ಕುಣಿಗಲ್: ಕೆಂಪೇಗೌಡರಿಗೆ ಅಪಮಾನವಾದ ಸ್ಥಳದಲ್ಲಿ ಪ್ರತಿಮೆ ನಿರ್ಮಾಣ: ಕೆಂಪೇಗೌಡ ಸೇನೆ ತಿರ್ಮಾನ
Team Udayavani, Jun 30, 2022, 12:44 PM IST
ಕುಣಿಗಲ್: ನಾಡಪ್ರಭು ಕೆಂಪೇಗೌಡರಿಗೆ ಅಪಮಾನ ಮಾಡಿದ ಕುಣಿಗಲ್ ಪಟ್ಟಣದ ಗ್ರಾಮ ದೇವತೆ ಸರ್ಕಲ್ ಬಳಿ ಕೆಂಪೇಗೌಡ ಅವರ ಪ್ರತಿಮೆ ನಿರ್ಮಾಣಕ್ಕೆ ಕೆಂಪೇಗೌಡ ಸೇನಾ ಸಮಿತಿ ತಿರ್ಮಾನಿಸಿದೆ,
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇನೆಯ ಕಾರ್ಯಧ್ಯಕ್ಷ ಕೊತ್ತಗೆರೆ ಚಂದ್ರಪ್ಪ, ಅಧ್ಯಕ್ಷ ಜಗದೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್ ಜಗದೀಶ್ ಅವರ ಜಂಟಿ ಪತ್ದಿಕಾಗೋಷ್ಠಿಯಲ್ಲಿ ಮಾತನಾಡಿ, ಜೂ 27 ರಂದು ನಡೆದ ಕೆಂಪೇಗೌಡ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಗೌಡರ ಪ್ಲೇಕ್ಸ್ ಅನ್ನು ಪುರಸಭೆಯ ಕಸದ ವಾಹನಕ್ಕೆ ಕಟ್ಟಿ ಮೆರವಣಿಗೆ ಮಾಡಿದ್ದನ್ನು ಖಂಡಿಸಿ, ಇದಕ್ಕೆ ಪ್ರತಿಯಾಗಿ ಯಾವ ಸ್ಥಳದಲ್ಲಿ ಕೆಂಪೇಗೌಡ ಅವರಿಗೆ ಅಪಮಾನ ಮಾಡಲಾಯಿತೋ ಆ ಸ್ಥಳದಲ್ಲಿ ಮೂರು ತಿಂಗಳ ಒಳಗೆ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿ ಪ್ರತಿಮೆಯನ್ನು ಅದಿಚುಂಚನಗಿರಿ ಸಂಸ್ಥಾನ ಮಠದ ನಿರ್ಮಾಲನಂದ ಸ್ವಾಮಿಜಿ ಅವರಿಂದ ಅನಾವರಣಗೊಳಿಸುವ ಜತೆಗೆ ಅದ್ದೂರಿಯಾಗಿ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಮಾಡಲಾಗುವುದು ಎಂದರು. ಇದಕ್ಕೆ ತಾಲೂಕು ಆಡಳಿತ ಹಾಗೂ ಪುರಸಭೆ ಅವಕಾಶ ನೀಡಬೇಕೆಂದು ಹಾಗೂ ನಿರ್ಮಾಣ ಕ್ಕೆ ಜಾಗ ಒದಗಿಸಬೇಕೆಂದು ಒತ್ತಾಯಿಸಿದರು.
ಶಾಸಕರ ಲೋಪದಿಂದ ಅವ್ಯವಸ್ಥೆ: ಶಾಸಕ ಡಾ.ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತಿರ್ಮಾನದಂತೆ ಕಾರ್ಯಕ್ರಮ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿತ್ತು. ಇದನ್ನು ನಿರ್ವಹಿಸುವಲ್ಲಿ ಅವರು ವಿಫಲರಾಗಿದ್ದಾರೆ ಈ ಎಲ್ಲಾ ಅವ್ಯವಸ್ಥೆಗೆ ಶಾಸಕರೇ ನೇರ ಹೊಣೆ ಎಂದು ಆರೋಪಿಸಿದರು.
ಅಮಾಯಕರನ್ನು ಬಲಿ ಕೊಡಬೇಡಿ : ಕಾರ್ಯಕ್ರಮದಲ್ಲಿ ಕಸದ ಗಾಡಿಗೆ ಬ್ಯಾನರ್ ಹಾಗೂ ಬಾಳೇ ಕಂದು ಕಟ್ಟಿದ ಅಮಾಯಕ ಚಾಲಕರನ್ನು ಸೇವೆಯಿಂದ ಅಮಾನತು ಮಾಡಲು ಅಧಿಕಾರಿಗಳು ಹೊರಟ್ಟಿದ್ದಾರೆ. ಇದು ನಡೆಯಬಾರದು ಎಂದು ತಿಳಿಸಿದರು.
ಹೋರಾಟಕ್ಕೆ ಇಂತಿಶ್ರೀ : ಲೋಪದೋಷ ಸಂಬಂದ ಅಧಿಕಾರಿಗಳು ಕ್ಷೇಮೆ ಕೊರಿದ ಹಿನ್ನಲೆಯಲ್ಲಿ ಮಾಡಲು ಉದ್ದೇಶಿಸಿದ ಹೋರಾಟವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್ ಹರೀಶ್, ಮಾಜಿ ಸದಸ್ಯರಾದ ಜಯರಾಮಯ್ಯ, ಈ ಮಂಜು, ದಲಿತ ಮುಖಂಡ ವರದರಾಜು, ಗ್ರಾ.ಪಂ ಸದಸ್ಯ ತರಿಕೆರೆ ಪ್ರಕಾಶ್ ಮಾಜಿ ಸದಸ್ಯ ಮೂರ್ತಿ, ಮುಖಂಡರಾದ ತೋಪೇಗೌಡ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.