Kundapura; ಆತಿಥ್ಯಕ್ಕೆ ಉಡುಪಿ ಹೆಸರು: ಸಚಿವ ಸತೀಶ್‌ ಜಾರಕಿಹೊಳಿ

ಕುಂದಾಪುರ ಶಾಸ್ತ್ರಿ ಸರ್ಕಲ್‌ ಸಮೀಪ "ಯುವ ಮನೀಶ್‌' ಹೊಟೇಲ್‌ ಆರಂಭ

Team Udayavani, Jan 28, 2024, 10:58 PM IST

Kundapura; ಆತಿಥ್ಯಕ್ಕೆ ಉಡುಪಿ ಹೆಸರು: ಸಚಿವ ಸತೀಶ್‌ ಜಾರಕಿಹೊಳಿ

ಕುಂದಾಪುರ: ಪ್ರವಾ ಸೋದ್ಯಮಕ್ಕೆ ವಿಪುಲ ಅವಕಾಶಗಳನ್ನು ಹೊಂದಿರುವ ಉಡುಪಿ, ಕುಂದಾಪುರವು ವಿಶ್ವದೆಲ್ಲೆಡೆ ಹೊಟೇಲ್‌ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿರುವ ಪ್ರವಾಸಿ ತಾಣಗಳ ಅಭಿವೃದ್ಧಿಗೆ, ಅದಕ್ಕೆ ಪೂರಕವಾಗಿರುವ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸರಕಾರ ಬದ್ಧವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಅವರು ರವಿವಾರ ಜೆ.ಎನ್‌.ಎಸ್‌. ಕಂಪೆನಿ ಹಾಗೂ ಯುವ ಮೆರಿಡಿಯನ್‌ ಸಮೂಹ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿ ಗಾಂಧಿ ಮೈದಾನದ ಎದುರು ನಿರ್ಮಾಣಗೊಂಡ “ಯುವ ಮನೀಶ್‌’ ಹೊಟೇಲನ್ನು ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.

ಘಟಪ್ರಭಾದ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ| ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವ ಚನ ನೀಡಿ, ಭಗವಂತನ ಅನುಗ್ರಹ, ಆಶೀರ್ವಾದ ಹಾಗೂ ಒಳ್ಳೆಯ ದುಡಿಮೆ, ಪರಿಶ್ರಮ ವಿದ್ದರೆ ಯಶಸ್ಸು ಸಾಧ್ಯ ಅನ್ನುವುದಕ್ಕೆ ಜಯಶೀಲ ಶೆಟ್ಟರು ನಿದರ್ಶನ ಎಂದರು.

ಉದ್ಯೋಗ ಸೃಷ್ಟಿ
“ಕೋಸ್ಟಲ್‌ – ಟೆಂಪಲ್‌ ಟೂರಿಸಂ’ಗೆ ಅಗಾಧ ಅವಕಾಶವಿರುವ ಕರಾವಳಿ ಜಿಲ್ಲೆಗಳಲ್ಲಿ ಇಂತಹ ಸುಸಜ್ಜಿತ ಹೊಟೇಲ್‌ಗ‌ಳ ಆವಶ್ಯಕತೆ ಬಹಳಷ್ಟಿದೆ. ಇದರಿಂದ ಉದ್ಯೋಗ ಸೃಷ್ಟಿ, ಊರಿನ ಅಭಿವೃದ್ಧಿ ಆಗಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಮಾತನಾಡಿ, ಕರಾವಳಿ-ಪಶ್ಚಿಮ ಘಟ್ಟಗಳ ನಡುವಿನ ಕುಂದಾಪುರಕ್ಕೆ ಇದೊಂದು ಅತ್ಯುತ್ತಮ ಹೊಟೇಲ್‌ ಆಗಲಿ ಎಂದು ಹಾರೈಸಿದರು.
ಶಾಸಕರಾದ ಬಾಲಚಂದ್ರ ಜಾರಕಿ ಹೊಳಿ, ಕಿರಣ್‌ ಕುಮಾರ್‌ ಕೊಡ್ಗಿ, ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ. ಶ್ರೀನಿವಾಸ ಶುಭ ಹಾರೈಸಿದರು.

ದುಬಾೖಯ ಫಾರ್ಚೂನ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ ಎಂಡಿ ವಕ್ವಾಡಿ ಪ್ರವೀಣ್‌ ಕುಮಾರ್‌ ಶೆಟ್ಟಿ, ಬೆಂಗಳೂರಿನ ರೆಡಿಸ್ಸನ್‌ ಬ್ಲೂ ಆರ್ಟಿಯಾ ನಿರ್ದೇಶಕ ಕೆ. ನಾಗರಾಜ್‌, ರಾಜಕೀಯ ಮುಖಂಡ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಜೆ.ಎನ್‌.ಎಸ್‌. ಕಂಪೆನಿಯ ಮನೀಶ್‌ ಜೆ. ಶೆಟ್ಟಿ, ಯುವ ಮೆರಿಡಿಯನ್‌ ಸಮೂಹ ಸಂಸ್ಥೆಗಳ ಬೈಲೂರು ವಿನಯ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ಯುವ ಮೆರಿಡಿಯನ್‌ ಸಮೂಹದ ಆಡಳಿತ ಮುಖ್ಯಸ್ಥ ಬೈಲೂರು ಉದಯಕುಮಾರ್‌ ಶೆಟ್ಟಿ ಪ್ರಸ್ತಾವನೆಗೈದು, ಜೆ.
ಎನ್‌.ಎಸ್‌. ಕಂಪೆನಿ ಆಡಳಿತ ಮುಖ್ಯಸ್ಥ ಜಯಶೀಲ ಎನ್‌. ಶೆಟ್ಟಿ ಸ್ವಾಗತಿಸಿದರು.ಕೆ.ಸಿ. ರಾಜೇಶ್‌ ನಿರ್ವಹಿಸಿದರು.

“ಕರಾವಳಿ – ಬೆಂಗಳೂರು ಕಾರಿಡಾರ್‌ ರಸ್ತೆ’
ಉಡುಪಿ ಪ್ರವಾಸೋದ್ಯಮಕ್ಕೆ ಯೋಗ್ಯವಾಗಿದೆ. ತೊಡಕುಗಳನ್ನೆಲ್ಲ ನಿವಾರಿಸಿ ಕೊಂಡು ಅಭಿವೃದ್ಧಿಪಡಿಸಲಾಗುವುದು. ಇಲ್ಲಿನ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಉಡುಪಿ-ಮಂಗಳೂರು- ಬೆಂಗಳೂರು ನಡುವೆ “ಎಕ್ಸ್‌ಪ್ರೆಸ್‌ ಹೈವೇ’ ರೀತಿಯ ಕಾರಿಡಾರ್‌ ರಸ್ತೆ ನಿರ್ಮಾಣಕ್ಕೆ ರೂಪರೇಖೆ ಸಿದ್ಧಪಡಿಸಲಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಹೇಳಿದರು.

 

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

16-kumbashi

Ganesh Chaturthi; ಆನೆಗುಡ್ಡೆ: ಸಂಭ್ರಮದ ಶ್ರೀ ವಿನಾಯಕ ಚತುರ್ಥಿ; ಹರಿದು ಬಂದ ಭಕ್ತ ಸಮೂಹ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.