Kundapura; ಕ್ರೆಡಿಟ್ ಕಾರ್ಡ್ ವಿವರ ಪಡೆದು ಲಕ್ಷಾಂತರ ರೂ. ವಂಚನೆ
Team Udayavani, Mar 16, 2024, 11:50 PM IST
ಕುಂದಾಪುರ: ಹಂಗಳೂರಿನ ಪ್ರತಾಪ್ (45) ಅವರಿಂದ ಆನ್ಲೈನ್ ಮೂಲಕ ಯಾರೋ ಅಪರಿಚಿತರು ಕ್ರೆಡಿಟ್ ಕಾರ್ಡ್ ವಿವರ ಪಡೆದು 2.12 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ.
ಪ್ರತಾಪ್ ಅವರು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಅವರಿಗೆ ಗೂಗಲ್ನಿಂದ ರಿವಾರ್ಡ್ ಪಾಯಿಂಟ್ ಲಿಂಕ್ ಬಂದಿದೆ.
ಅದನ್ನು ತೆರೆದ ಅವರು ಕ್ರೆಡಿಟ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿದರು. ಕೇವಲ 15 ನಿಮಿಷಗಳಲ್ಲೇ ಕ್ರೆಡಿಟ್ ಕಾರ್ಡ್ ಖಾತೆಯಿಂದ ಮೊದಲಿಗೆ 98 ಸಾವಿರ ರೂ. ಹಾಗೂ ಅನಂತರ 1.14 ಲಕ್ಷ ರೂ.ಗಳನ್ನು ಅಪರಿಚಿತರು ಅವರ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.