರವು ಒದಗಿ ಸುವ ವ್ಯವಸ್ಥೆ ಮಾಡಿ ಉಡುಪಿಯ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ. ಉಡುಪಿಯ ಕೆಲವು ದಾನಿಗಳು ಕೂಡ ಇವರ ನೆರವಿಗೆ ಧಾವಿಸಿದ್ದಾರೆ.

ತುರ್ತು ನೆರವು
ಲಾಕ್‌ಡೌನ್‌ನಿಂದ ಪರಿಸ್ಥಿತಿ ತುಂಬಾ ಕಷ್ಟದಲ್ಲಿತ್ತು. ತಾಯಿಗೆ ಸೂಕ್ತ ಚಿಕಿತ್ಸೆ ಕೊಡಲು ಹೊಸನಗರಕ್ಕೆ ತೆರಳಬೇಕಿತ್ತು. ನಿತ್ಯ ಊಟಕ್ಕೂ ಕಷ್ಟ ಪಡಬೇಕಾದ ಸಂದರ್ಭದಲ್ಲಿ ಪತ್ರಿಕೆ ಹಾಗೂ ಆರಕ್ಷಕ ಇಲಾಖೆ ನನಗೆ ನೆರವು ನೀಡಿದೆ. ಇದರಿಂದ ನನಗೆ ಬಹಳ ಉಪಕಾರವಾಗಿದೆ.
-ಈಶ್ವರ ಉಳ್ಳೂರು.

ತುರ್ತು ನೆರವು
ಮಾಹಿತಿ ಪಡೆದ ತತ್‌ಕ್ಷಣ ಬೈಂದೂರು ಠಾಣಾಧಿಕಾರಿಯವರನ್ನು ಸ್ಥಳಕ್ಕೆ ಕಳುಹಿಸಿ ವಿವರ ಪಡೆದಿದ್ದೇನೆ. ಮಾತ್ರವಲ್ಲದೆ ತುರ್ತು ನೆರವು ನೀಡಲಾಗಿದ್ದು ಅವರಿಗೆ ಅವಶ್ಯವಿರುವ ಎಲ್ಲ ನೆರವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ತಾಯಿಯ ಚಿಕಿತ್ಸೆಗೆ ಯಾವುದೇ ರೀತಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು ಮತ್ತು ಲಾಕ್‌ಡೌನ್‌ನಿಂದ ಅವರ ಕುಟುಂಬಕ್ಕೆ ಆಹಾರ ತೊಂದರೆಯಾಗದಂತೆ ಇಲಾಖೆ ನೋಡಿಕೊಳ್ಳುತ್ತದೆ. ದಾನಿಗಳ ಮಾನವೀಯ ಸ್ಪಂದನೆಯ ನಿರೀಕ್ಷೆ ಕೂಡ ಇದೆ.
-ಹರಿರಾಮ್‌ ಶಂಕರ್‌, ಎ.ಎಸ್‌.ಪಿ. ಕುಂದಾಪುರ

ಟಾಪ್ ನ್ಯೂಸ್

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

9

Udupi: ವಾಹನ ದಟ್ಟಣೆ ನಿಯಂತ್ರಣ ಕ್ರಮ ಎಷ್ಟು ಫ‌ಲಪ್ರದ?

8

Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.