Kundapur Taluk ಯುವ ಬಂಟರ ಸಂಘ: ಯುವಶಕ್ತಿಯ ಬಲಿಷ್ಠ ರಾಷ್ಟ್ರ ಭಾರತ: ಡಾ| ಬಲ್ಲಾಳ್
ಡಾ| ಮಧುಕರ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಪ್ರದಾನ
Team Udayavani, Aug 19, 2024, 12:41 AM IST
ತೆಕ್ಕಟ್ಟೆ: ಕುಂದಾಪುರ ತಾಲೂಕು ಯುವ ಬಂಟರ ಸಂಘವು ಒಂದು ದಶಕದಿಂದೀಚೆಗೆ ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಸಂಘಟನಾತ್ಮಕವಾಗಿ ಸಾಗಿದಾಗ ಮಾತ್ರ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎಂದು ಮಾಹೆ ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಅವರು ರವಿವಾರ ಯುವ ಮೆರಿಡಿಯನ್ ಹಾಲ್‌ನಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ “ಆಸರೆ’ ಯೋಜನೆಯಡಿ ತಂದೆ ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ನವಚೇತನ ಯೋಜನೆಯಡಿ ಅಂಗ ವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ವಿತರಣೆ ಮತ್ತು ಯುವ ಸಾಧಕರಿಗೆ ಸಮ್ಮಾನ, ದಿ|ಡಾ| ಮಧುಕರ ಶೆಟ್ಟಿ ಐಪಿಎಸ್ ಸಂಸ್ಮರಣ ಪ್ರಶಸ್ತಿ-2024 ಹಾಗೂ ದಿ| ಎಂ. ಗೋಪಾಲಕೃಷ್ಣ ಶೆಟ್ಟಿ ಸಂಸ್ಮರಣ ಪ್ರಗತಿಪರ ಕೃಷಿಕ ಪ್ರಶಸ್ತಿ ಪ್ರದಾನ ಹಾಗೂ 2024-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಶೇ. 52 ಯುವ ಜನರಿದ್ದು, ಇಡೀ ವಿಶ್ವದಲ್ಲಿಯೇ ಯುವ ಶಕ್ತಿಯನ್ನು ಒಳಗೊಂಡ ಬಲಿಷ್ಠ ರಾಷ್ಟ್ರ ಭಾರತವಾಗಿದೆ. ಯುವ ಜನಾಂಗಕ್ಕೆ ಒಳ್ಳೆಯ ಶಿಕ್ಷಣ ನೀಡಿ, ಒಳ್ಳೆಯ ಉದ್ಯೋಗ ಸಿಗುವ ವ್ಯವಸ್ಥೆ ಮಾಡಿದಾಗ ದೇಶ ಮುಂದುವರಿಯಲು ಸಾಧ್ಯ. ಬಾಲಕಿಯರಿಗೆ ಶಿಕ್ಷಣ ನೀಡಿದರೆ ಇಡೀ ಸಮಾಜಕ್ಕೆ ಶಿಕ್ಷಣ ನೀಡಿದಂತೆ ಎಂದರು.
ಡಾ| ಬಲ್ಲಾಳ್ ಅವರನ್ನು ಗೌರವಿಸ ಲಾಯಿತು. ಭಾರತೀಯ ರೈಲ್ವೇ ಟ್ರಾಫಿಕ್‌ಗೆ ಸೇರಿದ ಕರ್ನಾಟಕದ ಮೊದಲ ಮಹಿಳೆ ನೈಋತ್ಯ ಬೆಂಗಳೂರು ರೈಲ್ವೇ ವಲಯದ ಹಿರಿಯ ವಿಭಾಗೀಯ ಪರಿಸರ ಅಧಿಕಾರಿ ಪ್ರಿಯಾ ಶೆಟ್ಟಿ ಅವರಿಗೆ ದಿ| ಡಾ| ಮಧುಕರ ಶೆಟ್ಟಿ, ಐಪಿಎಸ್‌ಸಂಸ್ಮರಣ ಪ್ರಶಸ್ತಿ-2024 ಪ್ರಶಸ್ತಿಯನ್ನು ಮುಂಬಯಿ ಬಂಟರ ಸಂಘಟ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ನೀಡಿ ಗೌರವಿಸಿದರು.
ಬಂಟಕೋಡು ಪ್ರಗತಿಪರ ಕೃಷಿಕ ಬೈಲೂರು ಶಿವರಾಮ ಶೆಟ್ಟಿ ಹಾಗೂ ಸಿಂಗಾರಿ ಶೆಟ್ಟಿ ದಂಪತಿಗೆ ದಿ| ಎಂ. ಗೋಪಾಲಕೃಷ್ಣ ಶೆಟ್ಟಿ ಸಂಸ್ಮರಣ ಪ್ರಗತಿಪರ ಕೃಷಿಕ ಪ್ರಶಸ್ತಿಯನ್ನು ಸರಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಬಿ.ಎನ್. ಶೆಟ್ಟಿ ನೀಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಎಚ್‌ಪಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ ಮಣಿಪಾಲದ ಚೇರ್‌ಮನ್ ಹರಿಪ್ರಸಾದ್ ರೈ, ಕುಂದಾಪುರ ಬಂಟರ ಯಾನೆ ನಾಡವರ ಮಾತೃಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಬೆಂಗಳೂರಿನ ಆರ್.ಪಿ. ಶೆಟ್ಟಿ ಇನ್‌ಫಾ ಪ್ರೈ.ಲಿ.ನ ರಾಘವೇಂದ್ರ ಪಿ. ಶೆಟ್ಟಿ, ಚಿಕ್ಕಮಗಳೂರು ಹೊಟೇಲ್ ಸನ್ ರೈಸ್ ಮಾಲಕ ರಾಜೀವ ಆರ್. ಶೆಟ್ಟಿ, ಉದ್ಯಮಿಗಳಾದ ಬಿ. ಹರ್ಷ ಶೆಟ್ಟಿ ಹೆಬ್ರಿ, ವಿಜಯ ಎನ್. ಶೆಟ್ಟಿ ಸಂಸಾಡಿ ರಾಮದುರ್ಗಾ, ಗೌರವಾಧ್ಯಕ್ಷ ಬಿ. ಉದಯ ಕುಮಾರ್ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ನಿಯೋಜಿತ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು, ಸಂಘದ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಕುಂದಾಪುರ ತಾಲೂಕು ಯುವ ಬಂಟರ ಸಂಘದ 2024-26ನೇ ಸಾಲಿನ ಅಧ್ಯಕ್ಷರಾಗಿ ನಿತೀಶ್ ಶೆಟ್ಟಿ ಬಸ್ರೂರು, ಗೌರವಾಧ್ಯಕ್ಷ ರಾಗಿ ವತ್ಸಲಾ ದಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಮುರಳೀಧರ ಶೆಟ್ಟಿ ಹುಯ್ನಾರು, ಕೋಶಾಧಿಕಾರಿಯಾಗಿ ಭರತ್‌ರಾಜ್ ಶೆಟ್ಟಿ ಜಾಂಬೂರು ಆಯ್ಕೆಯಾದರು.
ಕಾರ್ಯಕ್ರಮದ ಸಂಚಾಲಕ ಡಾ| ಚೇತನ್ ಶೆಟ್ಟಿ ಸ್ವಾಗತಿಸಿ, ಮಾಜಿ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ ವಂದಿಸಿದರು. ಗೌರವಾಧ್ಯಕ್ಷ ಬಿ. ಉದಯ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ಕೋಶಾಧಿಕಾರಿ ಅಕ್ಷಯ್ ಹೆಗ್ಡೆ, ರಾಜೀವ ಶೆಟ್ಟಿ, ಮೊಳಹಳ್ಳಿ ಪ್ರಶಸ್ತಿ ಪತ್ರ ವಾಚಿಸಿ, ಉಪನ್ಯಾಸಕಿ ರೇಷ್ಮಾ ಶೆಟ್ಟಿ, ಶಿಕ್ಷಕ ವಿಶ್ವನಾಥ ಶೆಟ್ಟಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.