ಕುಂದಾಪುರ ಬಹುತ್ವ ಸಂಸ್ಕೃತಿಯ ಪ್ರತೀಕ
ಕುಂದಾಪ್ರ ಕನ್ನಡಿಗರಿಗೆ ಟ್ವೀಟ್ ಮೂಲಕ ಶುಭಕೋರಿದ ಸಿಎಂ
Team Udayavani, Jul 18, 2023, 5:19 AM IST
ಕುಂದಾಪುರ: ವೈಶಿಷ್ಟ್ಯ ಪೂರ್ಣ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳ ಕಡಲ ತಡಿಯ ಕುಂದಾಪುರ ಈ ನೆಲದ ಬಹುತ್ವ ಸಂಸ್ಕೃತಿಯ ಪ್ರತೀಕ. ತಮ್ಮ ಭಾಷೆಮತ್ತು ಬದುಕನ್ನು ಜಗತ್ತಿಗೆ ಪರಿಚಯಿಸಲು ಪ್ರತೀ ವರ್ಷ ಆಸಾಡಿ ಅಮಾವಾಸ್ಯೆಯನ್ನು ಕುಂದಾ ಪ್ರ ಕನ್ನಡ ದಿನವನ್ನಾಗಿ ಆಚರಿಸಲಾ ಗುತ್ತಿದೆ. ಕುಂದಾಪ್ರ ಕನ್ನಡವೆಂಬ ಚೆಂದದ ಕನ್ನಡ ಮಾತನಾಡುವವರೆಲ್ಲರಿಗೂ ಶುಭಾಶಯ ಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಶುಭಕೋ ರಿದ್ದಾರೆ.
ಬೊಮ್ಮಾಯಿ ಹಾರೈಕೆ
ಕುಂದಾಪ್ರ ಕನ್ನಡ ಭಾಷೆ, ಅದರ ಉಚ್ಚಾರ, ಶೈಲಿ, ಬದುಕು ಎಲ್ಲವೂ ವೈಶಿಷ್ಟéಪೂರ್ಣ. ಕುಂದಾಪುರದ ಆಹಾರ ಪದ್ಧತಿಯೂ ವಿಭಿನ್ನ. ಹೀಗಾಗಿ ಹೊಟೇಲು ಉದ್ಯಮದಲ್ಲಿ ಕುಂದಾ ಪುರಿಗರದ್ದು ಮೇಲುಗೈ. ವಿಶ್ವ ಕುಂದಾಪ್ರ ಕನ್ನಡ ದಿನದಂದು ಸಮಸ್ತ ಕುಂದಾಪುರದ ಜನತೆಗೆ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಹಾರೈಸಿದ್ದಾರೆ.
ಸೊಬಗಿನ ಭಾಷೆ: ಹೆಬ್ಬಾಳ್ಕರ್
ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕನ್ನಡ ಭಾಷೆ ಯ ಅತ್ಯಂತ ಸರಳ ಹಾಗೂ ಸಂಕ್ಷಿಪ್ತ ರೂಪವೆನಿಸಿರುವ ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ವರ್ಣಿಸಲಾಗದು. ಈ ಭಾಷೆಗೆ ತನ್ನದೇ ಆದ ವೈಶಿಷ್ಟéವಿದೆ. ಕುಂದಾಪ್ರ ಕನ್ನಡ ಭಾಷಿಕರು ರಾಜ್ಯ ರಾಜಧಾನಿ ಸೇರಿದಂತೆ ಜಗತ್ತಿನ ವಿವಿಧೆಡೆ ನೆಲೆ ನಿಂತಿದ್ದಾರೆ. ಈ ಮಧ್ಯೆಯೂ ತಮ್ಮ ಭಾಷೆಗೊಂದು ಅಸ್ತಿತ್ವ ಬೇಕೆಂದು ಈ ದಿನವನ್ನಾಗಿ ಆಚರಿಸುತ್ತಿದ್ದು, ಕುಂದಾಪ್ರ ಕನ್ನಡವನ್ನು ಪೂಜಿಸಿ, ಆರಾಧಿಸುವ ಎಲ್ಲ ಕುಂದಾಪ್ರ ಭಾಷಿಕರಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
ವಿವಿಧೆಡೆ ಆಚರಣೆ
ಆಸಾಡಿ ಅಮಾವಾಸ್ಯೆ ದಿನವಾದ ಸೋಮವಾರ ಕುಂದಾಪುರ, ಬೈಂದೂರು, ಕಾರ್ಕಳ ಸಹಿತ ರಾಜ್ಯದ ವಿವಿಧೆಡೆ ಕುಂದಾ ಪ್ರ ಕನ್ನಡಿಗರು ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಸಂಭ್ರಮದಿಂದ ಆಚರಿಸಿದರು.
ಕುಂದಾಪುರ, ಕೋಟ, ಬೀಜಾಡಿ, ಸಿದ್ದಾಪುರ, ಕೊಲ್ಲೂರು, ಉಪ್ಪುಂದ, ಬೈಂ ದೂರು, ಹಂದಾಡಿ, ತೆಕ್ಕಟ್ಟೆ, ತಲ್ಲೂರು, ಕುಳುಂಜೆ-ಶಂಕರನಾರಾಯಣ, ಕಾರ್ಕಳ, ಧಾರವಾಡ ಸೇರಿದಂತೆ ಹಲವೆಡೆ ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆ ಗಳು ಆಚರಿಸಿದರು. ನಗೆ ಹಬ್ಬ, ನೃತ್ಯ, ಸಂಗೀತ ಸ್ಪರ್ಧೆ, ಕೆಸರುಗದ್ದೆ ಕ್ರೀಡಾ ಕೂಟಗಳು ನಡೆದವು. ಹಿಂದಿನ ಕಾಲದ ತಿಂಡಿ-ತಿನಿಸುಗಳ ಪ್ರದರ್ಶನ, ಸಾಧಕರಿಗೆ ಸಮ್ಮಾನ, ಹೂವಿನಕೋಲು ಪ್ರಾತ್ಯಕ್ಷಿಕೆ, ಕುಂದ ಗನ್ನಡದ ಗಾದೆಗಳ ಪ್ರಾತ್ಯಕ್ಷಿಕೆ ನಡೆಯಿತು.
ಹಲವರಿಂದ ಶುಭಾಶಯ
ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಮಂಕಾಳ ವೈದ್ಯ, ಎನ್.ಎಸ್. ಭೋಸರಾಜು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಸಹಿತ ಹಲವರು ಕುಂದಾಪ್ರ ದಿನಾಚರಣೆಗೆ ಶುಭಕೋರಿದ್ದಾರೆ.
ಆ. 16ರಂದು ಸಮುದ್ರ ಸ್ನಾನ
ಆಷಾಢ ಅಮಾವಾಸ್ಯೆ ದಿನ ಕುಂದಾಪುರ ಭಾಗದ ಮರವಂತೆ, ಸೋಮೇಶ್ವರ, ಮತ್ತಿತರ ಕಡೆಗಳಲ್ಲಿ ಸಮುದ್ರ ಸ್ನಾನ ನಡೆಯುವುದು ವಾಡಿಕೆ. ಆದರೆ ಈ ಬಾರಿ ಈ ತಿಂಗಳಲ್ಲಿ 2 ಅಮಾವಾಸ್ಯೆಗಳು ಬರುವುದರಿಂದ ಈ ಭಾಗದಲ್ಲಿ ಆ. 16ರಂದು ಸಮುದ್ರ ಸ್ನಾನ ಆಚರಣೆ ನಡೆಯಲಿದೆ. ಮರವಂತೆ ಶ್ರೀ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲೂ ಅದೇ ದಿನ ಕರ್ಕಾಟಕ ಜಾತ್ರೆ ನೆರವೇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.